ಸಾಂಕ್ರಾಮಿಕರೋಗಗಳನ್ನು ತಡೆಯಲು ‘ಮಹಾಯಂತ್ರದ ಉಪಯೋಗದ ಮೇಲೆ ನಿರ್ಬಂಧ ಹೇರಬೇಕು ! – ಪುರಿ ಪೀಠದ ಶಂಕರಾಚಾರ್ಯ ಸ್ವಾಮಿ ನಿಶ್ವಲಾನಂದ ಸರಸ್ವತಿ

ಸ್ವಾಮಿ ನಿಶ್ವಲಾನಂದ ಸರಸ್ವತಿ

ಪುರಿ (ಒಡಿಶಾ) – ಕೊರೋನಾದಂತಹ ಮಹಾಮಾರಿ ಬರಲು ಕಾರಣವೆನೆಂದರೆ ‘ಮಹಾಯಂತ್ರದ (ಅಂದರೆ ಅಣುಬಾಂಬ್, ವಿನಾಶಕ್ಕಾಗಿ ಜೈವಿಕ ಕ್ರಿಮಿಯ ನಿರ್ಮಿತಿ, ಕಾರಖಾನೆಯಲ್ಲಿ ಮಾಲಿನ್ಯ ಮಾಡುವ ಮಾನವ ನಿರ್ಮಿತ ಯಂತ್ರಗಳು) ಅಯೋಗ್ಯ ಉಪಯೋಗವೇ ಆಗಿದೆ. ಒಂದು ವೇಳೆ ಈ ಮಹಾಮಾರಿಯನ್ನು ತಡೆಗಟ್ಟುವುದಿದ್ದರೆ, ಇಂತಹ ಮಹಾಯಂತ್ರಗಳ ಮೇಲೆ ನಿರ್ಬಂಧ ಹೇರಬೇಕು, ಎಂದು ಪುರಿಯ ಪುರ್ವಾಮ್ನಾಯ ಗೋವರ್ಧನ ಪೀಠದ ಶಂಕರಾಚಾರ್ಯಸ್ವಾಮಿ ನಿಶ್ಚಲಾನಂದ ಸರಸ್ವತಿ ಇವರು ಪ್ರತಿಪಾದಿಸಿದರು. ‘ಕೊರೋನಾ ಮಹಾಮಾರಿಯಿಂದಾಗಿ ಜಗತ್ತು ಭಯ ಗೊಂಡಿದೆ. ಇದರ ವೈಜ್ಞಾನಿಕ ಹಾಗೂ ನೈಸರ್ಗಿಕ ದೃಷ್ಟಿಯಿಂದ ಕಾರಣಗಳೇನು ಹಾಗೂ ಅದನ್ನು ನಿವಾರಿಸುವುದು ಹೇಗೆ ?, ಎಂಬ ಪ್ರಶ್ನೆಯನ್ನು ಅವರಿಗೆ ಕೇಳಲಾಯಿತು. ಆ ಸಮಯದಲ್ಲಿ ಅವರು ಹೇಳುತ್ತಿದ್ದರು.

ಶಂಕರಾಚಾರ್ಯರು ಮಂಡಿಸಿದ ಅಂಶಗಳು

೧. ಮನುಸ್ಮೃತಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೇನೆಂದರೆ, ಯಾವಾಗ ಮನುಷ್ಯನ ವಿಚಾರ ಮಹಾಮಾರಿ ಹರಡಿಸುವ, ಆರ್ಥಿಕ ಮಹಾಶಕ್ತಿಯಾಗಲು, ಅದೇರೀತಿ ವರ್ಣಸಂಕರ ಮಾಡುವಂತಿರುವುದೋ ಅಂದರೆ ಜಗತ್ತಿನ ಕಲ್ಯಾಣದ ವಿಚಾರ ಇಲ್ಲದಿರುವಾಗ ಆಗ ಮಹಾಯಂತ್ರಗಳ ಮೇಲೆ ನಿರ್ಬಂಧ ಹೇರಬೇಕು.

೨. ಮಹಾಯಂತ್ರದ ಉಪಯೋಗದಿಂದಾಗಿ ಗಂಗೆ, ಯಮುನಾ, ಗೋದಾವರಿ, ಕಾವೇರಿ ಇತ್ಯಾದಿ ನದಿಗಳು ಮಾಲೀನ್ಯಗೊಂಡಿದೆ. ಪರ್ವತ ಹಾಗೂ ಕಾಡುಗಳು ಕ್ಷೀಣಿಸಿವೆ. ಜನರು ದೇವರನ್ನು ಮರೆತಿದ್ದಾರೆ. ಅವಿಭಕ್ತ ಕುಟುಂಬ ಪದ್ದತಿ ಕ್ಷೀಣಿಸಿದೆ ಹಾಗೂ ಮನುಷ್ಯನು ಕೇವಲ ಮಕ್ಕಳನ್ನು ಜನ್ಮ ನೀಡುವ ಯಂತ್ರವಾಗಿದ್ದಾನೆ. ಇವೆಲ್ಲವು ಏನು ? ಇವೆಲ್ಲವು ಸಹ ವಿಕೃತಿಯಾಗಿದೆ. ಆದ್ದರಿಂದ ಈ ರೀತಿಯ ವಿಪತ್ತುಗಳು ಬರುತ್ತವೆ ಹಾಗೂ ಅದರ ನಿವರಣೆಗಾಗಿ ಮಹಾಯಂತ್ರದ ಮೇಲೆ ನಿರ್ಬಂಧ ಹೇರಬೇಕು.

೩. ಅಭಿವೃದ್ಧಿಯ ಹೆಸರಿನಲ್ಲಿ ಸದ್ಯದ ಮನುಷ್ಯರು ವೇದಶಾಸ್ತ್ರಕ್ಕನುಸಾರ ನಡೆದುಕೊಳ್ಳದೇ ಸ್ವಂತ ಮನಸ್ಸಿನಿಂದಲೇ ವರ್ತಿಸುತ್ತಿದ್ದಾರೆ. ಆದ್ದರಿಂದ ಜಗತ್ತು ವಿನಾಶದ ಮಾರ್ಗದಲ್ಲಿ ಸಾಗುತ್ತಿದೆ. ಅಭಿವೃದ್ಧಿಯ ಹೆಸರಿನಲ್ಲಿ ಪೃಥ್ವಿಯ ಮೇಲೆ ಮಾಲಿನ್ಯ ಹೆಚ್ಚಾಗಿದೆ. ಮನುಷ್ಯನಿಗೆ ಆರೋಗ್ಯ ಬೇಕಿದ್ದಲ್ಲಿ ವೇದಗಳು ಹೇಳಿದ ಅಂಶಗಳಂತೆ ಆಚರಣೆ ಮಾಡಿ ಪೃಥ್ವಿಯ ಸಮತೋಲನವನ್ನು ಕಾಪಾಡಬೇಕಾಗುತ್ತದೆ., ಎಂದರು.

ಸನಾತನ ಪದ್ದತಿಗನುಸಾರ ಆಚರಣೆ ಬೇಕು !

ಶಂಕರಾಚಾರ್ಯರು ತಮ್ಮ ಮಾತನ್ನು ಮುಂದುವರಿಸುತ್ತ, “ಮನುಷ್ಯನ ಆರೋಗ್ಯ ಚೆನ್ನಾಗಿರಲು ಮನುಷ್ಯನ ಆಹಾರ ಹಾಗೂ ವಿಹಾರ ಸನಾತನ ಪದ್ದತಿಗನುಸಾರ ಇರಬೇಕು. ಅದಕ್ಕಾಗಿ ಕೈ-ಕಾಲು ತೊಳೆದುಕೊಂಡೇ ಮನೆಯಲ್ಲಿ ಪ್ರವೇಶ ಮಾಡುವುದು, ನಮಸ್ಕಾರ ಮಾಡುವುದು, ಹಸ್ತಲಾಘವ ಮಾಡದಿರುವುದು, ಸಗಣಿ, ಗೋಮೂತ್ರದ ಉಪಯೋಗವನ್ನು ಮಾಡುವುದು, ಸಗಣಿಯಿಂದ ಭೂಮಿಯನ್ನು ಸಾರಿಸಿ ಅದರ ಮೇಲೆ ಹುಲ್ಲಿನಿಂದ ಸಿದ್ಧಪಡಿಸಿದ ಚಾಪೆಯ ಮೇಲೆ ಮಲಗುವುದು, ಬೆರಣಿ ಉಪಯೋಗಿಸಿ ಅಡುಗೆ ತಯಾರಿಸುವುದು ಇತ್ಯಾದಿ ಸನಾತನ ಪದ್ದತಿಗನುಸಾರ ಹೇಳಿದ ಅಂಶವನ್ನು ಆಚರಣೆಗೆ ತರಬೇಕು; ಇಂದು ಮಾತ್ರ ಸನಾತನ ಪದ್ದತಿಗನುಸಾರದ ಆಚರಣೆಗೆ ಸಂಪ್ರದಾಯ ಎಂದು ಹೇಳಿ ಅದನ್ನು ತುಚ್ಛವಾಗಿ ಕಾಣುತ್ತಾರೆ. ಅದಕ್ಕೆ ಜಾತಿಯ ಮುದ್ರೆಯನ್ನು ಒತ್ತುತ್ತಾರೆ ಹಾಗೂ ಆ ರೀತಿಯ ಆಚರಣೆಯನ್ನು ಮಾಡುವವರನ್ನು ಕೀಳಾಗಿ ನೋಡಲಾಗುತ್ತದೆ.