ರಾಮಾಯಣ ಧಾರವಾಹಿಯ ‘ವಿಶ್ವ ದಾಖಲೆ

ಈ ಧಾರವಾಹಿಯನ್ನು ಒಂದೇ ದಿನದಲ್ಲಿ ೭ ಕೋಟಿ ೭೦ ಲಕ್ಷ ಜನರಿಂದ ವೀಕ್ಷಣೆ !

ನವ ದೆಹಲಿ – ದೇಶದಲ್ಲಿ ಕೊರೋನಾದಿಂದಾಗಿ ಜಾರಿಗೊಳಿಸಲಾಗಿರುವ ಸಂಚಾರ ನಿಷೇಧದ ನಂತರ ದೂರದರ್ಶನ ವಾಹಿನಿಯಲ್ಲಿ ರಾಮಾಯಣ ಹಾಗೂ ಮಹಾಭಾರತ ಎರಡೂ ಹಿಂದಿ ಧಾರಾವಾಹಿಗಳನ್ನು ಮರು ಪ್ರಸಾರಣೆ ಮಾಡಲಾಗುತ್ತಿದೆ. ಏಪ್ರಿಲ್ ೧೩ರರಂದು ರಾಮಾಯಣ ಧಾರವಾಹಿಯ ಸಂಚಿಕೆಯನ್ನು ಸುಮಾರು ೭ ಕೋಟಿ ೭೦ ಲಕ್ಷ ಜನರು ನೋಡಿದ್ದಾರೆ. ಇದೊಂದು ‘ವಿಶ್ವ ದಾಖಲೆಯಾಗಿದೆ, ಎಂಬ ಮಾಹಿತಿಯನ್ನು ದೂರದರ್ಶನವು ಟ್ವಿಟ್ ಮಾಡಿ ನೀಡಿತು.