ಹರಿದ್ವಾರ (ಉತ್ತರಾಖಂಡ)ದಲ್ಲಿ ಹಿಂದೂ ಎಂದು ಹೇಳಿಕೊಂಡು ಹಿಂದೂ ಯುವತಿಯನ್ನು ಪ್ರೇಮದ ಬಲೆಯಲ್ಲಿ ಸಿಲುಕಿಸುವ ಮತಾಂಧನ ಬಂಧನ

ಪೋಲೀಸರು ಶಾಹರೂಖ್ ಎಂಬ ಯುವಕನನ್ನು ಬಂಧಿಸಿದ್ದಾರೆ

ಆಕೆ ಪ್ರೀತಿಸಿದಳು, ಈತ ವಂಚಿಸಿದ !

ಇಂತಹ ಘಟನೆಗಳಿಗೆ ತಥಾಕಥಿತ ಪ್ರಗತಿಪರರು, ಜಾತ್ಯತೀತವಾದಿಗಳು ಅಥವಾ ಪ್ರಸಾರ ಮಾಧ್ಯಮಗಳಾಗಲಿ ಮಾತನಾಡುವುದಿಲ್ಲ; ಆದರೆ ಹಿಂದೂಗಳೇನಾದರೂ ‘ಲವ್ ಜಿಹಾದ್?ನ ಹೆಸರು ಉಚ್ಚರಿಸಿದರೆ ಮಾತ್ರ ತಕ್ಷಣ ಅದನ್ನು ವಿರೋಧಿಸುತ್ತಾರೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿರಿ !

ಹರಿದ್ವಾರ (ಉತ್ತರಾಖಂಡ) – ಇಲ್ಲಿನ ಕಾಲಸೀ ಭಾಗದಲ್ಲಿ ಓರ್ವ ಹಿಂದೂ ಯುವತಿಯನ್ನು ಹಿಂದೂ ಎಂದು ಹೇಳಿಕೊಂಡು ಆಕೆಯನ್ನು ಪ್ರೇಮದ ಜಾಲದಲ್ಲಿ ಸಿಲುಕಿಸಿ ಅವಳೊಂದಿಗೆ ಶಾರೀರಿಕ ಸಂಬಂಧವಿಟ್ಟುಕೊಳ್ಳುವುದು, ಅವಳನ್ನು ಅಪಹರಿಸುವುದು ಹಾಗೂ ಇದರ ಬಗ್ಗೆ ಬಾಯಿಬಿಟ್ಟರೆ ಕೊಲೆ ಮಾಡುವುದಾಗಿ ಬೆದರಿಕೆ ನೀಡಿದ ಮೇರೆಗೆ ಪೋಲೀಸರು ಶಾಹರೂಖ್ ಎಂಬ ಯುವಕನನ್ನು ಬಂಧಿಸಿದ್ದಾರೆ. ಅವನು ತನ್ನ ಹೆಸರು ಅರವಿಂದನೆಂದು ಹೇಳಿದ್ದನು. ಹಿಂದೂ ಯುವತಿಗೆ ಶಾಹರೂಖನ ನಿಜವಾದ ಮಾಹಿತಿ ತಿಳಿದ ಮೇಲೆ ಅವಳು ಅವನನ್ನು ಕಡೆಗಣಿಸಲು ಪ್ರಯತ್ನಿಸಿದಳು. ಆದ್ದರಿಂದ ಶಾಹರೂಖನು ಆಕೆಯ ಕುಟುಂಬದವರನ್ನು ಕೊಲ್ಲುವುದಾಗಿ ಬೆದರಿಕೆ ನೀಡಿದ್ದರಿಂದ ಅವಳು ಆ ಯುವಕನೊಂದಿಗೆ ಓಡಿ ಹೋದಳು. ಆ ವಿಷಯದಲ್ಲಿ ಪೋಲೀಸ್ ಠಾಣೆಯಲ್ಲಿ ದೂರು ನೀಡಿದ ಬಳಿಕ ಪೋಲೀಸರು ಶಾಹರೂಖ್ ಹಾಗೂ ಆ ಯುವತಿಯನ್ನು ಹುಡುಕಿ ತೆಗೆದರು. ಅನಂತರ ಈ ಸಂಪೂರ್ಣ ಪ್ರಕರಣದ ಬಗ್ಗೆ ಮಾಹಿತಿ ಸಿಕ್ಕಿತು.