ದಾವಣಗೆರೆಯಲ್ಲಿ ಮುಸಲ್ಮಾನ ಮಹಿಳೆಯರು ಹಿಂದೂ ಅಂಗಡಿಯಿಂದ ವಸ್ತು ಖರೀದಿಸಿದರೆಂದು ಮತಾಂಧರಿಂದ ಅವಾಚ್ಯ ಬೈಗುಳ

ಇದರ ಬಗ್ಗೆ ಇದುವರೆಗೆ ದೇಶದ ಯಾವುದೇ ಪ್ರಗತಿ(ಅಧೋಗತಿ)ಪರರು ಹಾಗೂ ಜಾತ್ಯತೀತವಾದಿಗಳು ಅಥವಾ ಮುಸಲ್ಮಾನ ನಾಯಕರು ಧ್ವನಿ ಎತ್ತಲಿಲ್ಲ, ಎಂಬುದನ್ನು ಗಮನದಲ್ಲಿಡಿ !

‘ದೇಶವು ಜಾತ್ಯತೀತವಾಗಿದೆ’, ಎಂದು ಹೇಳುವವರು ಈ ಘಟನೆಯತ್ತ ಗಾಂಧೀಜಿಯವರ ೩ ಕೋತಿಗಳಂತೆ ಕೃತಿ ಮಾಡುತ್ತಿದ್ದಾರೆ, ಎಂಬುದನ್ನು ಗಮನದಲ್ಲಿಡಿ !

ಒಂದೆಡೆ ಹಿಂದೂಗಳಿಗೆ ‘ಹಲಾಲ್ ಪ್ರಮಾಣಿತ’ ವಸ್ತುಗಳನ್ನು ಖರೀದಿಸಲು ಒತ್ತಾಯಿಸುತ್ತಿದ್ದಾರೆ ಮತ್ತು ಇನ್ನೊಂದೆಡೆ ಮುಸಲ್ಮಾನರಿಗೆ ಹಿಂದೂಗಳ ಅಂಗಡಿಗಳಿಂದ ಖರೀದಿಸದಂತೆ ಮತಾಂಧರು ಫತ್ವಾ ಹೊರಡಿಸುತ್ತಿದ್ದಾರೆ. ಇದನ್ನೆಲ್ಲವನ್ನು ನೋಡಿದಾಗ ‘ಭಾರತವು ಇಸ್ಲಾಮಿಸ್ತಾನದತ್ತ ಸಾಗುತ್ತಿದೆ’, ಎಂದು ಯಾರಿಗಾದರೂ ಅನಿಸಿದರೆ ಅದು ತಪ್ಪಾಗಲಾರದು !

ದಾವಣಗೆರೆ – ಇಲ್ಲಿ ಮುಂಬರುವ ಈದ್‌ಗಾಗಿ ಹಿಂದೂಗಳ ಅಂಗಡಿಯಿಂದ ವಸ್ತುಗಳನ್ನು ಖರೀದಿಸಿದ್ದರಿಂದ ಮತಾಂಧರು ಮುಸಲ್ಮಾನ ಮಹಿಳೆಯರಿಗೆ ಅವಾಚ್ಯವಾಗಿ ನಿಂದಿಸಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ. ಅದರಲ್ಲಿ ಮತಾಂಧರು ಆ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿ ಅವರ ಕೈಯಲ್ಲಿರುವ ಬಟ್ಟೆಯ ಕೈಚೀಲಗಳನ್ನು ಕಸಿದುಕೊಂಡು ಎಸೆಯುತ್ತಿರುವುದು ಕಾಣಿಸುತ್ತಿದೆ.

೧. ಒಂದು ವಇಡಿಯೋದಲ್ಲಿ ಬುರಖಾ ಹಾಕಿಕೊಂಡಿರುವ ಕೆಲವು ಮಹಿಳೆಯರು ಇಲ್ಲಿನ ಹಿಂದೂ ಮಾಲೀಕತ್ವದ ಬಿ.ಎಸ್. ಚೆನ್ನಬಸಪ್ಪ ಆಂಡ್ ಸನ್ಸ್’ ಈ ಬಟ್ಟೆಯ ಅಂಗಡಿಯಿಂದ ಹೊರಬರುವಾಗ ಅವರನ್ನು ನಾಲ್ಕೂ ದಿಕ್ಕುಗಳಿಂದ ಸುತ್ತುವರಿದ ಮತಾಂಧರು ಯದ್ವಾ-ತದ್ವಾ ಪ್ರಶ್ನೆಗಳನ್ನು ಕೇಳುತ್ತಿರುವುದು ಕಾಣಿಸುತ್ತಿದೆ. ಅಲ್ಲದೇ ಅವರ ಕೈಯಲ್ಲಿರುವ ಕೇಸರಿ ಬಣ್ಣದ ಕೈಚೀಲವನ್ನು ಕಸಿದುಕೊಂಡು ಎಸೆಯುತ್ತಿದ್ದಾರೆ. ಈ ಸಮಯದಲ್ಲಿ ಮಹಿಳೆಯರು ಮತಾಂಧರಲ್ಲಿ ತಮ್ಮನ್ನು ಬಿಡುವಂತೆ ವಿನಂತಿಸುತ್ತಿರುವುದು ಕಾಣಿಸುತ್ತಿದೆ.

೨. ಮತ್ತೊಂದು ವಿಡಿಯೋದಲ್ಲಿ ಮುಸಲ್ಮಾನ ಮಹಿಳೆಯರು ಹಿಂದೂಗಳ ಅಂಗಡಿಯಿಂದ ಖರೀದಿಸಿದ ವಸ್ತುಗಳನ್ನು ಮರಳಿ ಅಂಗಡಿಗೆ ಕೊಡಲು ಬಲವಂತ ಮಾಡುತ್ತಿರುವುದು ಕಂಡುಬರುತ್ತಿದೆ. ಇದರಲ್ಲಿ ಓರ್ವ ಮತಾಂಧ ಯುವಕನು ಮುಸಲ್ಮಾನ ಮಹಿಳೆಯ ಕೈಯಲ್ಲಿದ್ದ ಕೇಸರಿ ಕೈಚೀಲವನ್ನು ಕಸಿದುಕೊಳ್ಳುತ್ತಿದ್ದರೆ, ಮತ್ತೊಂದು ಮತಾಂಧರ ಗುಂಪು ೨ ಮುಸಲ್ಮಾನ ಮಹಿಳೆಯರಿಗೆ ರಿಕ್ಷಾದಲ್ಲಿ ಕೂಡಿಸಿ ಹಿಂದೂಗಳ ಅಂಗಡಿಗೆ ಹೋಗಿ ಆ ವಸ್ತುಗಳನ್ನು ಹಿಂದಿರುಗಿಸಲು ಹೇಳುತ್ತಿದ್ದಾರೆ.

೩. ಮೂರನೇಯ ವಿಡಿಯೋದಲ್ಲಿ ಹಿಂದೂಗಳ ಅಂಗಡಿಯಿಂದ ವಸ್ತುಗಳನ್ನು ಖರೀದಿಸಲೆಂದು ಹೋಗುತ್ತಿರುವ ೨ ಮುಸಲ್ಮಾನ ಮಹಿಳೆಯರಿಗೆ ಹಾಗೂ ಅವರೊಂದಿಗಿದ್ದ ಚಿಕ್ಕ ಮಗುವಿಗೆ ಮತಾಂಧರು ಬೆದರಿಕೆಯೊಡ್ಡುತ್ತಿರುವುದು ಕಾಣಿಸುತ್ತಿದೆ.