ಪಾಕಿಸ್ತಾನದಿಂದ ನಕಲಿ ‘ಆರೋಗ್ಯ ಸೇತು ಆಪ್‌ನ ಮೂಲಕ ಭಾರತೀಯ ಸೈನಿಕರ ಮಾಹಿತಿಯನ್ನು ಕದಿಯಲು ಯತ್ನ !

ಸೈನಿಕರು ಹಾಗೂ ಅರೆ ಸೇನಾ ಪಡೆಗಳಿಗೋಸ್ಕರ ಮಾರ್ಗದರ್ಶಕ ಸೂಚನೆ ಜಾರಿ

ಪಾಕ್‌ನ ಈ ರೀತಿಯ ಕುತಂತ್ರಕ್ಕೆ ಉತ್ತರ ನೀಡುವ ಬದಲು ಸಂಪೂರ್ಣ ಪಾಕ್ ಅನ್ನೇ ನಾಶ ಮಾಡುವುದು ಅಗತ್ಯ !

ನವ ದೆಹಲಿ – ಪಾಕ್ ಗೂಡಾಚಾರ ಸಂಸ್ಥೆ ಐ.ಎಸ್.ಐ. ಭಾರತದಲ್ಲಿ ಕೊರೋನಾದ ಸಂದರ್ಭದಲ್ಲಿ ತಯಾರಿಸಲಾಗಿರುವ ‘ಆರೋಗ್ಯ ಸೇತು ಆಪ್‌ನಂತ ನಕಲಿ ಆಪ್ ತಯಾರಿಸಿದೆ. ಈ ಮೂಲಕ ಅವರು ಭಾರತೀಯ ಸೈನಿಕರ ಸಂಚಾರಿವಾಣಿಯನ್ನು ಹ್ಯಾಕ್ ಮಾಡಲು ಪ್ರಯತ್ನಿಸುತ್ತಿದೆ ಎಂಬ ಮಾಹಿತಿ ಬೆಳಕಿಗೆ ಬಂದಿರುವುದರಿಂದ ಸೈನಿಕರು ಹಾಗೂ ಅರೆಸೇನಾ ಪಡೆಗಳಿಗಾಗಿ ಮಾರ್ಗದರ್ಶಕ ಸೂಚನೆಯನ್ನು ಜಾರಿಗೊಳಿಸಲಾಗಿದೆ. ಇದರಲ್ಲಿ ಈ ‘ಆಪ್ ಡೌನ್‌ಲೋಡ್ ಮಾಡಲು mಥಿgov.iಟಿ ಎಂಬ ಜಾಲತಾಣವನ್ನೇ ಬಳಸಿ, ಎಂದು ಹೇಳಲಾಗಿದೆ. ನಕಲಿ ‘ಆರೋಗ್ಯ ಸೇತು ಆಪ್‌ಅನ್ನು ಹೇಗೆ ಕಂಡುಹಿಡಿಯಬೇಕು ಎಂಬುದರ ಮಾಹಿತಿ ನೀಡಲಾಗಿದೆ. ಈ ಆಪ್ ಅನ್ನು ಡೌನ್‌ಲೋಡ್ ಮಾಡುತ್ತಿರುವಾಗ ಬೇರೆ ಆಪ್‌ಗಗಳು ಇನ್ಸ್ಟಾಲ್ ಆಗಲು ಅನುಮತಿ ಕೇಳುವಾಗ ಈ ಆಪ್ ನಕಲಿಯಾಗಿದೆ, ಎಂಬುದು ಗಮನಕ್ಕೆ ಬರುವುದು. ಒಂದು ವೇಳೆ ನಕಲಿ ಆಪ್ ಡೌನ್‌ಲೋಡ್ ಆಗಿದ್ದರೆ, ನಿಮ್ಮ ಸಂಚಾರಿವಾಣಿಯು ಹ್ಯಾಕ್ ಆಗುತ್ತದೆ ಹಾಗೂ ಅದರಲ್ಲಿರುವ ಎಲ್ಲಾ ಮಾಹಿತಿಗಳನ್ನು ಹ್ಯಾಕರ್‌ನಿಂದ ಪಡೆದುಕೊಳ್ಳಲಾಗುತ್ತದೆ. ಈ ಮಾಹಿತಿಯನ್ನು ಕಮಾಂಡ್ ರೂಮ್‌ನಲ್ಲಿ ಭದ್ರಪಡಿಸಲಾಗುತ್ತದೆ. ಈ ಕಮಾಂಡ್ ರೂಮ್ ನೆದರ್‌ಲ್ಯಾಂಡ್‌ನಲ್ಲಿದೆ, ಎಂದು ತನಿಖೆ ಮೂಲಗಳು ಹೇಳಿದೆ.