ಪಾಕಿಸ್ತಾನದಿಂದ ನಕಲಿ ‘ಆರೋಗ್ಯ ಸೇತು ಆಪ್‌ನ ಮೂಲಕ ಭಾರತೀಯ ಸೈನಿಕರ ಮಾಹಿತಿಯನ್ನು ಕದಿಯಲು ಯತ್ನ !

ಪಾಕ್ ಗೂಡಾಚಾರ ಸಂಸ್ಥೆ ಐ.ಎಸ್.ಐ. ಭಾರತದಲ್ಲಿ ಕೊರೋನಾದ ಸಂದರ್ಭದಲ್ಲಿ ತಯಾರಿಸಲಾಗಿರುವ ‘ಆರೋಗ್ಯ ಸೇತು ಆಪ್‌ನಂತ ನಕಲಿ ಆಪ್ ತಯಾರಿಸಿದೆ. ಈ ಮೂಲಕ ಅವರು ಭಾರತೀಯ ಸೈನಿಕರ ಸಂಚಾರಿವಾಣಿಯನ್ನು ಹ್ಯಾಕ್ ಮಾಡಲು ಪ್ರಯತ್ನಿಸುತ್ತಿದೆ ಎಂಬ ಮಾಹಿತಿ ಬೆಳಕಿಗೆ ಬಂದಿರುವುದರಿಂದ ಸೈನಿಕರು ಹಾಗೂ ಅರೆಸೇನಾ ಪಡೆಗಳಿಗಾಗಿ ಮಾರ್ಗದರ್ಶಕ ಸೂಚನೆಯನ್ನು ಜಾರಿಗೊಳಿಸಲಾಗಿದೆ.

ಬೆಂಗಳೂರಿನಲ್ಲಿ ವೈದ್ಯಕೀಯ ತಂಡದ ಮೇಲೆ ದಾಳಿ ಮಾಡಿದ ೫೯ ಮತಾಂಧರ ಬಂಧನ

ಎಪ್ರಿಲ್ ೧೯ ರಂದು ಕೊರೋನಾ ಶಂಕಿತರ ಮಾಹಿತಿಯನ್ನು ಒಟ್ಟು ಮಾಡಲು ತೆರಳಿದ್ದ ವೈದ್ಯಕೀಯ ತಂಡದ ಮೇಲೆ ದಾಳಿ ಮಾಡಿದ ೫೯ ಮತಾಂಧರನ್ನು ಪೊಲೀಸರು ಬಂಧಿಸಿದ್ದಾರೆ. ಇಲ್ಲಿಯ ಪಾದರಾಯನಪುರ ಭಾಗದಲ್ಲಿ ಈ ದಾಳಿ ನಡೆದಿತ್ತು. ಪೊಲೀಸರು ಬಂಧಿಸಿದ್ದ ಮತಾಂಧರಲ್ಲಿ ಫಿರೋಜಾ ಹೆಸರಿನ ಓರ್ವ ಮಹಿಳೆಯೂ ಇದ್ದಾಳೆ. ಈ ಮಹಿಳೆಯೇ ಅಲ್ಲಿಯ ಮತಾಂಧರಿಗೆ ವೈದ್ಯಕೀಯ ತಂಡದ ವಿರುದ್ಧ ಪ್ರಚೋದಿಸಿದ್ದಳು.

ಪಾಲಘರನಲ್ಲಿ ಸಾಧುಗಳ ಹಂತಕರನ್ನು ಬಿಡುವುದಿಲ್ಲ !

ಈ ಪ್ರಕರಣವನ್ನು ಅಪರಾಧ ತನಿಖಾ ತಂಡ (ಸಿ.ಐ.ಡಿ ಮೂಲಕ) ತನಿಖೆಯನ್ನು ಮಾಡಲಾಗುವುದು. ಹಲ್ಲೆ ಮಾಡಿದವರಲ್ಲಿ ಯಾರನ್ನೂ ಬಿಡುವುದಿಲ್ಲ, ಎಂಬ ಎಚ್ಚರಿಕೆಯನ್ನು ಮುಖ್ಯಮಂತ್ರಿ ಉದ್ಧವ ಠಾಕರೆ ಇವರು ನೀಡಿದರು. ಎಪ್ರಿಲ್ ೨೦ ರಂದು ಸಾಮಾಜಿಕ ಮಾಧ್ಯಮಗಳ ಮೂಲಕ ಜನರೊಂದಿಗೆ ಚರ್ಚೆಯನ್ನು ಮಾಡುತ್ತಿರುವಾಗ ಈ ಮೇಲಿನ ಹೇಳಿಕೆಯನ್ನು ನೀಡಿದರು. 

ಸಾಂಕ್ರಾಮಿಕರೋಗಗಳನ್ನು ತಡೆಯಲು ‘ಮಹಾಯಂತ್ರದ ಉಪಯೋಗದ ಮೇಲೆ ನಿರ್ಬಂಧ ಹೇರಬೇಕು ! – ಪುರಿ ಪೀಠದ ಶಂಕರಾಚಾರ್ಯ ಸ್ವಾಮಿ ನಿಶ್ವಲಾನಂದ ಸರಸ್ವತಿ

ಕೊರೋನಾದಂತಹ ಮಹಾಮಾರಿ ಬರಲು ಕಾರಣವೆನೆಂದರೆ ‘ಮಹಾಯಂತ್ರದ (ಅಂದರೆ ಅಣುಬಾಂಬ್, ವಿನಾಶಕ್ಕಾಗಿ ಜೈವಿಕ ಕ್ರಿಮಿಯ ನಿರ್ಮಿತಿ, ಕಾರಖಾನೆಯಲ್ಲಿ ಮಾಲಿನ್ಯ ಮಾಡುವ ಮಾನವ ನಿರ್ಮಿತ ಯಂತ್ರಗಳು) ಅಯೋಗ್ಯ ಉಪಯೋಗವೇ ಆಗಿದೆ. ಒಂದು ವೇಳೆ ಈ ಮಹಾಮಾರಿಯನ್ನು ತಡೆಗಟ್ಟುವುದಿದ್ದರೆ, ಇಂತಹ ಮಹಾಯಂತ್ರಗಳ ಮೇಲೆ ನಿರ್ಬಂಧ ಹೇರಬೇಕು.

ತ್ರಾವಣಕೊರ ದೇವಸ್ಥಾನ ಬೋರ್ಡ್‌ನ ಅಧೀನದಲ್ಲಿರುವ ದೇವಸ್ಥಾನದ ಚಿನ್ನ ಹಾಗೂ ಬೆಳ್ಳಿಯನ್ನು ರಿಜರ್ವ್ ಬ್ಯಾಂಕಿನಲ್ಲಿಡಲಾಗುವುದು !

‘ತ್ರಾವಣಕೊರ್ ದೇವಸ್ಥಾನ ಬೋರ್ಡ್ವ ಅಧೀನದಲ್ಲಿರುವ ಎಲ್ಲ ದೇವಸ್ಥಾನಗಳ ಚಿನ್ನ ಹಾಗೂ ಬೆಳ್ಳಿಯನ್ನು ರಿಜರ್ವ್ ಬ್ಯಾಂಕಿನಲ್ಲಿಡಲಾಗುವುದು. ಅದಕ್ಕನುಸಾರ ಮೊದಲನೇ ಹಂತದಲ್ಲಿ ೨೪ ಕಿಲೋ ಚಿನ್ನ ಹಾಗೂ ಬೆಳ್ಳಿಯನ್ನು ಜಮೆ ಮಾಡಲಾಗುವುದು. ಇದರಿಂದ ‘ಬೋರ್ಡ್ಗೆ ಶೇ. ೨ ರಷ್ಟು ಬಡ್ಡಿ ಸಿಗಲಿದೆ. ಈ ಬೋರ್ಡ್‌ನ ಅಡಿಯಲ್ಲಿ ಶಬರಿಮಲೈ ದೇವಸ್ಥಾನವೂ ಒಳಗೊಂಡಿದೆ.

ದೆಹಲಿಯ ಅಲ್ಪಸಂಖ್ಯಾತ ಆಯೋಗದ ಮತಾಂಧ ಅಧ್ಯಕ್ಷನ ವಿರುದ್ಧ ಹಿಂದೂ ಸೇನೆಯಿಂದ ದೂರು

ಹಿಂದೂ ಸೇನೆಯ ಅಧ್ಯಕ್ಷರಾದ ವಿಷ್ಣು ಗುಪ್ತಾರವರು ದೆಹಲಿಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರಾದ ಜಫರೂಲ್ ಇಸ್ಲಾಮ್ ಖಾನನ ವಿರುದ್ಧ ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಇಸ್ಲಾಮ್ ತನ್ನ ಫೇಸ್‌ಬುಕ್ ಖಾತೆಯಲ್ಲಿ ಮಾಡಿದ ಪೋಸ್ಟ್‌ನಲ್ಲಿ ‘ಭಾರತದ ಮುಸಲ್ಮಾನರು ಅರಬ್ ದೇಶಗಳ ಬಳಿ ಭಾರತದ ವಿರುದ್ಧ ದೂರು ನೀಡಿದರೆ, ಪ್ರಳಯ ಬರುವುದು?, ಎಂದು ಹೇಳಿದ್ದನು.

ವಿದೇಶಿ ತಬಲಿಗೀಯರು ಅಡಗಿಕೊಳ್ಳಲು ಸಹಾಯ ಮಾಡುವ ಮತಾಂಧ ಪ್ರಾಧ್ಯಾಪಕರ ಬ್ಯಾಂಕ್ ಖಾತೆಗಳ ತಪಾಸಣೆ

ಇಲ್ಲಿನ ತಬಲೀಲಿಗಿ ಜಮಾತ್‌ನ ವಿದೇಶಿ ಸದಸ್ಯರು ಅಡಗಿಕೊಳ್ಳಲು ಸಹಾಯ ಮಾಡುವ ಅಲಹಾಬಾದ್ ವಿಶ್ವವಿದ್ಯಾಲಯದ ಮಹಮ್ಮದ್ ಶಾಹಿದ್ ಎಂಬ ಪ್ರಾಧ್ಯಾಪಕರನ್ನು ಬಂಧಿಸಿ ಅವರನ್ನು ವಿಚಾರಣೆ ಮಾಡಲಾಗುತ್ತಿದೆ. ಶಾಹಿದ್‌ರವರನ್ನು ವಿಶ್ವವಿದ್ಯಾಲಯದಿಂದ ಅಮಾನತ್ತುಗೊಳಿಸಲಾಯಿತು.

ಹರಿದ್ವಾರ (ಉತ್ತರಾಖಂಡ)ದಲ್ಲಿ ಹಿಂದೂ ಎಂದು ಹೇಳಿಕೊಂಡು ಹಿಂದೂ ಯುವತಿಯನ್ನು ಪ್ರೇಮದ ಬಲೆಯಲ್ಲಿ ಸಿಲುಕಿಸುವ ಮತಾಂಧನ ಬಂಧನ

ಇಲ್ಲಿನ ಕಾಲಸೀ ಭಾಗದಲ್ಲಿ ಓರ್ವ ಹಿಂದೂ ಯುವತಿಯನ್ನು ಹಿಂದೂ ಎಂದು ಹೇಳಿಕೊಂಡು ಆಕೆಯನ್ನು ಪ್ರೇಮದ ಜಾಲದಲ್ಲಿ ಸಿಲುಕಿಸಿ ಅವಳೊಂದಿಗೆ ಶಾರೀರಿಕ ಸಂಬಂಧವಿಟ್ಟುಕೊಳ್ಳುವುದು, ಅವಳನ್ನು ಅಪಹರಿಸುವುದು ಹಾಗೂ ಇದರ ಬಗ್ಗೆ ಬಾಯಿಬಿಟ್ಟರೆ ಕೊಲೆ ಮಾಡುವುದಾಗಿ ಬೆದರಿಕೆ ನೀಡಿದ ಮೇರೆಗೆ ಪೋಲೀಸರು ಶಾಹರೂಖ್ ಎಂಬ ಯುವಕನನ್ನು ಬಂಧಿಸಿದ್ದಾರೆ.

ಕಾನೂನುಬದ್ಧ ಪಂಚನಾಮೆ ಮಾಡದೇ ಪೊಲೀಸರು ವಾಹನವನ್ನು ವಶಪಡಿಸಿಕೊಳ್ಳುವಂತಿಲ್ಲ ! – ಇಂದೂರ(ತೆಲಂಗಣ)ದ ನ್ಯಾಯವಾದಿಯಿಂದ ಪೊಲೀಸ್ ಅಧೀಕ್ಷಕರಿಗೆ ನೋಟಿಸ್

ಒಂದು ಸ್ಥಳೀಯ ದಿನಪತ್ರಿಕೆಯಲ್ಲಿ ಪ್ರಕಾಶನಗೊಂಡಿದ್ದ ವಾರ್ತೆಗನುಸಾರ, ಪೊಲೀಸರು ನಿಝಾಮಾಬಾದದಲ್ಲಿ ಸಂಚಾರನಿಷೇಧದ ಉಲ್ಲಂಘನೆ ಮಾಡಿದ ಅಪರಾಧದಲ್ಲಿ ಇಲ್ಲಿನ ೯೦೦ ಕ್ಕೂ ಹೆಚ್ಚು ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಅದರಲ್ಲಿ ೮೮೭ ದ್ವಿಚಕ್ರ, ೪೯ ರಿಕ್ಷಾ ಹಾಗೂ ೪೦ ಚತುಷ್ಚಕ್ರ ಚಕ್ರಗಳ ಸಮಾವೇಶವಿದೆ.

ಹಾವಡಾ (ಬಂಗಾಲ)ದಲ್ಲಿ ಮತಾಂಧರಿಂದ ಪೊಲೀಸರ ಮೇಲೆ ಹಲ್ಲೆ

ಸಂಚಾರನಿಷೇಧ ಇರುವಾಗ ಇಲ್ಲಿಯ ಬಹುಸಂಖ್ಯಾತ ಟಕಿಯಾಪಾದ ಬೆಲಿಲಿಯಸ್ ಭಾಗದಲ್ಲಿ ಮತಾಂಧರು ಪೊಲೀಸರ ಮೇಲೆ ಹಲ್ಲೆ ಮಾಡಿದರು. ಮತಾಂಧರು ಪೊಲೀಸರನ್ನು ಥಳಿಸಿದರು, ಅದೇರೀತಿ ಅವರ ಮೇಲೆ ಕಲ್ಲು ತೂರಾಟವೂ ಮಾಡಿದರು. ಇದರಲ್ಲಿ ಇಬ್ಬರು ಪೊಲೀಸರು ಗಂಭೀರವಾಗಿ ಗಾಯಗೊಂಡರು. ಇತರ ಪೊಲೀಸರು ಪಲಾಯನ ಮಾಡಿದ್ದರಿಂದ ಬದುಕಿದರು. ಪೊಲೀಸರ ೨ ವಾಹನಗಳನ್ನೂ ಧ್ವಂಸಗೊಳಿಸಿದರು.