ಇಂದೂರು (ನಿಝಾಮಬಾದ್, ತೆಲಂಗಾಣ) ಇಲ್ಲಿನ ಪೋಲಿಸರು ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತರ ಮೇಲೆ ಕ್ರಮ ಕೈಗೊಂಡ ಪ್ರಕರಣ
ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತರ ಪರವಾಗಿ ನಿಂತ ಸಾಂಸದ ಅರವಿಂದ ಧರ್ಮಪುರಿಯವರಿಗೆ ಕೃತಜ್ಞತೆಗಳು !
ಪ್ರತಿಯೊಬ್ಬ ಧರ್ಮಪ್ರೇಮಿ ಹಿಂದೂ ಜನಪ್ರತಿನಿಧಿಯು ಹಿಂದುತ್ವನಿಷ್ಠರಿಗೆ ಬೆಂಬಲವಾಗಿ ನಿಂತರೆ ಹಿಂದೂದ್ವೇಷಿಗಳು ಅವರ ಮೇಲೆ ಸುಳ್ಳು ಆರೋಪ ಮಾಡುವ ಮುನ್ನ ಯೋಚಿಸಬೇಕಾಗುತ್ತದೆ !
ಇಂದೂರು (ನಿಝಾಮಬಾದ್, ತೆಲಂಗಾಣ) – ‘ನಿಝಾಮಬಾದ್‌ದಲ್ಲಿ ‘ಕೇಸರಿ?ಯ (ಹಿಂದೂಗಳ) ಮೇಲೆ ಸೇಡು ತೀರಿಸಕೊಳ್ಳಲಾಗುತ್ತಿದೆಯೇ? ಕೊರೋನಾ ಸಾಂಕ್ರಾಮಿಕಕ್ಕೆ ತುತ್ತಾಗಿರುವ ಹಳೆಯ ನಗರದಲ್ಲಿ (‘ಓಲ್ಡ್‌ಸಿಟಿ) ಹೆಜ್ಜೆಯಿಡಲು ಭಯಪಡುವ ಪೊಲೀಸರಿಗೆ ಹಣ್ಣು ಹಂಚುತ್ತಿದ್ದ ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತರ ಮೇಲೆ ಅಪರಾಧ ದಾಖಲಿಸಿಕೊಳ್ಳುತ್ತಿದ್ದಾರೆ. ಅದರ ಹಿಂದಿನ ಕಾರಣವೆಂದರೆ ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತರು ಧರಿಸಿರುವ ಕೇಸರಿ ಟೊಪ್ಪಿಗೆಯೇ ಆಗಿದೆ. ನಾನು ಎಲ್ಲರಲ್ಲಿ ವಿನಂತಿಸುವುದೇನೆಂದರೆ, ಮನೆಯಿಂದ ಹೊರಗೆ ಬರುವಾಗ ಕೇಸರಿ ಟೊಪ್ಪಿಗೆ ಅಥವಾ ಕೇಸರಿ ಮಾಸ್ಕ್ ಹಾಕಿಕೊಳ್ಳಲು ಸಾಧ್ಯವಾಗದಿದ್ದರೂ ತಿಲಕವನ್ನಿಟ್ಟುಕೊಳ್ಳಿರಿ?, ಎಂಬ ಮಾತಿನಲ್ಲಿ ತೆಲಂಗಾಣದಲ್ಲಿನ ಭಾಜಪದ ಸಾಂಸದರಾದ ಅರವಿಂದ ಧರ್ಮಪುರಿಯವರು ಟ್ವಿಟ್ ಮಾಡಿ ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತರಿಗೆ ಬೆಂಬಲ ಸೂಚಿಸಿದರು. ಕೆಲವು ದಿನಗಳ ಹಿಂದೆಯಷ್ಟೇ ಹಿಂದೂ ಜನಜಾಗೃತಿ ಸಮಿತಿಯ ಕೆಲವು ಕಾರ್ಯಕರ್ತರು ಸಹಾಯಕ ಪೊಲೀಸ್ ಆಯುಕ್ತರಿಗೆ ಕರೆ ಮಾಡಿ ಅನುಮತಿ ಪಡೆದುಕೊಂಡು ಸಂಚಾರ ನಿಷೇಧದ ಸಮಯದಲ್ಲಿ ಕಾರ್ಯನಿರತವಾಗಿರುವ ಪೊಲೀಸರಿಗೆ ಹಣ್ಣು ಹಾಗೂ ಪಾನಕವನ್ನು ಹಂಚಿದರು. ಈ ಪ್ರಕರಣಕ್ಕಾಗಿ ಓರ್ವ ಹಿರಿಯ ಪೊಲೀಸ್ ಅಧಿಕಾರಿಯು ಅವರ ಮೇಲೆ ಅಪರಾಧ ದಾಖಲಿಸಿ ಅವರ ವಾಹನವನ್ನು ವಶಕ್ಕೆ ಪಡೆದುಕೊಂಡರು. ಈ ಹಿನ್ನೆಲೆಯಲ್ಲಿ ಸಾಂಸದರಾದ ಅರವಿಂದ ಧರ್ಮಪುರಿಯವರು ಪೊಲೀಸರನ್ನು ಟೀಕಿಸಿದ್ದಾರೆ.
ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತರು ಸಾಮಾಜಿಕ ಅಂತರವಿಟ್ಟುಕೊಂಡೇ ಸಹಾಯ ಮಾಡುತ್ತಿದ್ದರು !
ಸಾಂಸದ ಧರ್ಮಾಪುರಿಯವರು ತಮ್ಮ ಮಾತನ್ನು ಮುಂದುವರೆಸುತ್ತ, “ಕೊರೋನಾದ ಸಮಯದಲ್ಲಿ ಕರ್ತವ್ಯನಿರತವಾಗಿರುವ ಪೊಲೀಸರಿಗೆ ಹಣ್ಣು ಪಾನಕವನ್ನು ಹಂಚುವ ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತರ ಮೇಲೆ ಅಪರಾಧ ದಾಖಲಿಸಿಕೊಂಡು ಅವರ ವಾಹನವನ್ನು ವಶಕ್ಕೆ ಪಡೆದ ಪೊಲೀಸರು ‘ಕಾರ್ಯಕರ್ತರು ಸಾಮಾಜಿಕ ಅಂತರವಿಡಲಿಲ್ಲ’ ಎಂದು ಆರೋಪಿಸಿದ್ದಾರೆ; ಆದರೆ ಪ್ರತ್ಯಕ್ಷವಾಗಿ ಸಮಿತಿಯ ಕಾರ್ಯಕರ್ತರು ಮಾಸ್ಕ್ ತೊಟ್ಟು, ಅದೇ ರೀತಿ ಸಾಮಾಜಿಕ ಅಂತರವಿಟ್ಟುಕೊಂಡೇ ಹಣ್ಣು ಹಾಗೂ ಪಾನಕವನ್ನು ಹಂಚುತ್ತಿದ್ದರು?, ಎಂದರು