ಹಲಾಲ್ ಪ್ರಮಾಣೀಕೃತ ಉತ್ಪನ್ನಗಳ ವಿರುದ್ಧದ #BoycottHalalProduct ಈ ‘ಟ್ರೆಂಡ್’ ‘ರಾಷ್ಟ್ರೀಯ ಟ್ರೆಂಡ್’ನಲ್ಲಿ ಎರಡನೇ ಸ್ಥಾನ !

ಹಲಾಲ್ ಪ್ರಮಾಣೀಕೃತ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಟ್ವಿಟ್ಟರ್‌ನಲ್ಲಿ ಆಗ್ರಹ

ಮುಂಬೈ – ಜಗತ್ತಿನ ಕಟ್ಟರ್ ಸಮುದಾಯವು ಪ್ರತಿಯೊಂದು ಆಹಾರ ಪದಾರ್ಥ ಅಥವಾ ವಸ್ತುಗಳು ಇಸ್ಲಾಂ ಪ್ರಕಾರ ಮಾನ್ಯತೆ ಪಡೆದ ಅಂದರೆ ‘ಹಲಾಲ್’ ಇರುವುದನ್ನು ಒತ್ತಾಯಿಸುತ್ತಿದೆ. ಇದಕ್ಕಾಗಿ ಆಹಾರ ಪದಾರ್ಥ ಅಥವಾ ವಸ್ತುಗಳ ಮಾರಾಟಕ್ಕೆ ‘ಹಲಾಲ್ ಪ್ರಮಾಣಪತ್ರ’ ಪಡೆಯುವುದು ಕಡ್ಡಾಯಗೊಳಿಸಲಾಗಿದೆ. ಹಿಂದೆ ಇದು ಮಾಂಸಾಹಾರಕ್ಕೆ ಮಾತ್ರ ಸೀಮಿತವಾಗಿತ್ತು; ಆದರೆ ಈಗ ಇದನ್ನು ಆಹಾರ ಪದಾರ್ಥ, ಸೌಂದರ್ಯವರ್ಧಕಗಳು, ಔಷಧಿಗಳು, ಚಿಕಿತ್ಸಾಲಯಗಳು, ಗೃಹೋಪಯೋಗಿ ವಸ್ತುಗಳು ಇತ್ಯಾದಿಗಳಿಗೆ ಅನ್ವಯಿಸಲಾಗಿದೆ. ಈ ಪ್ರಮಾಣಪತ್ರವನ್ನು ನೀಡುವ ‘ಜಾಮಿಯತ್-ಉಲೆಮಾ-ಎ-ಇಸ್ಲಾಂ’ ಈ ಸಂಘಟನೆಯು ಜಿಹಾದಿ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿರುವ ೭೦೦ ಆರೋಪಿಗಳ ಪ್ರಕರಣಗಳ ಖಟ್ಲೆ ನಡೆಸುತ್ತಿದೆ. ಅದಕ್ಕಾಗಿ ಹಲಾಲ್ ಪ್ರಮಾಣಪತ್ರಗಳಿಂದ ಸಿಗುವ ಹಣವನ್ನು ಬಳಸಲಾಗುತ್ತಿದೆ’ ಎಂಬುದು ಬೆಳಕಿಗೆ ಬಂದಿದೆ. ಈ ಪಿತೂರಿಯ ಬಗ್ಗೆ ಹಿಂದೂ ಧರ್ಮಪ್ರೇಮಿಗಳಿಗೆ ತಿಳಿದ ನಂತರ, ಅವರು ಟ್ವಿಟರ್ ನಲ್ಲಿ #BoycottHalalProduct ಹೆಸರಿನಲ್ಲಿ ‘ಹ್ಯಾಶ್‌ಟ್ಯಾಗ್’ ಪ್ರಾರಂಭಿಸಿದರು. ಪರಿಣಾಮವಾಗಿ ‘ಟ್ರೆಂಡ್’ ರಾಷ್ಟ್ರೀಯ ಟ್ರೆಂಡ್‌ದಲ್ಲಿ ಮೊದಲು ನಾಲ್ಕನೇ ಮತ್ತು ನಂತರ ಮೂರನೇ ನಂತರ ಎರಡನೇಯ ಸ್ಥಾನದಲ್ಲಿತ್ತು. ಈ ‘ಟ್ರೆಂಡ್’ನಲ್ಲಿ ೧ ಲಕ್ಷ ಜನರು ಟ್ವೀಟ್ಸ್ ಮಾಡಿದ್ದಾರೆ.

೧. ಈ ಟ್ವೀಟ್ಸ್‌ಗಳಲ್ಲಿ ಧರ್ಮಪ್ರೇಮಿಗಳು, ಹಲಾಲ್ ಉತ್ಪನ್ನಗಳನ್ನು ಮಾರಾಟ ಮಾಡಿ ಶರಿಯಾಕ್ಕನುಸಾರ ಪಾಲನೆ ಮಾಡಲು ಹೇಳಲಾಗುತ್ತಿದೆ ಎಂದು ಹೇಳಿದರು. ಭಾರತದ ಆರ್ಥಿಕತೆಗೆ ಸಮನಾಂತರವಾಗಿ ಹಲಾಲ್ ಆರ್ಥಿಕತೆಯನ್ನು ಸೃಷ್ಟಿಸುವ ಪಿತೂರಿ ಇದೆ.

೨. ಅನೇಕ ಧರ್ಮಪ್ರೇಮಿಗಳು ಇಂತಹ ಉತ್ಪನ್ನಗಳನ್ನು ತೆಗೆದುಕೊಳ್ಳುವುದಿಲ್ಲ ಎಂದು ಹೇಳುತ್ತ ಈ ಪ್ರಮಾಣಪತ್ರದ ಬಗ್ಗೆ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.