ಕಾಶ್ಮೀರದಲ್ಲಾದ ಘರ್ಷಣೆಯಲ್ಲಿ ಕರ್ನಲ್, ಮೇಜರ್ ಸೇರಿ ೫ ಜನರು ಹುತಾತ್ಮ

ಇಬ್ಬರು ಭಯೋತ್ಪಾದಕರು ಹತ

ಕಾಶ್ಮೀರದಲ್ಲಿ ಎಷ್ಟೇ ಭಯೋತ್ಪಾದಕರನ್ನು ಕೊಂದರೂ ಸಂಪೂರ್ಣವಾಗಿ ಭಯೋತ್ಪಾದನೆಯನ್ನು ನಾಶ ಮಾಡಲು ಭಯೋತ್ಪಾದನೆಯ ಕಾರ್ಖಾನೆಯಾಗಿರುವ ಪಾಕ್ ಅನ್ನೇ ನಾಶ ಮಾಡುವುದು ಅಗತ್ಯವಾಗಿದೆ, ಎಂಬುದನ್ನು ಸರಕಾರವು ಅರಿತುಕೊಳ್ಳಲಿ !

ಕುಪವಾಡಾ (ಜಮ್ಮು-ಕಾಶ್ಮೀರ) – ಇಲ್ಲಿನ ಹಂದವಾಡಾದಲ್ಲಿ ಮೇ ೨ರ ರಾತ್ರಿಯಲ್ಲಿ ಭಯೋತ್ಪಾದಕರೊಂದಿಗೆ ನಡೆದ ಘರ್ಷಣೆಯಲ್ಲಿ ರಕ್ಷಣಾ ಪಡೆಯು ೨ ಭಯೋತ್ಪಾದಕರನ್ನು ಮಟ್ಟ ಹಾಕಿದರು; ಆದರೆ ಅದೇ ಸಮಯದಲ್ಲಿ ಸೈನ್ಯದ ೨ ಅಧಿಕಾರಿಗಳು, ೨ ಪೊಲೀಸರು ಹಾಗೂ ೧ ಪೊಲೀಸ್ ಉಪ ಪರೀಕ್ಷಕರು ಹುತಾತ್ಮರಾದರು. ಸುಮಾರು ೮ ಗಂಟೆಗಳ ಕಾಲ ಘರ್ಷಣೆ ನಡೆಯುತ್ತಿತ್ತು. ಹುತಾತ್ಮರಾದವರಲ್ಲಿ ೨೧ ರಾಷ್ಟ್ರೀಯ ರೈಫಲ್ ಯೂನಿಟ್‌ನ ಕಮಾಂಡಿಂಗ್ ಆಫಿಸರ್ ಕರ್ನಲ್ ಆಶುತೋಷ್ ಶರ್ಮಾ ಹಾಗೂ ಓರ್ವ ಮೇಜರ್ ಸಮಾವೇಶಗೊಂಡಿದ್ದಾರೆ. ಶರ್ಮಾರವರು ಈ ಹಿಂದೆ ಭಯೋತ್ಪಾದಕರ ವಿರುದ್ಧ ನಡೆದ ಹಲವಾರು ಘರ್ಷಣೆಯಲ್ಲಿ ಯಶಸ್ಸು ಪಡೆದಿದ್ದರು.

೧. ‘ಭಯೋತ್ಪಾದಕರು ಹಂದವಾಡಾ ನಗರದಲ್ಲಿ ಚಾಂಗಿಮುಲಾದಲ್ಲಿ ಕೆಲವು ಸ್ಥಳೀಯ ನಾಗರಿಕರನ್ನು ಅಪಹರಿಸಲಾಗುವುದು?, ಎಂಬ ಮಾಹಿತಿಯನ್ನು ಗೂಢಾಚಾರ ವಿಭಾಗವು ಸೈನ್ಯಕ್ಕೆ ನೀಡಿತು. ಅನಂತರ ಆ ಸ್ಥಳದಲ್ಲಿ ಸೈನ್ಯ ಹಾಗೂ ಜಮ್ಮೂ-ಕಾಶ್ಮೀರ ಪೊಲೀಸರು ಶೋಧ ಅಭಿಯಾನ ಪ್ರಾರಂಭಿಸಿದಾಗ ಈ ಘರ್ಷಣೆ ನಡೆಯಿತು.

೨. ಆಶುತೋಷ ಶರ್ಮಾರವರಿಗೆ ಭಯೋತ್ಪಾದಕರ ವಿರುದ್ಧ ಹೋರಾಡುವಾಗ ತೋರಿಸಿದ ಶೌರ್ಯಕ್ಕಾಗಿ ೨ ಬಾರಿ ‘ಸೇನೆ?ಯ ಪದಕದಿಂದ ಗೌರವಿಸಲಾಗಿತ್ತು. ಅವರು ತುಂಬಾ ಸಮಯದಿಂದ ಕಾಶ್ಮೀರದ ಕಣಿವೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಕಳೆದ ೫ ವರ್ಷಗಳಲ್ಲಿ ಭಯೋತ್ಪಾದಕರ ವಿರುದ್ಧ ಹೋರಾಡುವಾಗ ಹುತಾತ್ಮಗೊಂಡಿರುವ ಕರ್ನಲ್ ಮಟ್ಟದ ಮೊದಲ ಅಧಿಕಾರಿಯಾಗಿದ್ದಾರೆ . ಈ ಹಿಂದೆ ಜನವರಿ ೨೦೧೫ ರಲ್ಲಿ ೪೨ ರಾಷ್ಟ್ರೀಯ ರೈಫಲ್ಸ್‌ನ ಕರ್ನಲ್ ಎಮ್.ಎನ್.ರಾಯ್ ಹಾಗೂ ನವೆಂಬರ್ ೨೦೧೫ ರಲ್ಲಿ ೪೧ ರಾಷ್ಟ್ರೀಯ ರೈಫಲ್ಸ್‌ನ ಕರ್ನಲ್ ಸಂತೋಷ್ ಮಹಾಡಿಕ್ ಹುತಾತ್ಮರಾಗಿದ್ದರು.

ಸೈನಿಕರ ಬಲಿದಾನವನ್ನು ಮರೆಯುವುದಿಲ್ಲ ! – ಪ್ರಧಾನಮಂತ್ರಿ ಮೋದಿ

‘ಹಂದವಾಡಾದ ಘರ್ಷಣೆಯಲ್ಲಿ ಹುತಾತ್ಮರಾದ ಶೂರ ಸೈನಿಕರಿಗೆ ಶ್ರದ್ಧಾಂಜಲಿ. ಅವರ ಪರಾಕ್ರಮ ಹಾಗೂ ಬಲಿದಾನವನ್ನು ಎಂದಿಗೂ ಮರೆಯುವುದಿಲ್ಲ. ಅವರು ಸಂಪೂರ್ಣ ನಿಷ್ಠೆಯಿಂದ ದೇಶ ಸೇವೆಯನ್ನು ಮಾಡಿದರು. ದೇಶದ ನಾಗರಿಕರ ರಕ್ಷಣೆಗೋಸ್ಕರ ವಿಶ್ರಾಂತಿಯಿಲ್ಲದೆ ಪರಿಶ್ರಮಿಸಿದರು?, ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಮ್ಮ ಶೋಕಸಂದೇಶದಲ್ಲಿ ಹೇಳಿದ್ದಾರೆ.