ಪಾಲಘರನಲ್ಲಿ ಸಾಧುಗಳ ಹಂತಕರನ್ನು ಬಿಡುವುದಿಲ್ಲ !

ಮುಖ್ಯಮಂತ್ರಿ ಉದ್ಧವ ಠಾಕರೆ

ಮುಂಬೈ – ಪಾಲಘರನಲ್ಲಿ ಸಂತರ ಹತ್ಯೆಯಾಗಿದ್ದು ಅತ್ಯಂತ ನಾಚಿಕೆಯ ವಿಷಯವಾಗಿದೆ. ಈ ರೀತಿಯ ಘಟನೆಯು ಮಹಾರಾಷ್ಟ್ರದಲ್ಲಿ ಆಗಬಾರದು. ಇದು ನಮ್ಮ ಸಂಸ್ಕೃತಿ ಅಲ್ಲ. ಈ ಘಟನೆ ಹಿಂದೂ-ಮುಸಲ್ಮಾನ ನಡುವಿನ ವಾದದಿಂದಾಗಿರದೇ ಇದು ತಪ್ಪು ತಿಳುವಳಿಕೆಯಿಂದ ಆಗಿರುವ ಘಟನೆಯಾಗಿದೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ೫ ಮುಖ್ಯ ಅಪರಾಧಿಗಳನ್ನು ಸೇರಿ ಒಟ್ಟು ೧೦೦ ಕ್ಕೂ ಹೆಚ್ಚು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಅವರೆಲ್ಲರು ಕಾಡಿನಲ್ಲಿ ಅಡಗಿ ಕುಳಿತ್ತಿದ್ದಾರೆ, ಅವರನ್ನು ಪೊಲೀಸರು ಹುಡುಕುತ್ತಿದ್ದಾರೆ. ಈ ಪ್ರಕರಣದಲ್ಲಿ ೨ ಪೊಲೀಸರನ್ನು ಅಮಾನತುಗೊಳಿಸಲಾಗಿದೆ. ಈ ಪ್ರಕರಣವನ್ನು ಅಪರಾಧ ತನಿಖಾ ತಂಡ (ಸಿ.ಐ.ಡಿ ಮೂಲಕ) ತನಿಖೆಯನ್ನು ಮಾಡಲಾಗುವುದು. ಹಲ್ಲೆ ಮಾಡಿದವರಲ್ಲಿ ಯಾರನ್ನೂ ಬಿಡುವುದಿಲ್ಲ, ಎಂಬ ಎಚ್ಚರಿಕೆಯನ್ನು ಮುಖ್ಯಮಂತ್ರಿ ಉದ್ಧವ ಠಾಕರೆ ಇವರು ನೀಡಿದರು. ಎಪ್ರಿಲ್ ೨೦ ರಂದು ಸಾಮಾಜಿಕ ಮಾಧ್ಯಮಗಳ ಮೂಲಕ ಜನರೊಂದಿಗೆ ಚರ್ಚೆಯನ್ನು ಮಾಡುತ್ತಿರುವಾಗ ಈ ಮೇಲಿನ ಹೇಳಿಕೆಯನ್ನು ನೀಡಿದರು.