ಕೇರಳದ ಗುರುವಾಯೂರ ದೇವಸ್ಥಾನದಿಂದ ಮುಖ್ಯಮಂತ್ರಿಯ ಸಹಾಯ ನಿಧಿಗೆ ೫ ಕೋಟಿ ಹಣ ನೀಡಲು ನಿರ್ಧಾರ

ಹಿಂದೂಗಳ ದೇವಸ್ಥಾನಗಳ ಹಣವನ್ನು ಲೂಟಿಗೈಯ್ಯುವ ಕೇರಳದ ಕಮ್ಯುನಿಸ್ಟ್ ಸರಕಾರದ ಹೊಸ ಸಂಚು !

ಕೇರಳದಲ್ಲಿ ಚರ್ಚ್ ಹಾಗೂ ಮಸೀದಿಯ ಹಣವನ್ನು ಎಂದಾದರೂ ಸಹಾಯ ನಿಧಿಗೆ ನೀಡಿರುವುದನ್ನು ಕೇಳಿದ್ದೀರಾ ? ದೇಶದ ಪ್ರತಿಯೊಂದು ಸಂಕಟದ ಸಮಯದಲ್ಲಿ ಹಿಂದೂಗಳು ಸ್ವತಃ ದೇಶಕ್ಕಾಗಿ ತನು, ಮನ ಹಾಗೂ ಧನವನ್ನು ಅರ್ಪಿಸಲು ಮುಂಚೂಣಿಯಲ್ಲಿರುತ್ತಾರೆ; ಆದರೆ ಇತರ ಧರ್ಮದವರು ಎಂದಾದರೂ ಮುಂದಾಳತ್ವ ವಹಿಸುತ್ತಾರೇ ? ಅಥವಾ ಸರಕಾರ ಅವರ ಧಾರ್ಮಿಕ ಸ್ಥಳಗಳಿಂದ ಈ ರೀತಿಯ ಹಣವನ್ನು ಕೇಳುತ್ತಾರೆಯೇ ?

ಹಿಂದೂಗಳ ದೇವಸ್ಥಾನದ ಹಣ ಕೇವಲ ಹಿಂದೂ ಧರ್ಮಕ್ಕಾಗಿ ಖರ್ಚು ಮಾಡುವುದು ಆವಶ್ಯಕವಾಗಿದೆ. ಸರಕಾರಕ್ಕೆ ಸಾರ್ವಜನಿಕ ತೆರಿಗೆಯ ರೂಪದಲ್ಲಿ ನೀಡುತ್ತಿರುವ ಹಣ ಭ್ರಷ್ಟಾಚಾರದಿಂದ ಲೂಟಿಗೈಯ್ಯುತ್ತಿರುವಾಗ ಅದನ್ನು ತಡೆಯುವ ಬದಲು ಹಿಂದೂಗಳ ದೇವಸ್ಥಾನಗಳನ್ನು ಲೂಟಿಗೈದು ಅದನ್ನು ಸರಕಾರಿ ಕೆಲಸಕ್ಕಾಗಿ ಉಪಯೋಗಿಸುವುದನ್ನು ತಡೆಗಟ್ಟಲು ಈಗ ಧರ್ಮಪ್ರೇಮಿ ಹಿಂದೂಗಳು ಕಾನೂನು ಮಾರ್ಗದಿಂದ ಪ್ರಯತ್ನ ಮಾಡಬೇಕಿದೆ !

ದೇವಸ್ಥಾನದ ಸರಕಾರಿಕರಣದ ದುಷ್ಪರಿಣಾಮವನ್ನು ಅರಿತು ದೇವಸ್ಥಾನವನ್ನು ಸರಕಾರದ ವಶದಿಂದ ಮುಕ್ತ ಮಾಡಲು ಹಿಂದೂಗಳು ಕಾನೂನು ಮಾರ್ಗದಿಂದ ಹೋರಾಡುವುದು ಅಗತ್ಯವಿದೆ !

ಥ್ರಿಶೂರ್ (ಕೇರಳ) – ಕೇರಳದಲ್ಲಿ ಸರಕಾರಿಕರಣಗೊಳಿಸಿದ ಗುರುವಾಯೂರ ದೇವಸ್ಥಾನದ ಸ್ಥಿರ ಠೇವಣಿಯಿಂದ ಕೊರೋನಾದ ವಿರುದ್ಧದ ಹೋರಾಟಕ್ಕಾಗಿ ರಾಜ್ಯದ ಮುಖ್ಯಮಂತ್ರಿ ಸಹಾಯ ನಿಧಿಗೆ ೫ ಕೋಟಿ ರೂಪಾಯಿ ಹಣವನ್ನು ನೀಡಲಾಗುವುದು ಎಂದು ಗುರುವಾಯೂರ ದೇವಸ್ಥಾನ ಸಮಿತಿಯು ನಿರ್ಣಯವನ್ನು ತೆಗೆದುಕೊಂಡಿದೆ. ಇದಕ್ಕೆ ಅಖಿಲ ಭಾರತೀಯ ಶಬರಿಮಾಲೆ ಕೃತಿ ಸಮಿತಿಯು ವಿರೋಧವನ್ನು ವ್ಯಕ್ತಪಡಿಸಿದೆ.

೧. ಅಖಿಲ ಭಾರತೀಯ ಶಬರಿಮಾಲಾ ಕೃತಿ ಸಮಿತಿಯು ಮುಂದಿನಂತೆ ಹೇಳಿದೆ, ದೇವಸ್ಥಾನದ ಸ್ಥಿರ ಠೇವಣಿಯಿಂದ ಮುಖ್ಯಮಂತ್ರಿ ಸಹಾಯ ನಿಧಿಗೆ ಬೃಹತ್ ಪ್ರಮಾಣದಲ್ಲಿ ಹಣವನ್ನು ಹಸ್ತಾಂತರಿಸಿ ಕಾನೂನಿನ ಉಲ್ಲಂಘನೆಯಾಗುತ್ತಿದೆ. ದೇವಸ್ಥಾನವು ೫ ಕೋಟಿ ಹಣವನ್ನು ನೀಡುವ ಬಗ್ಗೆ ತೆಗೆದುಕೊಂಡಿರುವ ನಿರ್ಣಯವು ಕಾನೂನು ಹಾಗೂ ಭಕ್ತರಿಗಾಗಿ ಒಂದು ಸವಾಲಾಗಿದೆ. ಹಿಂದೂ ಭಕ್ತರು ಸಹಾಯ ನಿಧಿಗೆ ತಮ್ಮ ತಮ್ಮ ಕ್ಷಮತೆಗನುಸಾರ ಯೋಗದಾನವನ್ನು ನೀಡುತ್ತಾರೆ ಹಾಗೂ ಕಾರ್ಯದಲ್ಲಿ ಸಹಭಾಗಿಯಾಗುತ್ತಿದ್ದಾರೆ; ಆದರೆ ಕೇವಲ ಹಣವನ್ನು ಸುಲಭವಾಗಿ ಪಡೆಯಲು ಸುಲಭ ಮಾರ್ಗವೆಂದು ಈಶ್ವರನ ಸಂಪತ್ತನ್ನು ಕಬಳಿಸುವುದು ಇದೊಂದು ದೊಡ್ಡ ಅಪರಾಧವಾಗಿದೆ. ಭಕ್ತರು ಯಾವುದೇ ಕಾರಣಕ್ಕೂ ಈ ನಿರ್ಣಯವನ್ನು ಸ್ವೀಕಾರ ಮಾಡುವುದಿಲ್ಲ ಹಾಗೂ ತೀವ್ರವಾಗಿ ಖಂಡಿಸುವರು.

೨. ಅಖಿಲ ಭಾರತೀಯ ಶಬರಿಮಾಲೆ ಕೃತಿ ಸಮಿತಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಸ್.ಜೆ.ಆರ್. ಕುಮಾರ ಇವರು ಈ ಬಗ್ಗೆ ಹೇಳುತ್ತಾ, ‘ಕೇರಳದ ಮುಖ್ಯಮಂತ್ರಿ ಪಿಣಾರೈ ವಿಜಯನ್ ಇವರ ನೇತೃತ್ವದಲ್ಲಿ ಕಮ್ಯುನಿಸ್ಟ್ ಪಕ್ಷದ ಸರಕಾರ ದೇವಸ್ಥಾನದ ಹಣವನ್ನು ಕಬಳಿಸುವ ನೀತಿಯನ್ನು ಹಮ್ಮಿಕೊಳ್ಳುತ್ತಿದ್ದರೆ ಹಿಂದೂ ಭಕ್ತರು ಸಂಚಾರನಿಷೇಧದಲ್ಲಿ ಮಗ್ನರಾಗಿದ್ದಾರೆ. ಈ ಹಿಂದೆ ತ್ರಾವಣಕೋರ್ ದೇವಸ್ಥಾನದ ಹಣವನ್ನು ಇದೇ ರೀತಿ ಲೂಟಿಗೈಯ್ಯಲು ಪ್ರಯತ್ನಿಸಲಾಗಿತ್ತು. ಅದನ್ನು ಹಿಂದೂ ಭಕ್ತರು ಹಾಗೂ ಸಂಘಟನೆಗಳು ಸಮಯಕ್ಕೆ ಸರಿಯಾಗಿ ಹಸ್ತಕ್ಷೇಪ ಮಾಡಿದ್ದರಿಂದ ಅದನ್ನು ತಡೆದರು’ ಎಂದು ಹೇಳಿದರು.

೩. ಕುಮಾರ ಇವರು ತಮ್ಮ ಮಾತನ್ನು ಮುಂದುವರೆಸುತ್ತ, ‘ಹಿಂದೂಗಳ ದೇವಸ್ಥಾನದಲ್ಲಿಯ ಹಣವನ್ನು ಸರಕಾರಿ ಖಜಾನೆಯಲ್ಲಿ ವರ್ಗಾಯಿಸುತ್ತಿರುವಾಗ ಇತರ ಪಂಥದ ಧಾರ್ಮಿಕಸ್ಥಳಗಳನ್ನು ಮಾತ್ರ ಈ ನಿಯಮಗಳಿಂದ ಹೊರಗಿಟ್ಟಿವೆ. ಇದನ್ನೇ ಜಾತ್ಯತೀತ ಎನ್ನಬಹುದೇ ? ಕಮ್ಯುನಿಸ್ಟ್ ಸರಕಾರದಿಂದ ಹಿಂದೂಗಳಿಗೆ ಮೋಸ ಮಾಡುತ್ತಿಲ್ಲವೇ ? ಭಕ್ತರು ಈ ಕ್ರಮಗಳನ್ನು ಸಹಿಸುವುದಿಲ್ಲ.