ವಿಶ್ವ ಆರೋಗ್ಯ ಸಂಸ್ಥೆಯು ‘ಕೊರೋನಾದ ಸೋಂಕಿಗೆ ಮನುಷ್ಯರು ಹೇಗೆ ತುತ್ತಾದರು ?’ ಎಂಬುದನ್ನು ಪತ್ತೆ ಹಚ್ಚಬೇಕು. – ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಭಾರತದೊಂದಿಗೆ ೬೨ ಸದಸ್ಯ ರಾಷ್ಟ್ರಗಳ ಠರಾವು

ಜೆನೆವಾ (ಸ್ವಿರ್ಝಲ್ಯಾಂಡ್) – ‘ಪ್ರಾಣಿಗಳಿಂದ ಹರಡುವ ಕೊರೋನಾದ ರೋಗಾಣು ಮನುಷ್ಯರು ಹೇಗೆ ತುತ್ತಾದರು ?’, ಇದರ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ)ಯು ನಿಷ್ಪಕ್ಷಪಾತವಾಗಿ ಪತ್ತೆಹಚ್ಚಬೇಕೆಂಬ ಠರಾವನ್ನು ಈ ಸಂಘಟನೆಯ ಸದಸ್ಯರಾಗಿರುವ ೬೨ ದೇಶಗಳು ಒಪ್ಪಿಗೆ ನೀಡಿವೆ. ಈ ಠರಾವನ್ನು ಸಂಘಟನೆಯ ವಾರ್ಷಿಕ ಸಭೆಯಲ್ಲಿ ಮಂಡಿಸಲಾಗುವುದು. ಭಾರತವೂ ಈ ನಿರ್ಣಯಕ್ಕೆ ಬೆಂಬಲ ಸೂಚಿಸಿದೆ. ಯುರೋಪಿಯನ್ ಮಹಾಸಂಘ ಮತ್ತು ಆಸ್ಟ್ರೇಲಿಯಾದ ಆಶ್ರಯದಲ್ಲಿ ಮಂಡಿಸಲಾದ ಠರಾವನ್ನು ಭಾರತ ಮೊದಲ ಬಾರಿಗೆ ಬಹಿರಂಗವಾಗಿ ಬೆಂಬಲಿಸಿದೆ. ಚೀನಾದ ವುಹಾನ್‌ನಿಂದ ಹರಡಿದ ಈ ವೈರಸ್ ವಿಶ್ವದಾದ್ಯಂತ ಇದುವರೆಗೆ ೩ ಲಕ್ಷಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿದೆ.

೧. ಈ ಠರಾವಿನ ಕರಡು ಪ್ರತಿಯಲ್ಲಿ ಚೀನಾ ಮತ್ತು ವುಹಾನ್ ನಗರವನ್ನು ನೇರವಾಗಿ ಉಲ್ಲೇಖಿಸುವುದಿಲ್ಲ; ಆದರೆ, ‘ಈ ರೋಗಾಣುವಿನ ಉತ್ಪತ್ತಿ ಎಲ್ಲಿ ಆಯಿತು ಮತ್ತು ಅದು ಮನುಷ್ಯರಿಗೆ ಹೇಗೆ ಹರಡಿತು ?’ ಇದರ ಬಗ್ಗೆ ತನಿಖೆಯನ್ನು ಮಾಡುವಂತೆ ಆಗ್ರಹಿಸಲಾಗಿದೆ.

೨. ಕೊರೋನಾದ ಬಗ್ಗೆ ಮಾಹಿತಿ ಸಿಕ್ಕಿದ ನಂತರ ವಿಶ್ವ ಆರೋಗ್ಯ ಸಂಸ್ಥೆಯು ತೆಗೆದುಕೊಂಡ ನಿರ್ಧಾರಗಳು ಮತ್ತು ಅವುಗಳ ಕಾರ್ಯನಿರ್ವಹಿಸುವ ಪಡೆಗಳು ಎಷ್ಟು ಪರಿಣಾಮಕಾರಿಯಾಗಿತ್ತು ? ಇದರ ಬಗ್ಗೆಯೂ ತನಿಖೆ ನಡೆಸಬೇಕೆಂದು ಈ ಠರಾವಿನ ಪರವಾಗಿರುವ ದೇಶಗಳೂ ಒತ್ತಾಯಿಸಿವೆ.