ಭಾರತದಲ್ಲಿ ಸಂಚಾರ ನಿಷೇಧವನ್ನು ಉಲ್ಲಂಘಿಸಿ ಹೆಚ್ಚಿನ ಸಂಖ್ಯೆಯಲ್ಲಿ ಮಸೀದಿಗಳಲ್ಲಿ ಸೇರಿ ನಮಾಜನ್ನು ಓದುವ, ಅದನ್ನು ವಿರೋಧಿಸಿದಾಗ ಪೊಲೀಸರ ಮೇಲೆ ಹಲ್ಲೆ ಮಾಡುವ, ರಂಜಾನ್ ಸಮಯದಲ್ಲಿ ಬೀದಿಗಳಲ್ಲಿ ಜನದಟ್ಟಣೆ ಮಾಡುವ, ಇಫ್ತಾರ್ ಔತಣ ಕೂಟವನ್ನು ನಡೆಸುವ ಇಂತಹವರಿಗೆ ಭಾರತ ಸರಕಾರವು ಇದೇ ರೀತಿಯ ಶಿಕ್ಷೆಯನ್ನು ನೀಡಬೇಕು, ಎಂದು ಹೆಚ್ಚಿನ ಭಾರತೀಯರಿಗೆ ಅನಿಸುತ್ತದೆ !
ದೋಹಾ (ಕತಾರ್) – ಕತಾರ್‌ನಲ್ಲಿನ ಕೊರೋನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮುಖಕ್ಕೆ ಮಾಸ್ಕ್ ಧರಿಸದ ನಾಗರಿಕರಿಗೆ ಮೂರು ವರ್ಷ ಜೈಲು ಶಿಕ್ಷೆ ಮತ್ತು ೪೧ ಲಕ್ಷ ೭೦ ಸಾವಿರ ದಂಡ ವಿಧಿಸಲಾಗುವುದು. ಸಂಪೂರ್ಣ ಜಗತ್ತಿನಲ್ಲಿ ಇಲ್ಲಿಯವರೆಗೆ ಇಂತಹ ಶಿಕ್ಷೆಯನ್ನು ನೀಡುವ ನಿಯಮವನ್ನು ಯಾವುದೇ ದೇಶವು ಮಾಡಿಲ್ಲ. ಇಲ್ಲಿನ ಅಧಿಕಾರಿಗಳು, ‘ರಂಜಾನ್ ಸಮಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುವ ಕಾರಣ ಈ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ’ ಎಂದು ಹೇಳಿದ್ದಾರೆ. (ರಂಜಾನ್‌ದಿಂದಾಗಿ ಇಂತಹ ಕಾನೂನು ಇಸ್ಲಾಮಿಕ್ ರಾಷ್ಟ್ರಗಳಲ್ಲಿ ಜಾರಿಗೆ ತರಬಹುದಾದರೇ, ಭಾರತದಲ್ಲಿ ಏಕೆ ಇಲ್ಲ ? -ಸಂಪಾದಕರು)
೧. ಕತಾರ್‌ನಲ್ಲಿ ಕೊರೋನಾದ ಹಾವಳಿ ದೊಡ್ಡಪ್ರಮಾಣದಲ್ಲಿ ಹರಡುತ್ತಿರುವುದರಿಂದ ಅದನ್ನು ತಡೆಯಲು ಈ ರೀತಿಯ ಕಾನೂನುನ್ನು ಜಾರಿಗೆ ತರಲಾಗಿದೆ. ಕತಾರ್ ಜನಸಂಖ್ಯೆ ಕೇವಲ ೨೭ ಲಕ್ಷ ಇದೆ; ಆದರೂ ಅಲ್ಲಿ ಕೊರೋನಾದ ಸೋಂಕು ೩೦ ಸಾವಿರಕ್ಕೂ ಹೆಚ್ಚು ಜನರಿಗೆ ತಗಲಿದೆ.
೨. ಆಫ್ರಿಕಾದ ದೇಶವಾದ ಚಾಡ್‌ನಲ್ಲಿ ಮುಖಕ್ಕೆ ಮಾಸ್ಕ್ ಹಾಕದಿರುವವರಿಗೆ ೧೫ ದಿನಗಳ ಕಾಲ ಸೆರೆಮನೆ ಶಿಕ್ಷೆ ವಿಧಿಸಿದರೆ, ಮೊರಕ್ಕೋದಲ್ಲಿ ಮೂರು ತಿಂಗಳ ಶಿಕ್ಷೆ ವಿಧಿಸಲಾಗಿದೆ.