ಚೀನಾಗೆ ಅದಕ್ಕೆ ತಕ್ಕಂತೆ ಉತ್ತರವನ್ನು ನೀಡಿದರೆ ಮಾತ್ರ ಅದರ ಮೇಲೆ ನಿಯಂತ್ರಣವಿಡಲು ಸಾಧ್ಯ !
ನವ ದೆಹಲಿ – ಭಾರತವು ಲಡಾಖನ ಡೆಮಚಾಕ್, ಚುಮಾರ, ದೌಲತ್ ಬೇಗ ಓಲ್ಡಿ ಹಾಗೂ ಗಾಲವಾನ ವ್ಯಾಲಿ ಈ ಪ್ರದೇಶಗಳಲ್ಲಿ ಸೇನೆಯ ಹೆಚ್ಚುವರಿ ತುಕಡಿಗಳನ್ನು ನೇಮಿಸಿದೆ. ಮೇ ತಿಂಗಳ ಮೊದಲನೇ ವಾರದಲ್ಲಿ ಲಡಾಖನ ಪ್ಯಾನಗಾಂಗ್‌ದಲ್ಲಿ ಭಾರತ ಮತ್ತು ಚೀನಾದ ಸೈನಿಕರಲ್ಲಿ ಪರಸ್ಪರ ಹೊಡೆದಾಟ ನಡೆದಿತ್ತು. ಆ ಸಮಯದಲ್ಲಿ ಎರಡೂ ದೇಶದ ಸೈನಿಕರು ಗಾಯಗೊಂಡಿದ್ದರು. ಇದೇ ಕಾಲಾವಧಿಯಲ್ಲಿ ಗಾಲವಾನ ನದಿಯ ಹತ್ತಿರ ಚೀನಾದ ಸೈನಿಕರಿಂದ ಡೇರೆ ನಿರ್ಮಿಸಿ ಕಟ್ಟಡ ಕೆಲಸವನ್ನು ಆರಂಭಿಸಿದ್ದರು. ಅದಕ್ಕೆ ಭಾರತೀಯ ಸೈನಿಕರಿಂದ ಎಚ್ಚರಿಕೆಯನ್ನು ನೀಡಲಾಗಿತ್ತು. ಇದೇ ಹಿನ್ನಲೆಯಲ್ಲಿ ಭಾರತವು ಆ ಪ್ರದೇಶದಲ್ಲಿ ಸೈನಿಕರ ಹೆಚ್ಚುವರಿ ತುಕಡಿಗಳನ್ನು ನೇಮಕ ಮಾಡಿದೆ, ಎಂದು ಭಾರತೀಯ ಸೈನಿಕರ ಮೂಲಗಳಿಂದ ತಿಳಿದುಬಂದಿದೆ. ಭಾರತದೊಂದಿಗೆ ಚೀನಾವು ಕೂಡ ತನ್ನ ಹೆಚ್ಚುವರಿ ಸೈನಿಕ ತುಕಡಿಯನ್ನು ಆ ಪ್ರದೇಶದಲ್ಲಿ ನೇಮಿಸಿದೆ.
೧. ೨೦೧೩ ರ ಎಪ್ರಿಲ್ ಹಾಗೂ ಮೇ ತಿಂಗಳಲ್ಲಿ ಅಲ್ಲಿಯ ಡಿಬಿಓ ಸೆಕ್ಟರ್ ನಲ್ಲಿ ಭಾರತ ಹಾಗೂ ಚೀನಾದ ಸೈನಿಕರು ಪರಸ್ಪರ ಎದುರಾಗಿದ್ದರು. ೨೧ ದಿನಗಳ ಕಾಲ ಎರಡೂ ದೇಶದ ಸೈನಿಕರು ಪರಸ್ಪರ ಎದುರಿಗೆ ನಿಲ್ಲಿಸಲಾಗಿತ್ತು. ಚೀನಾವು ಭಾರತದ ಗಡಿಯ ೧೯ ಕಿ.ಮೀ. ಒಳಗೆ ನುಸುಳಿದ್ದರಿಂದ ಆ ಸಮಯದಲ್ಲಿ ಸಂಘರ್ಷದ ಸ್ಥಿತಿ ನಿರ್ಮಾಣವಾಗಿತ್ತು.
೨. ೨೦೧೮ರಲ್ಲಿ ಡೆಮಚಾಕ್ ನಲ್ಲಿ ಡೇರೆ ನಿರ್ಮಿಸಲು ಚೀನಾದ ಸೈನಿಕರು ೩೦೦ ರಿಂದ ೪೦೦ ಮೀಟರ್ ಗಡಿಯೊಳಗೆ ನುಸುಳಿದ್ದರು. ಆ ಸಮಯದಲ್ಲೂ ಭಾರತೀಯ ಸೈನಿಕರು ಅವರಿಗೆ ಎಚ್ಚರಿಕೆಯನ್ನು ನೀಡಿದ್ದರು.