ಮೇವಾತ್ (ಹರಿಯಾಣ)ದಲ್ಲಿ ಮತಾಂಧರಿಂದ ‘ಮುಕ್ತಿಧಾಮ ಆಶ್ರಮದ ಮುಖ್ಯ ಮಹಂತ ರಾಮದಾಸ ಮಹಾರಾಜರ ಮೇಲೆ ದಾಳಿ

‘ಸಾಧು ಹಾಗೂ ಸಂತರನ್ನು ಸುಟ್ಟು ಕೊಲ್ಲಬೇಕು, ಎಂಬ ಪದಗಳಿಂದ ಬೆದರಿಕೆ !

ಸ್ಥಳೀಯ ಪೋಲೀಸರಿಂದ ಅಪರಾಧ ನೋಂದಾಯಿಸಿಕೊಳ್ಳಲು ನಿರಾಕರಣೆ

ಹರಿಯಾಣದಲ್ಲಿ ಭಾಜಪ ಸರಕಾರವಿರುವಾಗ ಈ ರೀತಿ ನಡೆಯುವುದು ಹಿಂದೂಗಳಿಗೆ ಅಪೇಕ್ಷಿತವಿಲ್ಲ. ಸರಕಾರವು ಈ ಘಟನೆಯತ್ತ ಗಮನಹರಿಸಿ ಸಂಬಂಧಪಟ್ಟವರ ಮೇಲೆ ಕ್ರಮ ಕೈಗೊಳ್ಳುವಂತೆ ಆದೇಶ ನೀಡಿ ಅವರಿಗೆ ಕಠಿಣ ಶಿಕ್ಷೆ ನೀಡುವುದರೊಂದಿಗೆ ಮಹಂತರಿಗೆ ಭದ್ರತೆ ಒದಗಿಸಬೇಕು !

ದೇಶದಲ್ಲಿ ಹಿಂದೂಗಳನ್ನು ಅಸಹಿಷ್ಣುಗಳೆಂದು ನಿರ್ಧರಿಸುವವರಿಗೆ ಈ ಘಟನೆಯ ಬಗ್ಗೆ ಏನು ಹೇಳಲಿಕ್ಕಿದೆ ?

ಮೇವಾತ (ಹರಿಯಾಣ) – ಏಪ್ರಿಲ್ ೨೯ರಂದು ಇಲ್ಲಿನ ಪುನ್ಹಾನಾದಲ್ಲಿ‘ಮುಕ್ತಿಧಾಮ ಆಶ್ರಮದ ಮುಖ್ಯ ಮಹಂತರಾದ ರಾಮದಾಸ ಮಹಾರಾಜರ ಮೇಲೆ ಮತಾಂಧರು ಹಲ್ಲೆ ಮಾಡಿದ ಘಟನೆ ನಡೆದಿದೆ. ಇದರೊಂದಿಗೆ ‘ಸಾಧು ಹಾಗೂ ಸಂತರನ್ನು ಇಲ್ಲಿಂದ ಓಡಿಸಬೇಕು. ಅವರೇನಾದರೂ ಹೋಗದಿದ್ದಲ್ಲಿ, ಅವರನ್ನು ಬೆಂಕಿಯಲ್ಲಿ ಸುಟ್ಟು ಕೊಲ್ಲಬೇಕು ಎಂದು ಹೇಳುತ್ತ ಮತಾಂಧರು ಬೆದರಿಕೆಯೊಡ್ಡಿದ್ದಾರೆ. ಈ ಘಟನೆಯ ಬಳಿಕ ಮಹಂತ ರಾಮದಾಸ ಮಹಾರಾಜರು ಪೊಲೀಸರಲ್ಲಿ ದೂರನ್ನು ನೀಡಿದರು; ಆದರೆ ಪೋಲೀಸರು ಅಪರಾಧವನ್ನು ದಾಖಲಿಸಿಕೊಳ್ಳಲು ನಿರಾಕರಿಸಿದರು. ಈ ವಿಷಯದ ಮೇಲೆ ‘ಆಪ್‌ಇಂಡಿಯಾ ಎಂಬ ಜಾಲತಾಣದ ಪ್ರತಿನಿಧಿಗಳು ಪೊಲೀಸ್ ಠಾಣೆಯನ್ನು ಸಂಪರ್ಕಿಸಿದಾಗ ಅವರು ಮುಖ್ಯಾಲಯವನ್ನು ಸಂಪರ್ಕಿಸುವಂತೆ ಹೇಳಿದರು. ಅಲ್ಲಿ ಸಂಪರ್ಕಿಸಿದಾಗ ಅವರು ಆ ರೀತಿ ಯಾವುದೇ ಘಟನೆಯ ಮಾಹಿತಿ ಇಲ್ಲದಿರುವುದಾಗಿ ಪೋಲೀಸರು ಹೇಳಿದರು. ಮೇವಾತದಲ್ಲಿ ಹಿಂದುತ್ವನಿಷ್ಠರು ‘ಪೊಲೀಸರು ಮತಾಂಧರ ಮೇಲೆ ಕ್ರಮ ಕೈಗೊಳ್ಳುವ ಬದಲು ಅವರೊಂದಿಗೆ ಚರ್ಚೆ ನಡೆಸಿ ಪ್ರಕರಣವನ್ನು ಮುಗಿಸಲು ಹೇಳುತ್ತಿದ್ದಾರೆ, ಎಂದು ಆರೋಪಿಸಿದ್ದಾರೆ. (ಇಂತಹ ಪೊಲೀಸರ ಬಗ್ಗೆ ವಿಚಾರಣೆ ನಡೆಸಿ ಅವರ ಮೇಲೆ ಕ್ರಮ ಕೈಗೊಳ್ಳಬೇಕು ! ಈ ರೀತಿಯ ಪೊಲೀಸರು ಎಲ್ಲೆಡೆ ಇದ್ದರೆ, ದೇಶದಲ್ಲಿನ ಸಾಧುಗಳು ಹಾಗೂ ಸಂತರ ರಕ್ಷಣೆ ಆಗುವುದು ಹೇಗೆ ?- ಸಂಪಾದಕರು) ಈ ಘಟನೆಯ ವಿಷಯವಾಗಿ ಮೇವಾತ ನಲ್ಲಿನ ವಿವಿಧ ಹಳ್ಳಿಗಳಲ್ಲಿ ಧಾರ್ಮಿಕ ಹಾಗೂ ಸಾಮಾಜಿಕ ಸಂಘಟನೆಗಳಿಂದ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಸಂಘಟನೆಗಳು ಸಭೆ ತೆಗೆದುಕೊಂಡು ಪೊಲೀಸರು ಹಾಗೂ ಆಡಳಿತಕ್ಕೆ ಕ್ರಮ ಕೈಗೊಳ್ಳುವಂತೆ ಬೇಡಿಕೆ ಮಾಡಲಾಗಿದೆ. ‘ಒಂದು ವೇಳೆ ಕ್ರಮ ಕೈಗೊಳ್ಳದೇ ಇದ್ದರೆ, ಇದರ ವಿರುದ್ಧ ಪ್ರತಿಭಟನೆಯನ್ನು ಮಾಡಲಾಗುವುದು, ಎಂದು ಈ ಸಂಘಟನೆಗಳು ಎಚ್ಚರಿಕೆ ನೀಡಿವೆ.