ಸರಕಾರವು ಇಂತಹವರಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕು !
ಬೆಂಗಳೂರು – ಎಪ್ರಿಲ್ ೧೯ ರಂದು ಕೊರೋನಾ ಶಂಕಿತರ ಮಾಹಿತಿಯನ್ನು ಒಟ್ಟು ಮಾಡಲು ತೆರಳಿದ್ದ ವೈದ್ಯಕೀಯ ತಂಡದ ಮೇಲೆ ದಾಳಿ ಮಾಡಿದ ೫೯ ಮತಾಂಧರನ್ನು ಪೊಲೀಸರು ಬಂಧಿಸಿದ್ದಾರೆ. ಇಲ್ಲಿಯ ಪಾದರಾಯನಪುರ ಭಾಗದಲ್ಲಿ ಈ ದಾಳಿ ನಡೆದಿತ್ತು. ಪೊಲೀಸರು ಬಂಧಿಸಿದ್ದ ಮತಾಂಧರಲ್ಲಿ ಫಿರೋಜಾ ಹೆಸರಿನ ಓರ್ವ ಮಹಿಳೆಯೂ ಇದ್ದಾಳೆ. ಈ ಮಹಿಳೆಯೇ ಅಲ್ಲಿಯ ಮತಾಂಧರಿಗೆ ವೈದ್ಯಕೀಯ ತಂಡದ ವಿರುದ್ಧ ಪ್ರಚೋದಿಸಿದ್ದಳು. ಈ ಪ್ರಕರಣದಲ್ಲಿ ಒಟ್ಟು ೫ ಅಪರಾಧಗಳನ್ನು ದಾಖಲಿಸಲಾಗಿದೆ. ಸದ್ಯ ಆ ಭಾಗದಲ್ಲಿ ದೊಡ್ಡ ಪ್ರಮಾಣದಲ್ಲಿ ಪೊಲೀಸರನ್ನು ನೇಮಿಸಲಾಗಿದೆ. ರಾಜ್ಯದ ಗೃಹಸಚಿವ ಬಸವರಾಜ ಬೊಮ್ಮಯಿ ಇವರು ಈ ಪ್ರದೇಶವನ್ನು ವೀಕ್ಷಿಸಿದ್ದಾರೆ.