ಕೊರೋನಾ ರೋಗಾಣುವಿನ ಸೋಂಕನ್ನು ತಡೆಗಟ್ಟಲು ಹಾಗೂ ಸಮಾಜದ ಸರ್ವತೋಮುಖ ಹಿತಕ್ಕಾಗಿ ಮದ್ಯದ ಅಂಗಡಿಗಳನ್ನು ತೆರೆಯುವ ನಿರ್ಣಯವನ್ನು ಸರಕಾರವು ಕೂಡಲೇ ಹಿಂಪಡೆಯಬೇಕು ! – ಹಿಂದೂ ಜನಜಾಗೃತಿ ಸಮಿತಿ

ಆದಾಯವನ್ನು ಹೆಚ್ಚಿಸಲು ಸರಕಾರಗಳು ಜನರ ಆರೋಗ್ಯದೊಂದಿಗೆ ಚೆಲ್ಲಾಟವಾಡಬಾರದು !

ಶ್ರೀ. ರಮೇಶ ಶಿಂದೆ

ಒಂದೆಡೆ ಕೊರೋನಾದ ರೋಗಾಣುವಿನ ಸೊಂಕಿನಿಂದಾಗಿ ಜನರ ಜೀವಕ್ಕೆ ಅಪಾಯವಾಗದಿರಲೆಂದು ಸರಕಾರಗಳು ಆರ್ಥಿಕ ಹಾನಿಯನ್ನು ಸಹಿಸಿಕೊಳ್ಳುತ್ತಾ ‘ಲಾಕ್‌ಡೌನ್’ನ ಧೈರ್ಯದ ಹಾಗೂ ಸ್ವಾಗತರ್ಹ ನಿರ್ಣಯವನ್ನು ತೆಗೆದುಕೊಂಡಿದೆ. ಆದರೆ ಇನ್ನೊಂದೆಡೆ ಕೇವಲ ಆದಾಯ ಹೆಚ್ಚಾಗಿಸಲು ಮದ್ಯದ ಅಂಗಡಿಯನ್ನು ತೆರೆಯುವ ನಿರ್ಣಯವನ್ನು ತೆಗೆದುಕೊಂಡಿದೆ. ಆದ್ದರಿಂದ ದೇಶದಲ್ಲಿ ಕೊರೋನಾದ ಸೋಂಕು ಹೆಚ್ಚಾಗುವ ಸಾಧ್ಯತೆಗಳಿವೆ. ಇದನ್ನು ಹೊರತು ಪಡಿಸಿ ಮದ್ಯದಿಂದಾಗಿ ಮಹಿಳೆಯರ ಮೇಲಾಗುವ ದೌರ್ಜನ್ಯ, ಮಕ್ಕಳ ಮೇಲಾಗುವ ಕುಸಂಸ್ಕಾರ ಹಾಗೂ ಲಕ್ಷಗಟ್ಟಲೆ ಸಂಸಾರ ನಾಶವಾಗಲು ಈ ನಿರ್ಣಯದ ಕಾರಣವಾಗಬಾರದು, ಅದರೊಂದಿಗೆ ಸಮಾಜದ ಸರ್ವತೋಮುಖ ಹಿತಕ್ಕಾಗಿ ಹಾಗೂ ಕೊರೋನಾದ ಹೆಚ್ಚಾಗುತ್ತಿರುವ ಪ್ರಭಾವವು ತಡೆಗಟ್ಟಲು ಮದ್ಯದ ಅಂಗಡಿ ತೆರೆಯುವ ನಿರ್ಣಯವನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕೂಡಲೇ ಹಿಂಪಡೆಯಬೇಕು, ಎಂದು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಕರೆ ನೀಡಿದೆ. ಮದ್ಯದ ಅಂಗಡಿಗಳನ್ನು ತೆರೆಯಲು ಅನುಮತಿ ಸಿಕ್ಕಿದ್ದರಿಂದ ಇಂದು ಅನೇಕ ಸ್ಥಳಗಳಲ್ಲಿ ಬೃಹತ್ ಪ್ರಮಾಣದ ಸರತಿ ನಿಂತಿರುವುದು ಕಂಡು ಬರುತ್ತಿದೆ. ದೇಶದಲ್ಲಿ ಕೊರೋನಾದ ಪ್ರಭಾವ ಹಾಗೂ ಅದರಿಂದಾಗುವ ಮೃತ್ಯು ಹೆಚ್ಚಾಗುತ್ತಿರುವಾಗ ಮದ್ಯದ ಅಂಗಡಿಯ ಎದುರು ಈ ಸ್ಥಿತಿಯು ಅತ್ಯಂತ ಭಯಾನಕವಾಗಿದೆ. ಸರಕಾರ ಹೇಳಿದ ನಿಯಮ ಅಂದರೆ ‘ಸೋಶಿಯಲ್ ಡಿಸ್ಟೆಸಿಂಗ್’ ಪಾಲಿಸುವುದು, ಮಾಸ್ಕ್ ಹಾಕಿಕೊಳ್ಳುವುದು, ಕಲಂ ೧೪೪ ಕ್ಕನುಸಾರ ೪ ಜನ ಒಟ್ಟಾಗಿ ಬರದಿರುವುದು, ಮನೆಯಲ್ಲೇ ಇರುವುದು ಇತ್ಯಾದಿ ಎಲ್ಲ ನಿಯಮಗಳನ್ನು ಗಾಳಿಗೆ ತೂರಿದತಾಗಿದೆ. ಮದ್ಯ ಕುಡಿಯದೇ ಈ ಸ್ಥಿತಿ ಇರುವಾಗ ಮದ್ಯ ಕುಡಿದ ನಂತರದ ಸ್ಥಿತಿಯ ವಿಚಾರ ಮಾಡದಿರುವುದೇ ಒಳಿತು. ಮದ್ಯ ಇದು ಜೀವನೋಪಯೋಗಿ ವಸ್ತುಗಳ ಪೈಕಿ ಒಂದಲ್ಲ. ಈ ನಿರ್ಣಯದಿಂದಾಗಿ ದೇಶದಲ್ಲಿ ಕೊರೋನಾದ ಹಾವಳಿ ಹೆಚ್ಚಾಗುವ ಸಾಧ್ಯತೆ ಇದೆ. ಆದ್ದರಿಂದ ಮದ್ಯವನ್ನು ಪ್ರೊತ್ಸಾಹಿಸುವುದು ಅಂದರೆ ಒಂದು ರೀತಿಯಲ್ಲಿ ‘ಕೊರೋನಾ’ದ ಹಾವಳಿಯನ್ನು ಹಾಗೂ ದೇಶದಲ್ಲಿ ಅಪರಾಧಗಳ ಪ್ರಮಾಣ ಹೆಚ್ಚಾಗಲು ಪ್ರೊತ್ಸಾಹ ನೀಡಿದಂತೆ ಆಗುತ್ತದೆ. ದೇಶದಾದ್ಯಂತ ಘಟಿಸುವ ಅಪರಾಧಗಳಲ್ಲಿ ಮದ್ಯ ಕುಡಿದು ಆಗುವಂತಹ ಅಪರಾಧಗಳ ಪ್ರಮಾಣ ಹೆಚ್ಚಿದೆ. ಮದ್ಯದಿಂದಾಗಿ ಮಹಿಳೆಯರ ಮೇಲಿನ ಅತ್ಯಾಚಾರ ಘಟನೆಗಳೂ ಹೆಚ್ಚಾಗುತ್ತಿರುವುದು ಅಂಕಿ-ಅಂಶಗಳಿಂದ ಅನೇಕ ಬಾರಿ ಎದುರು ಬಂದಿದೆ. ಕೊಲೆ, ಹೊಡೆದಾಟ, ಆತ್ಮಹತ್ಯೆ, ಕೌಟುಂಬಿಕ ಕಲಹ ಇತ್ಯಾದಿ ಅನೇಕ ಅಂಶಗಳ ಹಿಂದೆ ಮದ್ಯ ಇದು ಮುಖ್ಯ ಕಾರಣವಾಗಿದೆ. ಕಲಬೆರಕೆಯ ಮದ್ಯದಿಂದಾಗಿ ಆಗುವ ಮೃತ್ಯು ಇದು ಬೇರೆಯೇ ವಿಷಯವಾಗಿದೆ. ಆದ್ದರಿಂದ ಸಮಾಜದ ಹಿತಕ್ಕಾಗಿ ಹಾಗೂ ದೇಶದ ಹಿತಕ್ಕಾಗಿ ಮದ್ಯದ ಅಂಗಡಿಗಳನ್ನು ತೆರೆಯಲು ನೀಡಿದ ಅನುಮತಿಯನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕೂಡಲೇ ಹಿಂಪಡೆಯಬೇಕು ಎಂದೂ ಹಿಂದೂ ಜನಜಾಗೃತಿ ಸಮಿತಿಯು ಕರೆ ನೀಡಿದೆ.