ಕರ್ನಾಟಕ ‘ಇಸ್ಲಾಮಿಕ್ ದೇಶ ಆಗುತ್ತಿದೆಯೇ? – ಶೋಭಾ ಕರಂದ್ಲಾಜೆ ಪ್ರಶ್ನೆ

ದಾವಣಗೆರೆಯಲ್ಲಿ ಹಿಂದೂಗಳ ಅಂಗಡಿಯಿಂದ ಬಟ್ಟೆಬರೆ ಖರೀದಿಸಿದ ಮುಸಲ್ಮಾನ ಮಹಿಳೆಯರಿಗೆ ಮತಾಂಧರು ಬೆದರಿಸಿದ ಪ್ರಕರಣ

ಸಂಸದೆ ಶೋಭಾ ಕರಂದ್ಲಾಜೆ

ಬೆಂಗಳೂರು: ‘ತಬ್ಲಿಘಿಗಳಿಂದ ಶಿವಮೊಗ್ಗದಲ್ಲಿ ಕೊರೋನಾ ರೋಗಾಣುಗಳ ಸೋಂಕು ಹರಡಿತು’ ಎಂದು ಆರೋಪಿಸಿದ ಭಾಜಪದ ಸಂಸದೆ ಶೋಭಾ ಕರಂದ್ಲಾಜೆ ಇವರ ವಿರುದ್ಧ ‘ಅರೆಸ್ಟ್ ಶೋಭಾ’ ಎಂಬ ಟ್ವಿಟ್ಟರ್ ಅಭಿಯಾನ ನಡೆಸಲಾಗಿತ್ತು. ಅದಕ್ಕೆ ಸಂಸದೆ ಶೋಭಾ ಕರಂದ್ಲಾಜೆ ಟ್ವೀಟ್ ಮಾಡಿ ‘ಕರ್ನಾಟಕ ಇಸ್ಲಾಮಿಕ್ ದೇಶ ಆಗುತ್ತಿದೆಯೇ?’ ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ದಾವಣಗೆರೆಯಲ್ಲಿ ಮತಾಂಧರು ಹಿಂದೂಗಳ ಜವಳಿ ಅಂಗಡಿಯಲ್ಲಿ ಬಟ್ಟೆಬರೆ ಖರೀದಿ ಮಾಡದಂತೆ ಮುಸ್ಲಿಂ ಮಹಿಳೆಯರಿಗೆ ಒತ್ತಡ ಹೇರುತ್ತಿದ್ದಾರೆ ಎಂದು ವಿಡಿಯೋ ಸಮೇತ ಟ್ವೀಟ್ ಮಾಡಿದ್ದಾರೆ.
ಅದರೊಂದಿಗೆ ಧಾರ್ಮಿಕ ಮೂಲಭೂತವಾದಿಗಳು ಹೇರುತ್ತಿರುವ ಷರಿಯಾ ಕಾನೂನಿಗೆ ಪ್ರತಿಯಾಗಿ ಪ್ರಜಾಪ್ರಭುತ್ವ ಭಾರತದ ಕಾನೂನಿನ ರುಚಿ ತೋರಿಸಬೇಕು ಎಂದು ಬರೆದಿದ್ದಾರೆ. ಅದಲ್ಲದೇ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ‘ಧರ್ಮಗಳ ನಡುವೆ ದ್ವೇಷ ಬಿತ್ತುತ್ತಿರುವ ಈ ಮತಾಂಧರನ್ನು ಕೂಡಲೇ ಬಂಧಿಸಿ’ ಎಂದು ಆಗ್ರಹಿಸಿದ್ದಾರೆ.