ತಬಲೀಗಿ ಜಮಾತ್ ಉದ್ದೇಶಪೂರ್ವಕವಾಗಿ ಕೊರೋನಾವನ್ನು ಹಬ್ಬಿಸಿದರು, ಇದೊಂದು ಅಕ್ಷಮ್ಯ ಅಪರಾಧ ! ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿ, ಉತ್ತರಪ್ರದೇಶ

ಕೇಂದ್ರ ಸರಕಾರವು ಇಂತಹವರಿಗೆ ಕಠಿಣ ಶಿಕ್ಷೆ ನೀಡಲು ಪ್ರಯತ್ನಿಸಬೇಕು, ಹಾಗೆ ಮಾಡುವುದರಿಂದ ಪುನಃ ಈ ರೀತಿ ಮಾಡಲು ಯಾರಿಗೂ ಕೂಡ ಧೈರ್ಯ ಬರುವುದಿಲ್ಲ !

ಲಕ್ಷ್ಮಣಪುರಿ (ಉತ್ತರಪ್ರದೇಶ) – ತಬಲೀಗಿ ಜಮಾತ್ ನವರ ಕೃತ್ಯವು ತುಂಬಾ ತಪ್ಪಾಗಿದೆ. ಅವರು ಸಮಯಕ್ಕೆ ಸರಿಯಾಗಿ ಆಡಳಿತವರ್ಗಕ್ಕೆ ಮಾಹಿತಿ ನೀಡಬೇಕಾಗಿತ್ತು; ಆದರೆ ಅವರು ಕೊರೋನಾವನ್ನು ಅಡಗಿಸಿಟ್ಟರು. ಅವರ ಹೇಳಿಕೆಯಿಂದಾಗಿ ಜನರಲ್ಲಿ ತಪ್ಪಾದ ಮಾಹಿತಿ ಹರಡಿತು. ಅನಂತರ ನೋಡನೋಡುತ್ತಾ ಅನೇಕರಿಗೆ ಕೊರೋನಾ ಸಂಕ್ರಮಿಸಿತು. ಅವರು ಉದ್ದೇಶಪೂರ್ವಕವಾಗಿ ಮಾಡಿದ ಕೃತ್ಯವೆಂದರೆ ಇದೊಂದು ಅಕ್ಷಮ್ಯ ಅಪರಾಧವಾಗಿದೆ, ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರವರು ಉತ್ತರಪ್ರದೇಶದಲ್ಲಿ ಕೊರೋನಾ ಹಬ್ಬಿಸಲು ತಬಲೀಗಿ ಜಮಾತ್‌ನವರೇ ಹೊಣೆಗಾರರು ಎಂದು ಹೇಳಿದರು.

ಯೋಗಿ ಆದಿತ್ಯನಾಥರವರು ಮುಂದೆ ನುಡಿದರು,

೧. ಉತ್ತರಪ್ರದೇಶದಲ್ಲಿ ೩ ಸಾವಿರಕ್ಕಿಂತ ಹೆಚ್ಚು ತಬಲಿಗೀಗಳು ವಿವಿಧ ಸ್ಥಳಗಳಲ್ಲಿ ಅಪರಾಧ ಮಾಡಿದರು. ಪೋಲೀಸರು ಅವರನ್ನು ವಶಪಡಿಸಿಕೊಂಡು ಪ್ರತ್ಯೇಕಿಸಿದರು.

೨. ತಬಲಿಗೀಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅವರು ಅಲ್ಲಿ ಕೂಡ ಕೊರೋನಾ ಹಬ್ಬಿಸಿದರು. ಅವರು ಆಡಳಿತದ ಕರೆಗೆ ಸೂಕ್ತ ಸಮಯದಲ್ಲಿ ಸ್ಪಂದಿಸಿದ್ದರೆ ಪರಿಸ್ಥಿತಿ ಹದಗೆಡುತ್ತಿರಲಿಲ್ಲ.

೩. ತಬಲಿಗೀಗಳಿಂದಲೇ ಕೊರೋನಾವು ವೇಗವಾಗಿ ಸಾಂಕ್ರಾಮಿಕವಾಯಿತು, ಎಂದು ಹೇಳುವುದರಲ್ಲಿ ನನಗೆ ಯಾವುದೇ ರೀತಿಯ ಸಂಕೋಚವೆನಿಸುವುದಿಲ್ಲ.

೪. ತಬಲಿಗೀ ಜಮಾತಿಗಾಗಿ ಕೆಲಸ ಮಾಡುವವರು ‘ಕೊರೋನಾ ರೋಗಾಣುವಿನ ವಾಹಕರೆಂದು ಕೆಲಸ ಮಾಡಿದ್ದಾರೆ. ತಬಲಿಗೀ ಜಮಾತ್ ಕೊರೋನಾವನ್ನು ಹಬ್ಬಿಸದಿದ್ದರೆ, ಸಂಚಾರನಿಷೇಧದ ಮೊದಲನೇಯ ಮಟ್ಟದಲ್ಲಿಯೇ ನಾವು ಆ ಪರಿಸ್ಥಿತಿಯ ಮೇಲೆ ನಿಯಂತ್ರಣ ಪಡೆದುಕೊಳ್ಳಬಹುದಾಗಿತ್ತು.

೫. ತಬಲಿಗೀ ಜಮಾತ್ ಅಪರಾಧ ಮಾಡಿದ್ದು ಅವರ ಮೇಲೆ ಅದೇ ಪದ್ಧತಿಯಲ್ಲಿ ಕ್ರಮಕೈಗೊಳ್ಳಬೇಕು. ಅನಾರೋಗ್ಯ ಇದು ಅಪರಾಧವಲ್ಲ; ಆದರೆ ಕೊರೋನಾದಂತಹ ರೋಗವನ್ನು ಅಡಗಿಸಿಡುವುದು, ಇದು ನಿಜವಾಗಲೂ ಅಪರಾಧ

೬. ಕಾನೂನು ಉಲ್ಲಂಘಿಸಿದವರ ಮೇಲೆ ಕಾನೂನುಬದ್ಧ ಕ್ರಮಕೈಗೊಳ್ಳಲಾಗುವುದು.