ತ್ರಾವಣಕೊರ ದೇವಸ್ಥಾನ ಬೋರ್ಡ್‌ನ ಅಧೀನದಲ್ಲಿರುವ ದೇವಸ್ಥಾನದ ಚಿನ್ನ ಹಾಗೂ ಬೆಳ್ಳಿಯನ್ನು ರಿಜರ್ವ್ ಬ್ಯಾಂಕಿನಲ್ಲಿಡಲಾಗುವುದು !

ತಿರುವನಂತಪುರಮ್ (ಕೇರಳ) – ‘ತ್ರಾವಣಕೊರ್ ದೇವಸ್ಥಾನ ಬೋರ್ಡ್ವ ಅಧೀನದಲ್ಲಿರುವ ಎಲ್ಲ ದೇವಸ್ಥಾನಗಳ ಚಿನ್ನ ಹಾಗೂ ಬೆಳ್ಳಿಯನ್ನು ರಿಜರ್ವ್ ಬ್ಯಾಂಕಿನಲ್ಲಿಡಲಾಗುವುದು. ಅದಕ್ಕನುಸಾರ ಮೊದಲನೇ ಹಂತದಲ್ಲಿ ೨೪ ಕಿಲೋ ಚಿನ್ನ ಹಾಗೂ ಬೆಳ್ಳಿಯನ್ನು ಜಮೆ ಮಾಡಲಾಗುವುದು. ಇದರಿಂದ ‘ಬೋರ್ಡ್ಗೆ ಶೇ. ೨ ರಷ್ಟು ಬಡ್ಡಿ ಸಿಗಲಿದೆ. ಈ ಬೋರ್ಡ್‌ನ ಅಡಿಯಲ್ಲಿ ಶಬರಿಮಲೈ ದೇವಸ್ಥಾನವೂ ಒಳಗೊಂಡಿದೆ. ಇನ್ನು ‘ಗುರುವಾಯೂರ್ ದೇವಸ್ಥಾನ ಬೋರ್ಡ್ ಸಹ ಆದಷ್ಟು ಬೇಗನೆ ಇದೇ ರೀತಿ ನಿರ್ಣಯ ತೆಗೆದುಕೊಳ್ಳಲಿದೆ. (ಕೇರಳದಲ್ಲಿ ಆಡಳಿತಾರೂಢ ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷದ ರಾಜ್ಯದಲ್ಲಿ ಇತರ ಪಂಥದವರ ಪ್ರಾರ್ಥನಾಸ್ಥಳಗಳ ಬಗ್ಗೆ ಯಾವುದೇ ನಿರ್ಣಯವನ್ನು ತೆಗೆದುಕೊಳ್ಳುವುದಿಲ್ಲ, ಎಂಬುದನ್ನು ಗಮನದಲ್ಲಿಡಿ ! ಹಿಂದೂಗಳ ದೇವಸ್ಥಾನದ ಸರಕಾರಿಕರಣ ಆದನಂತರ ಹೀಗೆ ಆಗುತ್ತದೆ, ಎಂಬುದನ್ನು ಗಮನದಲ್ಲಿಟ್ಟುಕೊಂಡು ಹಿಂದೂಗಳು ಈಗಲಾದರೂ ಕಾನೂನಿನ ಮಾರ್ಗದಿಂದ ವಿರೋಧಿಸುವರೇ ? – ಸಂಪಾದಕರು)