ದೆಹಲಿಯ ಅಲ್ಪಸಂಖ್ಯಾತ ಆಯೋಗದ ಮತಾಂಧ ಅಧ್ಯಕ್ಷನ ವಿರುದ್ಧ ಹಿಂದೂ ಸೇನೆಯಿಂದ ದೂರು

ದೇಶದ್ರೋಹ ಅಪರಾಧ ದಾಖಲಿಸುವಂತೆ ಬೇಡಿಕೆ

ವಿಷ್ಣು ಗುಪ್ತಾ

ಈ ರೀತಿಯ ಬೇಡಿಕೆ ಏಕೆ ಮಾಡಬೇಕಾಗುತ್ತದೆ ? ದೆಹಲಿಯ ಆಮ್ ಆದಮೀ ಪಕ್ಷದ ಸರಕಾರ ಹಾಗೂ ದೆಹಲಿ ಪೋಲೀಸರ ಗಮನಕ್ಕೆ ಏಕೆ ಬರುವುದಿಲ್ಲ ?

ನವ ದೆಹಲಿ – ಹಿಂದೂ ಸೇನೆಯ ಅಧ್ಯಕ್ಷರಾದ ವಿಷ್ಣು ಗುಪ್ತಾರವರು ದೆಹಲಿಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರಾದ ಜಫರೂಲ್ ಇಸ್ಲಾಮ್ ಖಾನನ ವಿರುದ್ಧ ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಇಸ್ಲಾಮ್ ತನ್ನ ಫೇಸ್‌ಬುಕ್ ಖಾತೆಯಲ್ಲಿ ಮಾಡಿದ ಪೋಸ್ಟ್‌ನಲ್ಲಿ ‘ಭಾರತದ ಮುಸಲ್ಮಾನರು ಅರಬ್ ದೇಶಗಳ ಬಳಿ ಭಾರತದ ವಿರುದ್ಧ ದೂರು ನೀಡಿದರೆ, ಪ್ರಳಯ ಬರುವುದು?, ಎಂದು ಹೇಳಿದ್ದನು. ಅದರ ಮೇರೆಗೆ ದೂರನ್ನು ನೀಡಲಾಯಿತು. ಇಸ್ಲಾಮ್‌ನ ವಿರುದ್ಧ ದೇಶದ್ರೋಹ ಹಾಗೂ ಧಾರ್ಮಿಕ ಭಾವನೆಯನ್ನು ನೋಯಿಸುವ ಪ್ರಕರಣದಲ್ಲಿ ಅಪರಾಧ ದಾಖಲಿಸಬೇಕು, ಎಂದು ಇದರಲ್ಲಿ ಆಗ್ರಹಿಸಲಾಯಿತು.