ಇನ್ನು ಭಾರತೀಯರು ಚೀನಾ ಸಂಸ್ಥೆಯ ‘ಅಪ್ಲಿಕೇಶನ್’ ಆಗಿರುವ ’ಟಿಕ್ ಟಾಕ್’ ಮೇಲೆ ಸಂಪೂರ್ಣ ಬಹಿಷ್ಕಾರ ಹಾಕುವುದು ಅಗತ್ಯವಿದೆ !
ನವ ದೆಹಲಿ: ಚೀನಾ ಸರಕಾರದ ವಿರುದ್ಧವಾಗಿರುವ ಯಾವುದೇ ವಿಷಯಗಳನ್ನು ಟಿಕ್-ಟಾಕ್ ಆಪ್‌ನಲ್ಲಿ ಪೋಸ್ಟ್ ಮಾಡದಂತೆ ‘ಟಿಕ್-ಟಾಕ್’ ವತಿಯಿಂದ ಭಾರತದಲ್ಲಿರುವ ತನ್ನ ಉದ್ಯೋಗಿಗಳಿಗೆ ಆದೇಶ ನೀಡಲಾಗಿದೆ.
ಈ ವಿಷಯದಲ್ಲಿ ವಿ-ಅಂಚೆಯ ಮಾಹಿತಿಯು ಬಹಿರಂಗವಾದ ನಂತರ ಈ ಪ್ರಕರಣವು ಬೆಳಕಿಗೆ ಬಂದಿದೆ. ಆದ್ದರಿಂದ, ಇಂದು ಟಿಕ್-ಟಾಕ್ ಬಳಸದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ. ‘ಟಿಕ್-ಟಾಕ್’ನಿಂದ ’ಹಿಂದೋಫೋಬಿಯಾ’ (ಹಿಂದೂಗಳ ಬಗ್ಗೆ ದ್ವೇಷವನ್ನು ಸೃಷ್ಟಿಸುವ) ಸಂದರ್ಭದಲ್ಲಿ ’ವೀಡಿಯೊಗಳನ್ನು’ ತೆಗೆದುಹಾಕುವಂತೆ ಒತ್ತಾಯಿಸಿದರೂ ಅದನ್ನು ತೆಗೆದು ಹಾಕಲಿಲ್ಲ ಅದಕ್ಕಾಗಿಯೇ ಈ ಅಪ್ಲಿಕೇಶನ್ ಅನ್ನು ಬಳಸಬಾರದು, ಎಂದು ಹಲವರು ಹೇಳುತ್ತಿದ್ದಾರೆ. ‘ವಿ-ಅಂಚೆ’ಯಲ್ಲಿನ ಬಹಿರಂಗವಾಗಿದ್ದ ಮಾಹಿತಿಯಲ್ಲಿ, ಈ ಆಪ್‌ನಿಂದ ಟಿಬೆಟಿಯನ್ ಬೌದ್ಧ ಧರ್ಮಗುರು ದಲೈ ಲಾಮಾ ಮತ್ತು ಟಿಬೆಟಿಯನ್ ಬೆಂಬಲಿಸುವ ವಿಷಯಗಳನ್ನು ಅಪ್ಲಿಕೇಶನ್‌ನಿಂದ ತೆಗೆದುಹಾಕಬೇಕೆಂದು ಸೂಚಿಸಿದೆ. ಇದರಿಂದ ‘ಟಿಕ್-ತಕ್’ ಸಂಸ್ಥೆಯು ಚೀನಾದ ಹಿತಾಸಕ್ತಿಗಾಗಿ ಕಾರ್ಯನಿರ್ವಹಿಸುತ್ತಿದೆ ಎಂಬುದು ಗಮನಕ್ಕೆ ಬರುತ್ತದೆ. ಮತ್ತೊಂದೆಡೆ, ಜಿಹಾದಿ ಸಿದ್ಧಾಂತದ ‘ವಿಡಿಯೋ’ಗಳ ಕುರಿತು ಯಾವುದೇ ರೀತಿಯ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಹೇಳಲಾಗುತ್ತಿದೆ. (ಚೀನಾವು ಪಾಕಿಸ್ತಾನವನ್ನು ತನ್ನ ಮುಷ್ಠಿಯಲ್ಲಿ ಇಟ್ಟು ಜಿಹಾದಿ ಚಟುವಟಿಕೆಗಳನ್ನು ಬೆಂಬಲಿಸುತ್ತಿದೆ ಎಂಬುದು ಇದರಿಂದ ಸ್ಪಷ್ಟವಾಗಿದೆ! – ಸಂಪಾದಕರು)