ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ರನ್ನು ಬಾಂಬ್‌ನಿಂದ ಕೊಲ್ಲುವ ಬೆದರಿಕೆ

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರನ್ನು ಬಾಂಬ್‌ನಿಂದ ಕೊಲ್ಲುವ ಬೆದರಿಕೆಯುಳ್ಳ ಸಂದೇಶವೊಂದು ಉತ್ತರ ಪ್ರದೇಶ ಸರ್ಕಾರದ ‘ವಾಟ್ಸಾಪ್’ ಸಂಖ್ಯೆಗೆ ಕಳುಹಿಸಲಾಗಿದೆ. ಪೊಲೀಸರ ಹೇಳಿರುವ ಪ್ರಕಾರ ‘ಈ ಬೆದರಿಕೆಯಲ್ಲಿ, ‘ನಾನು ಯೋಗಿ ಆದಿತ್ಯನಾಥರನ್ನು ಬಾಂಬ್‌ನಿಂದ ಹತ್ಯೆ ಮಾಡುತ್ತೇನೆ.’ ಎಂದಿದೆ.

ಪಿ.ಎಂ. ಕೇರ್ ಫಂಡ್’ ಬಗ್ಗೆ ಟ್ವೀಟ್ ಮಾಡಿದ ಪ್ರಕರಣದಲ್ಲಿ ಸೋನಿಯಾ ಗಾಂಧಿ ವಿರುದ್ಧ ಎಫ್‌ಐಆರ್

ಕೊರೋನಾ ಸೃಷ್ಟಿಸಿದ ಪರಿಸ್ಥಿತಿಯನ್ನು ನಿಭಾಯಿಸಲು ಕೇಂದ್ರ ಸರ್ಕಾರವು ‘ಪಿ.ಎಂ. ಕೇರ್ ಫಂಡ್’ವನ್ನು ರಚಿಸಿದೆ. ಮೇ ೧೧ ರಂದು ಕಾಂಗ್ರೆಸ್ ಟ್ವಿಟ್ಟರ್ ಖಾತೆಯಿಂದ ಮಾಡಿದ ಟ್ವೀಟ್‌ನಲ್ಲಿ ಈ ನಿಧಿಯ ಬಗ್ಗೆ ಟೀಕಿಸಲಾಗಿದೆ. ಈ ಖಾತೆಯನ್ನು ಸೋನಿಯಾ ಗಾಂಧಿ ನಡೆಸುತ್ತಿರುವುದರಿಂದ, ವಕೀಲ ಪ್ರವೀಣ್ ಕೆ.ವಿ. ಇವರು ಸೋನಿಯಾ ಗಾಂಧಿ ವಿರುದ್ಧ ದೂರು ದಾಖಲಿಸಿದ ನಂತರ ಅವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 6,088 ಹೊಸ ಕರೋನಾ ರೋಗಿಗಳು

ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಕರೋನಾ ರೋಗಿಗಳ ಸಂಖ್ಯೆ ಗರಿಷ್ಠ ಮಟ್ಟಕ್ಕೆ ಏರಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 6,088 ಹೊಸ ರೋಗಿಗಳು ನೋಂದಣಿಯಾಗಿದ್ದಾರೆ. ಇದರ ಪರಿಣಾಮವಾಗಿ, ದೇಶದಲ್ಲಿ ಕರೋನಾ ಸಂತ್ರಸ್ತರ ಸಂಖ್ಯೆ 1 ಲಕ್ಷ 18 ಸಾವಿರ 447 ಕ್ಕೆ ತಲುಪಿದೆ, ಮತ್ತು ಸಾವಿನ ಸಂಖ್ಯೆ 3 ಸಾವಿರ 583 ಕ್ಕೆ ತಲುಪಿದೆ.

ಮುಸಲ್ಮಾನರ ಹಣವನ್ನು ಮುಸಲ್ಮಾನರಿಗಾಗಿಯೇ ಖರ್ಚು ಮಾಡಬೇಕು ! – ಕಾಂಗ್ರೆಸ್ ಶಾಸಕ ಜಮೀರ ಅಹಮದ್‌ರಿಂದ ವಕ್ಫ ಬೋರ್ಡ್‌ಗೆ ವಿರೋಧ

ಕರ್ನಾಟಕದ ವಕ್ಫ್ ಬೋರ್ಡ್ ಕೊರೋನಾದ ವಿರುದ್ಧ ಹೋರಾಡಲು ರಾಜ್ಯ ಹಾಗೂ ಕೇಂದ್ರ ಸರಕಾರದ ಸಹಾಯ ನಿಧಿಗೆ ಹಣವನ್ನು ನೀಡುವ ಬಗ್ಗೆ ಸುತ್ತೋಲೆಯನ್ನು ಹೊರಡಿಸಿದೆ. ಅದೇರೀತಿ ಅವರು ಇತರರಿಗೂ ಹಣವನ್ನು ನೀಡುವಂತೆ ಕರೆ ನೀಡಿದ್ದಾರೆ. ಅದಕ್ಕೆ ರಾಜ್ಯದ ಕಾಂಗ್ರೆಸ್ ಶಾಸಕ ಜಮೀರ ಅಹಮದ್ ವಿರೋಧಿಸಿದ್ದಾರೆ.

ಮುಜಿಬುರ್ ರಹಮಾನ್ ಮತ್ತು ಅವರ ಸಹಚರರಿಂದ ‘ಟಿಕ್-ಟಾಕ್’ ‘ಆಪ್’ನಲ್ಲಿ ‘ಅತ್ಯಾಚಾರ’ಕ್ಕೆ ಪ್ರೊತ್ಸಾಹ ನೀಡುವ ‘ವೀಡಿಯೊ’ ಪ್ರಸಾರ

ಮುಜಿಬುರ್ ರಹಮಾನ್ ಮತ್ತು ಅವರ ಸಹಚರರಿಂದ ‘ಟಿಕ್-ಟಾಕ್’ ಆಪ್ ಮೂಲಕ ‘ಅತ್ಯಾಚಾರ’ಕ್ಕೆ ಪ್ರೊತ್ಸಾಹ ನೀಡುವ ವಿಡಿಯೋವನ್ನು ತಯಾರಿಸಿದ್ದಾರೆ. ‘ವೀಡಿಯೋದಲಿ’ ‘ಇಬ್ಬರು ಯುವಕರು ಪ್ಯಾಂಟ್ ಹಾಕಿಕೊಳ್ಳುತ್ತಿದ್ದಾರೆ ಮತ್ತು ಅವರ ಮುಂದೆ ಓರ್ವ ಯುವತಿಯು ಅವಳ ಬಟ್ಟೆಯನ್ನು ಸರಿಪಡಿಸುತ್ತ ಅಳುತ್ತಿದ್ದಾಳೆ’, ಈ ರೀತಿಯಲ್ಲಿ ತೋರಿಸಲಾಗಿದೆ. ಈ ‘ವಿಡಿಯೋ’ಗೆ ತೀವ್ರ ವಿರೋಧವಾಗುತ್ತಿದೆ.

ಪಾಲಕರೇ, ನಿಮ್ಮ ಮಗುವನ್ನು ಅರಿತುಕೊಳ್ಳಿ !

ಇಂತಹ ಮಕ್ಕಳ ಬುಧ್ಯಾಂಕವು ೭೦ ರಿಂದ ೯೦ ರ ನಡುವೆ ಇರುವ ಸಾಧ್ಯತೆಯಿದೆ. ಶಾಲೆಯಲ್ಲಿ ಕಲಿಯುವ ಸಂದರ್ಭದಲ್ಲಿ ಈ ಮಕ್ಕಳು ಇತರ ಮಕ್ಕಳ ತುಲನೆಯಲ್ಲಿ ನಿಧಾನ ಗತಿಯಲ್ಲಿ ಕಲಿಯುತ್ತಾರೆ. ಇವರಿಗೂ ತರಗತಿಯಲ್ಲಿ ಗಮನವಿಡಲು ಹಾಗೂ ಏಕಾಗ್ರತೆ ಬರಲು ಅಡಚಣೆಯಾಗುತ್ತದೆ. ನೀಡಿದ ಕೆಲಸವನ್ನು ಪೂರ್ಣಗೊಳಿಸಲು ಹೆಚ್ಚು ಸಮಯ ತಗಲುತ್ತದೆ.

ಪಾಕಿಸ್ತಾನ ಜಿಂದಾಬಾದ್’ ಎಂದು ಘೋಷಣೆ ಕೂಗಿದ ಅಮುಲ್ಯ ಲಿಯೋನಾ ಅವರ ಜಾಮೀನು ಅರ್ಜಿಗೆ ಪೊಲೀಸರಿಂದ ವಿರೋಧ

ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧದ ರ್ಯಾಲಿಯಲ್ಲಿ ‘ಪಾಕಿಸ್ತಾನ ಜಿಂದಾಬಾದ್’ ಎಂದು ಘೋಷಣೆ ಕೂಗಿದ 19 ವರ್ಷದ ವಿದ್ಯಾರ್ಥಿನಿ ಅಮುಲ್ಯ ಲಿಯೋನಾ ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿದ ಜಾಮೀನು ಅರ್ಜಿಯನ್ನು ಪೊಲೀಸರು ವಿರೋಧಿಸಿದ್ದಾರೆ. ಅಮುಲ್ಯ ಪ್ರಭಾವಿ ವ್ಯಕ್ತಿಯಾಗಿದ್ದಾರೆ.

‘ಅಶ್ವಗಂಧ’ದಿಂದ ನಿರ್ಮಿಸಿದ ಔಷಧಿಯು ಕೊರೋನಾ ಪೀಡಿತ ರೋಗಿಗಳನ್ನು ಗುಣಮುಖ ಮಾಡಬಹುದು ! – ಐಐಟಿ ದೆಹಲಿಯ ತೀರ್ಮಾನ

ಐಐಟಿ ದೆಹಲಿಯ ‘ಬಯೋಕೆಮಿಕಲ್’ ಇಂಜಿನಿಯರಿಂಗ್‌ನ ಪ್ರಾ. ಡಿ. ಸುಂದರ ಇವರು ಮಾಡಿದಂತಹ ಶೋಧನೆಗನುಸಾರ ‘ಅಶ್ವಗಂಧ’ದಿಂದ ತಯಾರಿಸಿದ ನೈಸರ್ಗಿಕ ಔಷಧಿಯು ಕೊರೋನಾ ಪೀಡಿತ ರೋಗಿಗಳನ್ನು ಗುಣಮುಖ ಮಾಡಬಹುದು. ಅಶ್ವಗಂಧದ ಒಂದು ರಾಸಾಯನಿಕ ಪದಾರ್ಥವು ಕೊರೋನಾದ ಜೀವಕೋಶವನ್ನು ಹೆಚ್ಚಾಗಿಸುವುದನ್ನು ತಡೆಗಟ್ಟಲು ಪರಿಣಾಮಕಾರಿಯಾಗಬಹುದು.

ಹೊಸೂರು (ಬೆಳಗಾವಿ) ಗ್ರಾಮದ ಮೂರು ಸಾವಿರ ಮಠದ ಗಂಗಾಧರ ಸ್ವಾಮೀಜಿಯವರ ಕೊಲೆಗೆ ಯತ್ನ

ಹೊಸೂರಿನ (ತಾಲ್ಲೂಕು ಬೈಲಹೋಂಗಲ) ಗ್ರಾಮದ ಮೂರು ಸಾವಿರ ಮಠದ ಗಂಗಾಧರ ಸ್ವಾಮೀಜಿಯವರ ಮೇಲೆ ಮೇ 20 ರಂದು ತಡರಾತ್ರಿ ಮಾರಣಾಂತಿಕ ಹಲ್ಲೆಯಾಗಿದೆ. ಅಜ್ಞಾತ ವ್ಯಕ್ತಿಯೊಬ್ಬ ತಡರಾತ್ರಿ ಕಳ್ಳತನ ಮಾಡುವ ಉದ್ದೇಶದಿಂದ ಮಠಕ್ಕೆ ಪ್ರವೇಶಿಸಿ ಸ್ವಾಮೀಜಿಯ ಮೇಲೆ ಹಲ್ಲೆ ನಡೆಸಿದ್ದಾನೆ.

ಸರಸಂಘಚಾಲಕರು ಪ್ರಧಾನಮಂತ್ರಿಯವರಿಗೆ ನಿರ್ಭಯವಾಗಿ ಹಿಂದೂ ರಾಷ್ಟ್ರದ ಸ್ಥಾಪನೆಯ ಬಗ್ಗೆ ಸೂಚಿಸಬೇಕು ! – ಆಚಾರ್ಯ ಧರ್ಮೇಂದ್ರಜಿ ಮಹಾರಾಜ, ವಿಶ್ವ ಹಿಂದೂ ಪರಿಷತ್ತು

ವಿಶ್ವದ ಎಲ್ಲಕ್ಕಿಂತ ದೊಡ್ಡ ಸ್ವಯಂಸೇವಕ ಸಂಘಟನೆಯಾಗಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಮೋಹನ ಭಾಗವತರವರು ಭಯ ಹಾಗೂ ಆತಂಕ ಈ ಕಾರಣಗಳಿಂದ ವ್ಯಕ್ತವಾಗುವ ಹಾಗೂ ಭಯಗೊಂಡ ಕೆಲವು ಮುಸಲ್ಮಾನರ ಬಗ್ಗೆ ದ್ವೇಷ ವ್ಯಕ್ತವನ್ನು ಮಾಡದೇ ಅನುಕಂಪವನ್ನು ತೋರಬೇಕು, ಎಂದು ಸೂಚಿಸಿದ್ದರು.