ಮುಖ್ಯಮಂತ್ರಿ ಯೋಗಿ ಆದಿತ್ಯನಾಥರಿಗೆ ಬೆದರಿಕೆಯೊಡ್ಡಿದ ಮತಾಂಧ ಪೊಲೀಸನ ಬಂಧನ
ಸಾಮಾಜಿಕ ಮಾಧ್ಯಮಗಳಿಂದ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರ ಮೇಲೆ ಗುಂಡಿಕ್ಕಿ ಕೊಲ್ಲುವ ಬೆದರಿಕೆಯೊಡ್ಡಿದ ತನ್ವೀರ್ ಖಾನ್ ಈ ಪೊಲೀಸನನ್ನು ಬಂಧಿಸಲಾಗಿದೆ. ಎಪ್ರಿಲ್ ೨೪ ರಂದು ಆತ ಫೇಸ್‌ಬುಕ್‌ನಲ್ಲಿ ಬೆದರಿಕೆಯೊಡ್ಡಿದ್ದನು. ತನ್ವೀರ್ ಖಾನ್ ಗಾಝಿಪುರದ ದಿಲದಾರ್‌ನಗರ ಭಾಗದಲ್ಲಿ ವಾಸವಾಗಿದ್ದು ಹಾಗೂ ಬಿಹಾರದ ನಾಲಂದಾದಲ್ಲಿ ಪೊಲೀಸ್ ಪೇದೆ ಎಂದು ನೇಮಿಸಲಾಗಿತ್ತು.