-
ಧ್ವನಿವರ್ಧಕದಿಂದ ಅಜಾನ್ ನೀಡುವುದು ಇಸ್ಲಾಮಿನ ಧಾರ್ಮಿಕ ಭಾಗವೇ ಅಲ್ಲ !
-
ಯಾವಾಗ ಧ್ವನಿವರ್ಧಕ ಇರಲಿಲ್ಲ ಆಗಲೂ, ಅಜಾನ್ ನೀಡಲಾಗುತ್ತಿತ್ತು !
-
ಧ್ವನಿವರ್ಧಕದಿಂದಗುವ ಅಜಾನ್ ತಡೆಗಟ್ಟುವುದು ಧಾರ್ಮಿಕ ಸ್ವಾತಂತ್ರ್ಯದ ಹಕ್ಕಿನ ಉಲ್ಲಂಘನೆಯಲ್ಲ !
ಇಂತಹ ಆದೇಶವು ಸಂಚಾರ ನಿಷೇಧದ ಅವಧಿಯಲ್ಲಿ ಮಾತ್ರವಲ್ಲದೇ, ಇಡೀ ದೇಶದಲ್ಲಿ ಶಾಶ್ವತವಾಗಿ ಹೇರಬೇಕು ಎಂದು ಜನಸಾಮಾನ್ಯರಿಗೆ ಅನಿಸುತ್ತದೆ ! ಇದಕ್ಕಾಗಿ ಕೇಂದ್ರ ಸರ್ಕಾರ ಜಾತ್ಯತೀತತೆ ಪಾಲನೆಯನ್ನು ಮಾಡುತ್ತ ಈ ಆದೇಶವನ್ನು ಹೊರಡಿಸಬೇಕು !
ಪ್ರಯಾಗರಾಜ್ (ಉತ್ತರ ಪ್ರದೇಶ) – ಅಜಾನ್ ನೀಡುವುದು ಇಸ್ಲಾಮಿನ ಒಂದು ಭಾಗವಾಗಿದ್ದರೂ, ಧ್ವನಿವರ್ಧಕದ ಮೂಲಕ ಅಜಾನ್ ನೀಡುವುದು ಇಸ್ಲಾಮಿನ ಧಾರ್ಮಿಕ ಭಾಗವಲ್ಲ, ಎಂದು ಇಲ್ಲಿನ ಅಲಹಾಬಾದ್ ಉಚ್ಚ ನ್ಯಾಯಾಲಯ ಒಂದು ಪ್ರಕರಣದ ಆಲಿಕೆಯ ಸಮಯದಲ್ಲಿ ಈ ತೀರ್ಪನ್ನು ನೀಡಿದೆ. ರಾಜ್ಯದ ಮುಖ್ಯ ಕಾರ್ಯದರ್ಶಿಗಳು ಜಿಲ್ಲಾಧಿಕಾರಿ ಮೂಲಕ ಆದೇಶವನ್ನು ಜಾರಿಗೊಳಿಸಬೇಕು ಎಂದು ನ್ಯಾಯಾಲಯ ಹೇಳಿದೆ. ಉತ್ತರ ಪ್ರದೇಶದಲ್ಲಿ ಸಂಚಾರ ನಿಷೇಧದಿಂದಾಗಿ ಧ್ವನಿವರ್ಧಕ ಅಳವಡಿಸುವುದನ್ನು ನಿಷೇಧಿಸಿದೆ. ಗಾಜಿಪುರದ ಜಿಲ್ಲಾಧಿಕಾರಿಗಳು ಮಸೀದಿಗಳಲ್ಲಿ ಧ್ವನಿವರ್ಧಕಗಳನ್ನು ಬಳಸುವುದನ್ನು ನಿಷೇಧಿಸಿದ್ದಾರೆ. ಇದರ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ವಿಚಾರಣೆ ನಡೆಸುತ್ತಿರುವಾಗ ನ್ಯಾಯಾಲಯ ಈ ಆದೇಶವನ್ನು ನೀಡಿತು.
ನ್ಯಾಯಾಲಯದ ಆದೇಶದಲ್ಲಿ ಅಂಶಗಳು
೧. ಶಬ್ದ ಮಾಲಿನ್ಯವಿಲ್ಲದೇ ಮುಕ್ತವಾಗಿ ನಿದ್ರೆ ಮಾಡುವುದು ಮಾನವನ ಮೂಲಭೂತ ಹಕ್ಕಾಗಿದೆ. ಇತರರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುವ ಹಕ್ಕು ಯಾರಿಗೂ ಇಲ್ಲ.
೨. ಯಾವಾಗ ಧ್ವನಿವರ್ಧಕ ಇರಲಿಲ್ಲ ಆಗಲೂ ಅಜಾನ್ ನೀಡಲಾಗುತ್ತಿತ್ತು. ಆ ಸಮಯದಲ್ಲಿ ಜನರು ಪ್ರಾರ್ಥನೆಗಾಗಿ ಮಸೀದಿಗೆ ಬರುತ್ತಿದ್ದರು. ಧ್ವನಿವರ್ಧಕದಿಂದ ಅಜಾನ್ ಅನ್ನು ತಡೆಯುವುದು ಕಲಂ ೨೫ ಕ್ಕನುಸಾರ ಧಾರ್ಮಿಕ ಸ್ವಾತಂತ್ರ್ಯದ ಹಕ್ಕಿನ ಉಲ್ಲಂಘನೆಯಲ್ಲ.
೩. ಕಲಂ ೨೧ ಆರೋಗ್ಯಕರ ಜೀವನವನ್ನು ನಡೆಸುವ ಹಕ್ಕನ್ನು ನೀಡುತ್ತದೆ. ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಗಳು ಯಾರಿಗೂ ಏನಾದರೂ ಕೇಳಲು ಬಲವಂತ ಮಾಡುವಂತಿಲ್ಲ. ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನದ್ದನ್ನು ಅನುಮತಿಯಿಲ್ಲದೆ ಕೇಳಿಸಲಾಗದು. ರಾತ್ರಿ ೧೦ ರಿಂದ ಬೆಳಿಗ್ಗೆ ೬ ರ ವರೆಗೆ ಧ್ವನಿವರ್ಧಕಗಳನ್ನು ಉಪಯೋಗಿಸುವುದನ್ನು ನಿಷೇಧಿಸಲಾಗಿದೆ.
ಬಿ.ಎಸ್.ಪಿ. ಪಿ ಸಂಸದರ ಪತ್ರವನ್ನು ನ್ಯಾಯಾಲಯವು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಾಗಿ ಸ್ವೀಕಾರ
ಧ್ವನಿವರ್ಧಕ ಮೇಲಿನ ನಿಷೇಧವನ್ನು ಗಾಜಿಪುರದ ಬಹುಜನ ಸಮಾಜ ಪಕ್ಷದ ಸಂಸದ ಅಫ್ಜಲ್ ಅನ್ಸಾರಿ ವಿರೋಧಿಸಿದ್ದರು. “ರಂಜಾನ್ ಸಮಯದಲ್ಲಿ ಮಸೀದಿಗಳಲ್ಲಿ ಧ್ವನಿವರ್ಧಕಗಳಿಂದ ಅಜಾನ್ ಕೊಡದಿರುವುದು ಧಾರ್ಮಿಕ ಸ್ವಾತಂತ್ರ್ಯದ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಅವರು ಅಲಹಾಬಾದ್ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಿಗೆ ಪತ್ರ ಬರೆದು ಇದರಲ್ಲಿ ಹಸ್ತಕ್ಷೇಪವನ್ನು ಮಾಡಬೇಕೆಂದು ಆಗ್ರಹಿಸಿದ್ದರು. ನಂತರ, ಮುಖ್ಯ ನ್ಯಾಯಮೂರ್ತಿ ಗೋವಿಂದ್ ಮಾಥುರ್ ಈ ಪತ್ರವನ್ನು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಎಂದು ಒಪ್ಪಿಕೊಂಡು ರಾಜ್ಯ ಸರ್ಕಾರದ ಅಭಿಪ್ರಾಯ ಕೋರಿದರು. ಸರ್ಕಾರ ಮತ್ತು ಅನ್ಸಾರಿ ಅವರ ಕಡೆಯಿಂದ ವಿಚಾರಣೆ ನಡೆಸಿದ ನಂತರ ನ್ಯಾಯಾಲಯ ಈ ಆದೇಶವನ್ನು ಜಾರಿಗೊಳಿಸಿತು.
ರಾಜ್ಯ ಸರಕಾರ ತಮ್ಮ ನಿಲುವನ್ನು ಮಂಡಿಸುತ್ತ, ಅಜಾನ್ ಅಂದರೆ ಮಸೀದಿಯಲ್ಲಿ ಪ್ರಾರ್ಥನೆಗಾಗಿ ಒಟ್ಟಾಗಲು ಕರೆ ನೀಡಿದಂತೆ ಆಗುತ್ತದೆ ಎಂದು ತಿಳಿಸಿತ್ತು. ಆದ್ದರಿಂದ ಧ್ವನಿವರ್ಧಕದಿಂದ ಅಜಾನ್‌ಅನ್ನು ಕೇಳಿದ ಮೇಲೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಮಸೀದಿಯಲ್ಲಿ ಸೇರುತ್ತಾರೆ, ಇದು ಕರೋನಾಗೆ ಸಂಬಂಧಿಸಿದ ಸಂಚಾರ ನಿಷೇಧ ಮತ್ತು ಇತರ ನಿಯಮಗಳ ಉಲ್ಲಂಘನೆಯಾಗಿದೆ. ಅದಕ್ಕಾಗಿಯೇ ಧ್ವನಿವರ್ಧಕಗಳನ್ನು ನಿಷೇಧಿಸಲಾಗಿದೆ. ಅಲ್ಲದೆ, ಸರ್ಕಾರದ ಅನುಮತಿಯಿಲ್ಲದೆ ಧ್ವನಿವರ್ಧಕದಿಂದ ಅಜಾನ್ ಕೇಳಿಸಲು ಸಾಧ್ಯವಿಲ್ಲ.
ಮುಸ್ಲಿಂ ಧರ್ಮಗುರುಗಳ ಪ್ರತಿಕ್ರಿಯೆ
೧. ಈ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿದ ಪ್ರಯಾಗರಾಜ್ ಇಲ್ಲಿನ ಖಾಜಿ ಶಫೀಕ್ ಅಹ್ಮದ್ ಶರೀಫಿ, ‘ನಾವು ಈಗಾಗಲೇ ರಾತ್ರಿ ೧೦ ರಿಂದ ಬೆಳಿಗ್ಗೆ ೬ ರವರೆಗೆ ಧ್ವನಿವರ್ಧಕಗಳನ್ನು ಅಳವಡಿಸುವುದನ್ನು ನಿಷೇಧಿಸಿದ್ದೇವೆ ಮತ್ತು ನಾವು ಅದನ್ನು ಪಾಲಿಸುತ್ತಿದ್ದೇವೆ’ ಎಂದು ಹೇಳಿದರು.(ಸುಳ್ಳು ಹೇಳಿ ಸುತ್ತಿಬಳಸಿ ಹೇಳಿ ! ದೇಶದಲ್ಲಿ ಅನೇಕ ಸ್ಥಳಗಳಲ್ಲಿ ಮಸೀದಿ ಮೇಲಿನ ಧ್ವನಿವರ್ಧಕದಿಂದ ದೊಡ್ಡ ಧ್ವನಿಯಲ್ಲಿ ಅಜಾನ್ ನೀಡಿ ಅದರ ಉಲ್ಲಂಘನೆಯನ್ನು ಮಾಡಲಾಗುತ್ತದೆ; ಇದರ ಬಗ್ಗೆ ಪೊಲೀಸರು ಹಾಗೂ ಆಡಳಿತವರ್ಗದವರು ಕ್ರಮ ಕೈಗೊಳ್ಳುವ ಬಗ್ಗೆ ನಿಷ್ಕ್ರಿಯತೆಯನ್ನು ತೋರಿಸುತ್ತಿದ್ದಾರೆ, ಇದು ಬಹುಸಂಖ್ಯಾತ ಜನರಿಗೆ ತಿಳಿದಿದೆ ! – ಸಂಪಾದಕರು). ನ್ಯಾಯಾಲಯವೂ ಇದೇ ಹೇಳಿದೆ. ಈಗ ನಾವು ನ್ಯಾಯಾಲಯದ ಸಂಪೂರ್ಣ ನಿರ್ಣಯವನ್ನು ನೋಡಿದ ನಂತರ ಮುಂದಿನ ಮಾರ್ಗವನ್ನು ನಾವು ನಿರ್ಧರಿಸುತ್ತೇವೆ, ಎಂದರು.
೨. ಇಲ್ಲಿ ಶಿಯಾ ಜಮಾ ಮಸೀದಿಯ ಹಸನ್ ರಜಾ ಜೈದಿ ಮಾತನಾಡುತ್ತಾ, ಹಿಂದೆ ಧ್ವನಿವರ್ಧಕ ಇಲ್ಲದಿರುವಾಗಲೂ ಜನರು ಪ್ರಾರ್ಥನೆಗಾಗಿ ಮಸೀದಿಗೆ ಬರುತ್ತಿದ್ದರು ಎಂದು ನ್ಯಾಯಾಲಯವು ಹೇಳಿದೆ. ನಾನು ಹೇಳುತ್ತೇನೆ, ಮೊದಲು ಅನೇಕ ಸಂಗತಿಗಳು ನಡೆಯುತ್ತಿರಲಿಲ್ಲ. ಹೊಸ ತಂತ್ರಜ್ಞಾನ ಬಂದನಂತರ, ಅದನ್ನು ಉಪಯೋಗಿಸಲು ಪ್ರಾರಂಭಿಸಿದೆ. (ಹೊಸ ತಂತ್ರಜ್ಞಾನ ಬಂತೆಂದರೆ ಇತರರಿಗೆ ಹಾನಿಯಾಗಬೇಕು ಅಥವಾ ನಿಯಮಗಳನ್ನು ಉಲ್ಲಂಘಿಸಬೇಕು ಎಂದು ಅರ್ಥವಲ್ಲ ! – ಸಂಪಾದಕರು) ಆದ್ದರಿಂದ ಈ ನಿರ್ಧಾರವನ್ನು ಮರುಪರಿಶೀಲಿಸುವಂತೆ ನಾನು ನ್ಯಾಯಾಲಯವನ್ನು ಕೋರುತ್ತೇನೆ, ಎಂದರು.