ನುಸುಳುಖೋರ ರೋಹಿಂಗ್ಯಾ ಮುಸಲ್ಮಾನರಿಂದ ದೆಹಲಿಯಲ್ಲಿ ೫.೨ ಎಕರೆ ಭೂಮಿಯ ಮೇಲೆ ಅತಿಕ್ರಮಣ

ಆಮ್ ಆದ್ಮಿ ಪಕ್ಷದ ಶಾಸಕ ಅಮಾನತುಲ್ಲಾ ಖಾನ್ ಅವರು ನುಸುಳುಖೋರ ರೋಹಿಂಗ್ಯಾದವರಿಗೆ ಆಧಾರ್ ಕಾರ್ಡ್‌ಗಳನ್ನು ನಿರ್ಮಿಸಿ ಅವರಿಗೆ ವಾಸ್ತವ್ಯವನ್ನು ನೀಡಿದ್ದಾರೆಂದು ಆರೋಪ

ಇದರಿಂದ ನುಸುಳುಖೋರರಿಗೆ ಯಾರು ಸಹಾಯ ಮಾಡುತ್ತಿದ್ದಾರೆ ?’ ಎಂಬುದು ಗಮನಕ್ಕೆ ಬರುತ್ತದೆ. ನುಸುಳುಖೋರರ ವಿರುದ್ಧ ಕ್ರಮ ತೆಗೆದುಕೊಳ್ಳುವಾಗ, ಅವರಿಗೆ ಸಹಾಯ ಮಾಡುವವರ ಮೇಲೆಯೂ ಕ್ರಮ ತೆಗೆದುಕೊಳ್ಳಬೇಕು !

ಸೌಜನ್ಯ : ನ್ಯೂಸ್ ಟ್ರೆಂಡ್

ನವ ದೆಹಲಿ : ದೆಹಲಿಯ ಮದನಪುರ ಖಾದರ ಪ್ರದೇಶದಲ್ಲಿ ನುಸುಳುಖೋರ ರೋಹಿಂಗ್ಯಾ ಮುಸಲ್ಮಾನರು ೫.೨ ಎಕರೆ ಭೂಮಿಯನ್ನು ಅತಿಕ್ರಮಣ ಮಾಡಿದ್ದಾರೆ. ದೆಹಲಿ ವಕ್ಫ್ ಬೋರ್ಡ್‌ನ ಮಾಜಿ ಅಧ್ಯಕ್ಷ ಮತ್ತು ಆಮ್ ಆದ್ಮಿ ಪಕ್ಷದ ಹಾಲಿ ಶಾಸಕರಾದ ಅಮಾನತುಲ್ಲಾ ಖಾನ್ ಈ ಎಲ್ಲ ನುಸುಳುಖೋರ ರೋಹಿಂಗ್ಯಾದವರಿಗೆ ಆಧಾರ ಕಾರ್ಡ್‌ಗಳನ್ನು ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ಈಗ ಈ ನುಸುಳುಖೋರ ರೋಹಿಂಗ್ಯಾದವರು ಸರಕಾರದ ಎಲ್ಲಾ ರೀತಿಯ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ.

೧. ಇದರ ಬಗ್ಗೆ ದೈನಿಕ ‘ಭಾಸ್ಕರ’ ಪ್ರಕಾಶಿಸಿದ ವಾರ್ತೆಯಲ್ಲಿ, ದೆಹಲಿಯ ಕಲಿಂದ್ ಕುಂಜ್ ಪ್ರದೇಶದಲ್ಲಿ ವಾಸಿಸುತ್ತಿರುವ ರೋಹಿಂಗ್ಯಾ ಮುಸಲ್ಮಾನರು ಮಾದಕವಸ್ತುಗಳ ಕಳ್ಳಸಾಗಣಿಕೆಯಲ್ಲಿ ತೊಡಗಿದ್ದಾರೆ ಎಂದು ತಿಳಿಸಿದೆ.

೨. ಇಲ್ಲಿನ ‘ರೆಸಿಡೆನ್ಸ್ ವೆಲ್‌ಫೇರ್ ಅಸೋಸಿಯೇಶನ್’ನ ಅಧಿಕಾರಿಯೊಬ್ಬರು, ‘ನಾನು ಇಲ್ಲಿ ರೋಹಿಂಗ್ಯಾಗಳನ್ನು ಹೊರದಬ್ಬಲು ಹಲವಾರು ಬಾರಿ ಪ್ರಯತ್ನಿಸಿದೆ; ಆದರೆ ನನಗೆ ಅದರಲ್ಲಿ ಯಶಸ್ಸು ಸಿಗಲಿಲ್ಲ’, ಎಂದಿದ್ದಾರೆ. ಈ ಜಮೀನಿಗೆ ಕೋಟಿಗಟ್ಟಲೆ ರೂಪಾಯಿ ಮೌಲ್ಯವಿದೆ. ಈ ನುಸುಳುಖೋರರಿಗೆ ದೆಹಲಿ ಸರ್ಕಾರದ ಅಭಯಹಸ್ತ ಇದೆ ಎಂದು ಹೇಳಲಾಗುತ್ತದೆ.