ಮೇರಠ (ಉತ್ತರ ಪ್ರದೇಶ) – ಯಾವ ಮುಸಲ್ಮಾನರಿಗೆ ದೇಶದಲ್ಲಿ ನಿರ್ಮಿಸಲಾದ ಕೊರೋನಾ ಲಸಿಕೆಯ ಮೇಲೆ ವಿಶ್ವಾಸವಿಲ್ಲವೋ ಅವರು ಪಾಕಿಸ್ತಾನಕ್ಕೆ ಹೋಗಲಿ, ಎಂದು ಬಿಜೆಪಿ ಶಾಸಕ ಸಂಗೀತ ಸೋಮ್ ಹೇಳಿದ್ದಾರೆ. ಅವರು ‘ಟೈಮ್ಸ್ ನೌ’ ಈ ಸುದ್ಧಿವಾಹಿನಿಯೊಂದಿಗೆ ಮಾತನಾಡುತ್ತಿದ್ದರು. ಕೊರೋನಾದ ಲಸಿಕೆಯಲ್ಲಿ ಹಂದಿಯ ಕೊಬ್ಬನ್ನು ಬೆರೆಸಿದ್ದಾರೆ ಎಂದು ಕೆಲವು ಮುಸ್ಲಿಂ ಸಂಘಟನೆಗಳು ಆರೋಪಿಸಿವೆ. ಈ ಬಗ್ಗೆ ಶಾಸಕ ಸಂಗೀತ ಸೋಮ್ ಅವರನ್ನು ಪ್ರಶ್ನಿಸಲಾಯಿತು. ಆ ಸಮಯದಲ್ಲಿ ಅವರು ಈ ಮೇಲಿನ ಉತ್ತರವನ್ನು ನೀಡಿದರು.
'Some Muslims do not trust Indian scientists, can go to Pakistan': Sangeet Somhttps://t.co/cUbnmJgx6C
— The Indian Express (@IndianExpress) January 13, 2021
ಶಾಸಕ ಸಂಗೀತ ಸೋಮ್ ಅವರು ತಮ್ಮ ಮಾತನ್ನು ಮುಂದುವರೆಸುತ್ತಾ, ಕೆಲವು ಮುಸ್ಲಿಮರಿಗೆ ದೇಶದ ಮೇಲೆ, ದೇಶದ ವಿಜ್ಞಾನಿಗಳ ಮೇಲೆ, ಪೊಲೀಸರ ಮೇಲೆ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ವಿಶ್ವಾಸವಿಲ್ಲ, ಇದು ದುರದೃಷ್ಟಕರ ಎಂದು ಹೇಳಿದರು. ಅವರ ಆತ್ಮ ಪಾಕಿಸ್ತಾನದಲ್ಲಿದೆ. ಅವರು ಪಾಕಿಸ್ತಾನಕ್ಕೆ ಹೋಗಬೇಕು, ನಮ್ಮ ವಿಜ್ಞಾನಿಗಳ ಕೆಲಸವನ್ನು ಪ್ರಶ್ನಿಸಬಾರದು.