ಹಾವಡಾ (ಬಂಗಾಲ)ದಲ್ಲಿ ಮತಾಂಧರಿಂದ ಪೊಲೀಸರ ಮೇಲೆ ಹಲ್ಲೆ

* ಇಬ್ಬರು ಪೊಲೀಸರಿಗೆ ಗಂಭೀರ ಗಾಯ * ಪೊಲೀಸರ ೨ ವಾಹನಗಳ ಧ್ವಂಸ

* ಮತಾಂಧರಿಂದ ಪೆಟ್ಟು ತಿನ್ನುವಲ್ಲಿ ಪರಾಕ್ರಮ ಸಾಧಿಸುವ ಭಾರತೀಯ ಪೊಲೀಸರು !

* ದೇಶದಲ್ಲಿ ಈ ರೀತಿಯ ಘಟನೆಗಳು ಸತತವಾಗಿ ನಡೆಯುತ್ತಿರುವಾಗ ಯಾರೂ ಮತಾಂಧರ ಹಿಂಸಾತ್ಮಕ ಮಾನಸಿಕತೆಯ ಬಗ್ಗೆ ಏನೂ ಮಾತನಾಡುವುದಿಲ್ಲ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !

ಹಾವಡಾ (ಬಂಗಾಲ) – ಸಂಚಾರನಿಷೇಧ ಇರುವಾಗ ಇಲ್ಲಿಯ ಬಹುಸಂಖ್ಯಾತ ಟಕಿಯಾಪಾದ ಬೆಲಿಲಿಯಸ್ ಭಾಗದಲ್ಲಿ ಮತಾಂಧರು ಪೊಲೀಸರ ಮೇಲೆ ಹಲ್ಲೆ ಮಾಡಿದರು. ಮತಾಂಧರು ಪೊಲೀಸರನ್ನು ಥಳಿಸಿದರು, ಅದೇರೀತಿ ಅವರ ಮೇಲೆ ಕಲ್ಲು ತೂರಾಟವೂ ಮಾಡಿದರು. ಇದರಲ್ಲಿ ಇಬ್ಬರು ಪೊಲೀಸರು ಗಂಭೀರವಾಗಿ ಗಾಯಗೊಂಡರು. ಇತರ ಪೊಲೀಸರು ಪಲಾಯನ ಮಾಡಿದ್ದರಿಂದ ಬದುಕಿದರು. ಪೊಲೀಸರ ೨ ವಾಹನಗಳನ್ನೂ ಧ್ವಂಸಗೊಳಿಸಿದರು. ಈ ಘಟನೆಯು ಎಪ್ರಿಲ್ ೨೮ ರಂದು ನಡೆಯಿತು. ತದನಂತರ ಪರಿಸ್ಥಿತಿಯನ್ನು ನಿಯಂತ್ರಿಸಲು ಅಲ್ಲಿ ಕ್ಷಿಪ್ರಕಾರ್ಯಾಚರಣೆ ದಳವನ್ನು ನೇಮಿಸಲಾಗಿದೆ. ಈ ಘಟನೆಯ ‘ವಿಡಿಯೋ’ ಸಾಮಾಜಿಕ ಜಾಲತಾಣಗಳ ಮಾಧ್ಯಮದಿಂದ ಪ್ರಸಾರವಾಗಿದೆ. ಈ ಸ್ಥಳವನ್ನು ಕೊರೋನಾಗೆ ಸಂಬಂಧಪಟ್ಟಂತೆ ‘ರೆಡ್ ಝೋನ್’ ಎಂದು ಘೋಷಿಸಲಾಗಿರುವಾಗ ಅಲ್ಲಿ ಮತಾಂಧರು ಮಾರುಕಟ್ಟೆಯಲ್ಲಿ ಜನದಟ್ಟಣೆ ಮಾಡಿದ್ದರು. ಈ ಮಾಹಿತಿ ಸಿಕ್ಕಿದ ನಂತರ ಪೊಲೀಸರು ಅವರನ್ನು ಚದುರಿಸಲು ಪ್ರಯತ್ನಿಸುತ್ತಿರುವಾಗ, ಮತಾಂಧರು ಅವರ ಮೇಲೆ ದಾಳಿ ಮಾಡಿದರು.