ಭೋಪಾಲ್‌ನಲ್ಲಿ ೬೦ ಕ್ಕೂ ಹೆಚ್ಚು ವಿದೇಶಿ ತಬಲಿಗೀಗಳ ಬಂಧನ

ಕೇವಲ ಬಂಧಿಸದೇ ಅವರಿಂದ ದಂಡವನ್ನೂ ವಸೂಲಿ ಮಾಡಬೇಕು !

ಭೋಪಾಲ : ವೀಸಾ ನಿಯಮಗಳನ್ನು ಉಲ್ಲಂಘಿಸಿದ ಪ್ರಕರಣದಲ್ಲಿ ತಬಲಿಗೀ ಜಮಾಅತ್‌ನ ನಿಜಾಮುದ್ದೀನ್ ಮಾರ್ಕಜ್‌ನಲ್ಲಿ ಭಾಗವಹಿಸಿದ ೬೦ ಕ್ಕೂ ಹೆಚ್ಚು ವಿದೇಶಿ ಪ್ರಜೆಗಳನ್ನು ಪೊಲೀಸರು ಬಂಧಿಸಿದ್ದಾರೆ. ಭೋಪಾಲನ ವಿವಿಧ ಪೊಲೀಸ ಠಾಣೆಗಳಲ್ಲಿ ಅವರ ವಿರುದ್ಧ ಏಳು ಅಪರಾಧಗಳು ದಾಖಲಾಗಿವೆ. ಈ ತಬಲೀಗಿಗಳ ಮೇಲೆ ಭಾ.ದಂ.ಸಂ. ಕಲಂ ೧೮೮, ೨೬೯, ೨೭೦, ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ ಮತ್ತು ಇತರ ಕಾನೂನುಗಳ ಅಂತರ್ಗತದಲ್ಲಿ ಅವರನ್ನು ಬಂಧಿಸಲಾಗಿದೆ. ಈ ವಿದೇಶಿಯರಿಗೆ ಕರೋನಾ ಸೋಂಕಾದಾಗ ಅವರಿಗೆ ಚಿಕಿತ್ಸೆ ನೀಡಲಾಯಿತು. ಚೇತರಿಸಿಕೊಂಡ ನಂತರ ಅವರನ್ನು ಈಗ ಬಂಧಿಸಲಾಗಿದೆ. ಈ ತಬಲೀಗಿಗಳು ಕಿರ್ಗಿಸ್ತಾನ, ಉಜ್ಬೇಕಿಸ್ತಾನ, ಕಝಾಕಿಸ್ತಾನ, ಕಝಾಕಸ್ತಾನ, ಟಾಂಜಾನಿಯಾ, ದಕ್ಷಿಣ ಆಫ್ರಿಕಾ ಮತ್ತು ಮ್ಯಾನ್ಮಾರ್‌ನ ನಿವಾಸಿಗಳಾಗಿದ್ದಾರೆ.