ಭಾಗ್ಯನಗರ (ತೆಲಂಗಣಾ)ದಲ್ಲಿನ ಎಮ್.ಐ.ಎಮ್.ನ ನಗರಸೇವಕನಿಂದ ಪೊಲೀಸರಿಗೆ ಬೆದರಿಕೆ

ಮಸೀದಿಯಲ್ಲಿ ಕೇವಲ ೫ ಜನರಿಗೆ ನಮಾಜ್ ಪಠಿಸಲು ಹೇಳಿದ್ದರಿಂದ ವಿರೋಧ

ದೇಶದಲ್ಲಿ ಮತಾಂಧರು ಸತತವಾಗಿ ಸಂಚಾರ ನಿಷೇಧವನ್ನು ಉಲ್ಲಂಘಿಸುತ್ತಿದ್ದಾರೆ; ಆದರೂ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲವೆಂಬುದು ಕಂಡುಬರುತ್ತದೆ, ಗಮನದಲ್ಲಿಟ್ಟುಕೊಳ್ಳಿರಿ !

ದೇಶದಲ್ಲಿ ಕೊರೋನಾದ ನಿಮಿತ್ತ ಅಲ್ಪಸಂಖ್ಯಾತರ ಮೇಲೆ ಅನ್ಯಾಯ ವಾಗುತ್ತಿದೆ ಎಂದು ಕೂಗಾಡುವ ಪುರೋ(ಅಧೋ)ಗಾಮಿಗಳು ಹಾಗೂ ಹಿಂದೂ ದ್ವೇಷಿ ಪ್ರಸಾರ ಮಾಧ್ಯಮಗಳಿಗೆ ಈ ರೀತಿಯ ಘಟನೆಗಳು ಕಾಣಿಸುವುದಿಲ್ಲವೇ? ಅಥವ ಕಂಡರೂ ಅದನ್ನು ಬೇಕಂತಲೇ ಅಸಡ್ಡೆ ಮಾಡುತ್ತಾರೆಯೇ?

ಭಾಗ್ಯನಗರ (ತೆಲಂಗಣಾ) – ಇಲ್ಲಿನ ಮದನ್ನಪೇಟ ಭಾಗದಲ್ಲಿ ಎಮ್.ಐ.ಎಮ್.ನ ನಗರಸೇವಕ ಮುರ್ತಜಾ ಅಲೀಯವರು ೨ ಪೊಲೀಸ್ ಪೇದೆಗಳಿಗೆ ಬಹಿರಂಗವಾಗಿ ಬೆದರಿಕೆಯೊಡ್ಡುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಿಂದ ಪ್ರಸಾರಗೊಂಡಿದೆ. ಇಲ್ಲಿನ ಮಸೀದಿಯಲ್ಲಿ ೧೦ಕ್ಕಿಂತ ಹೆಚ್ಚು ಜನರು ನಮಾಜ್ ಪಠಣಕ್ಕೆಂದು ಹೋಗುತ್ತಿರುವಾಗ ಆ ಪೊಲೀಸ್ ಪೇದೆಗಳು ಅವರಿಗೆ ‘ಕೇವಲ ೫ ಜನರಿಗಷ್ಟೇ ಅವಕಾಶವಿದೆ?, ಎಂದು ಹೇಳಿದಾಗ ಮುರ್ತಜಾ ಅಲೀಯವರು ಅವರಿಗೆ ಬೆದರಿಕೆಯೊಡ್ಡಿದರು ಹಾಗೂ ಅಲ್ಲಿಂದ ಹೋಗಲು ಹೇಳಿದರು. ಆದ್ದರಿಂದ ಆ ಇಬ್ಬರು ಪೊಲೀಸ್ ಪೇದೆಗಳು ಅಲ್ಲಿಂದ ಹೊರಟು ಹೋದರು.