ದಾವಣಗೆರೆಯಲ್ಲಿ ಮುಸಲ್ಮಾನ ಮಹಿಳೆಯರು ಹಿಂದೂ ಅಂಗಡಿಯಿಂದ ವಸ್ತು ಖರೀದಿಸಿದರೆಂದು ಮತಾಂಧರಿಂದ ಅವಾಚ್ಯ ಬೈಗುಳ
ಮುಂಬರುವ ಈದ್‌ಗಾಗಿ ಹಿಂದೂಗಳ ಅಂಗಡಿಯಿಂದ ವಸ್ತುಗಳನ್ನು ಖರೀದಿಸಿದ್ದರಿಂದ ಮತಾಂಧರು ಮುಸಲ್ಮಾನ ಮಹಿಳೆಯರಿಗೆ ಅವಾಚ್ಯವಾಗಿ ನಿಂದಿಸಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ. ಅದರಲ್ಲಿ ಮತಾಂಧರು ಆ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿ ಅವರ ಕೈಯಲ್ಲಿರುವ ಬಟ್ಟೆಯ ಕೈಚೀಲಗಳನ್ನು ಕಸಿದುಕೊಂಡು ಎಸೆಯುತ್ತಿರುವುದು ಕಾಣಿಸುತ್ತಿದೆ.