ಕಾನೂನುಬದ್ಧ ಪಂಚನಾಮೆ ಮಾಡದೇ ಪೊಲೀಸರು ವಾಹನವನ್ನು ವಶಪಡಿಸಿಕೊಳ್ಳುವಂತಿಲ್ಲ ! – ಇಂದೂರ(ತೆಲಂಗಣ)ದ ನ್ಯಾಯವಾದಿಯಿಂದ ಪೊಲೀಸ್ ಅಧೀಕ್ಷಕರಿಗೆ ನೋಟಿಸ್

ಇಂದೂರ್ (ನಿಝಾಮಾಬಾದ, ತೆಲಂಗಾಣ) – ಇಲ್ಲಿಯ ನ್ಯಾಯವಾದಿ ಗಂಗಾಧರ ಗೌಡ ಇವರು ನಿಝಾಮಾಬಾದ ಜಿಲ್ಲೆಯ ಪೊಲೀಸ್ ಅಧೀಕ್ಷರಿಗೆ ನೋಟಿಸನ್ನು ಕಳುಹಿಸಿ ಕಾನೂನುಬದ್ದ ಪಂಚನಾಮೆಯನ್ನು ಮಾಡದೇ ವಾಹನವನ್ನು ವಶಪಡಿಸಿಕೊಂಡಿರುವ ಪೊಲೀಸರ ಈ ಕ್ರಮಕ್ಕೆ ಆಕ್ಷೇಪವ್ಯಕ್ತಪಡಿಸಿದ್ದಾರೆ. ಅದಕ್ಕಾಗಿ ಅವರು ಭಾರತೀಯ ದಂಡಸಂಹಿತೆಯ ಕಲಂನ ಉಲ್ಲೇಖವನ್ನು ಮಾಡುತ್ತ ಉಚ್ಚ ನ್ಯಾಯಾಲಯದ ಮೊಕದ್ದಮೆಯ ಸಂದರ್ಭವನ್ನು ನೀಡಿದ್ದಾರೆ. ಕೆಲವು ದಿನಗಳ ಹಿಂದೆ ಇದೇ ರೀತಿಯಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತರ ದ್ವಿಚಕ್ರ ವಾಹನಗಳನ್ನೂ ಪೊಲೀಸರು ವಶಪಡಿಸಿಕೊಂಡಿದ್ದರು.

೧. ಒಂದು ಸ್ಥಳೀಯ ದಿನಪತ್ರಿಕೆಯಲ್ಲಿ ಪ್ರಕಾಶನಗೊಂಡಿದ್ದ ವಾರ್ತೆಗನುಸಾರ, ಪೊಲೀಸರು ನಿಝಾಮಾಬಾದದಲ್ಲಿ ಸಂಚಾರನಿಷೇಧದ ಉಲ್ಲಂಘನೆ ಮಾಡಿದ ಅಪರಾಧದಲ್ಲಿ ಇಲ್ಲಿನ ೯೦೦ ಕ್ಕೂ ಹೆಚ್ಚು ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಅದರಲ್ಲಿ ೮೮೭ ದ್ವಿಚಕ್ರ, ೪೯ ರಿಕ್ಷಾ ಹಾಗೂ ೪೦ ಚತುಷ್ಚಕ್ರ ಚಕ್ರಗಳ ಸಮಾವೇಶವಿದೆ.

೨. ‘ಈ ವಾಹನಗಳನ್ನು ವಶಪಡಿಸಿಕೊಳ್ಳುತ್ತಿರುವಾಗ ಕ್ರಿಮಿನಲ್ ಪ್ರಕ್ರಿಯೆಗನುಸಾರ ಇಬ್ಬರು ಪಂಚರೆದುರು ವಾಃನದ ವಾಹನಗಳ ಪಂಚನಾಮೆಯನ್ನು ಮಾಡುವುದು ಅಗತ್ಯವಿದ್ದು ಅದು ಮಾಡಿಲ್ಲ’, ಎಂಬುದು ಕಂಡುಬರುತ್ತದೆ. ‘ಇಂತಹ ಪಂಚನಾಮೆಯಾಗಿದ್ದಲ್ಲಿ ಅದಕ್ಕಾಗಿ ಸಂಚಾರ ನಿಷೇಧದಲ್ಲಿ ಪಂಚರು ಹೇಗೆ ಸಿಕ್ಕಿದರು ?’, ಎಂಬುದು ತಿಳಿಸಬೇಕು.

೩. ನ್ಯಾಯವಾದಿ ಗೌಡ ಇವರು ನೋಟಿಸಿನಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿಯ ಸುಂದರಭಾಯಿ ಅಂಬಾಲಾಲ ದೇಸಾಯಿ ವಿ. ಗುಜರಾತ ರಾಜ್ಯ ಹಾಗೂ ಈ ರೀತಿಯ ಎರಡು, ಅದೇರೀತಿ ದೆಹಲಿ ಉಚ್ಚ ನ್ಯಾಯಾಲಯದಲ್ಲಿಯ ಒಂದು ಮೊಕದ್ದಮೆಯ ಸಂದರ್ಭವನ್ನು ನೀಡಿದೆ. ಅದರಲ್ಲಿ ಒಂದು ಆದೇಶಕ್ಕನುಸಾರ, ‘ವಾದ ಮಾಡುವವರ ವಶಪಡಿಸಿಕೊಂಡಿರುವ ವಾಹನವನ್ನು ಅವರಿಗೆ ಹಿಂದಿರುಗಿಸಬೇಕು ಹಾಗೂ ವಾಹನಕ್ಕೆ ಏನಾದರೂ ಹಾನಿಯಾಗಿದ್ದಲ್ಲಿ ಅದರ ನಷ್ಟ ಪರಿಹಾರವನ್ನು ಸರಕಾರದಿಂದ ಭರಿಸಬೇಕು’, ಎಂದು ಹೇಳಲಾಗಿದೆ. ಅದರಂತೆ ‘ಯಾವುದಾದರೊಂದು ವಾಹನವನ್ನು ವಶಪಡಿಸಿಕೊಂಡಿದ್ದಲ್ಲಿ, ಅದರ ಸೂಚನೆಯನ್ನು ಕೂಡಲೇ ನ್ಯಾಯಾಧೀಶರಿಗೆ ನೀಡಬೇಕು ಹಾಗೂ ನ್ಯಾಯಾಧೀಶರು ಅದರ ಮೇಲೆ ಕ್ರಮ ಕೈಗೊಂಡು ಆ ವಾಹನವನ್ನು, ವಾಹನ ಮಾಲೀಕರಿಗೆ ಹಿಂದಿರುಗಿಸಬೇಕು’, ಎಂಬುದು ಕಾನೂನಿನಲ್ಲಿ ಅವಕಾಶ ಇದೆ.

೪. ‘ಆದ್ದರಿಂದ ಪೊಲೀಸ ವ್ಯವಸ್ಥೆಯು ವಾಹನವನ್ನು ವಶಪಡಿಸಿಕೊಳ್ಳುತ್ತಿರುವಾಗ ಈ ಮೇಲಿನ ನಿಯಮದ ಪಾಲನೆಯನ್ನು ಮಾಡಿದ್ದಾರೆಯೇ ?, ಎಂಬುದು ಪೊಲೀಸ್ ಅಧೀಕ್ಷಕರು ಸ್ಪಷ್ಟಪಡಿಸಬೇಕು’, ಎಂದು ನ್ಯಾಯವಾದಿ ಗೌಡ ಇವರು ಅವರ ನೋಟಿಸಿನಲ್ಲಿ ತಿಳಿಸಿದ್ದಾರೆ.