ಸರಸಂಘಚಾಲಕರು ಪ್ರಧಾನಮಂತ್ರಿಯವರಿಗೆ ನಿರ್ಭಯವಾಗಿ ಹಿಂದೂ ರಾಷ್ಟ್ರದ ಸ್ಥಾಪನೆಯ ಬಗ್ಗೆ ಸೂಚಿಸಬೇಕು ! – ಆಚಾರ್ಯ ಧರ್ಮೇಂದ್ರಜಿ ಮಹಾರಾಜರು, ವಿಶ್ವ ಹಿಂದೂ ಪರಿಷತ್ತು

ಆಚಾರ್ಯ ಧರ್ಮೇಂದ್ರಜಿ ಮಹಾರಾಜರು, ವಿಶ್ವ ಹಿಂದೂ ಪರಿಷತ್ತು

ಮುಂಬೈ, ಮೇ ೪ (ವಾರ್ತಾ.) – ನಾವು ರಾಷ್ಟ್ರಭಕ್ತ ಮುಸಲ್ಮಾನರಿಗೆ ವಂದಿಸುತ್ತೇವೆ; ಆದರೆ ಗೋಮಾತೆಯ ಮಾಂಸವನ್ನು ತಿನ್ನುವುದು ಹಾಗೂ ಇತರ ಧರ್ಮದ ಮಹಿಳೆಯರೊಂದಿಗೆ ಕುಕೃತ್ಯ ಮಾಡುವುದು, ಇದು ಯಾರ ಇತಿಹಾಸವಾಗಿದೆಯೋ, ಇಂತಹವರ ಬಗ್ಗೆ ಏಕೆ ಅನುಕಂಪ ಪಡಬೇಕು ? ಕೆಲವು ಮಹಾನುಭಾವರು ಇದಕ್ಕೆ ಅಪವಾದವಾಗಿದ್ದಾರೆ. ಅವರನ್ನು ನಾವು ಅವರನ್ನು ಗೌರವದಿಂದ ಕಾಣುತ್ತೇವೆ. ಆದ್ದರಿಂದ ಅನುಕಂಪವನ್ನು ಬಿಟ್ಟು ಸರಸಂಘಚಾಲಕರು ಪ್ರಧಾನಮಂತ್ರಿಯವರಿಗೆ ನಿರ್ಭಯವಾಗಿ ಹಿಂದೂ ರಾಷ್ಟ್ರ ಸ್ಥಾಪನೆಯ ಬಗ್ಗೆ ಸೂಚಿಸಬೇಕು, ಎಂದು ವಿಶ್ವ ಹಿಂದೂ ಪರಿಷತ್ತಿನ ಕೇಂದ್ರೀಯ ಮಾರ್ಗದರ್ಶಕರಾದ ಆಚಾರ್ಯ ಧರ್ಮೇಂದ್ರಜಿ ಮಹಾರಾಜ ಇವರು ಕರೆ ನೀಡಿದ್ದಾರೆ. ಸರಸಂಘಚಾಲಕ ಶ್ರೀ. ಮೋಹನ ಭಾಗವತ ಇವರು ಏಪ್ರಿಲ್ ೨೬ ರಂದು ‘ಫೇಸ್‌ಬುಕ್’ ಮೂಲಕ ಮಾಡಿದ ಮಾರ್ಗದರ್ಶನದಲ್ಲಿ ಮುಸಲ್ಮಾನರ ಬಗ್ಗೆ ಅನುಕಂಪವನ್ನು ತೋರಲು ಕರೆ ನೀಡಿದ್ದರು. ಇದಕ್ಕೆ ಆಕ್ಷೇಪಣೆಯನ್ನು ಎತ್ತಿದ ಆಚಾರ್ಯ ಧರ್ಮೇಂದ್ರಜಿ ಮಹಾರಾಜರವರು ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದರು.

ಈ ಸಮಯದಲ್ಲಿ ಆಚಾರ್ಯ ಧರ್ಮೇಂದ್ರಜಿ ಮಹಾರಾಜರು ಮಾತನಾಡುತ್ತಾ ಮುಂದಿನ ವಿಷಯಗಳನ್ನು ಹೇಳಿದರು,

೧. ವಿಶ್ವದ ಎಲ್ಲಕ್ಕಿಂತ ದೊಡ್ಡ ಸ್ವಯಂಸೇವಕ ಸಂಘಟನೆಯಾಗಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಮೋಹನ ಭಾಗವತರವರು ಭಯ ಹಾಗೂ ಆತಂಕ ಈ ಕಾರಣಗಳಿಂದ ವ್ಯಕ್ತವಾಗುವ ಹಾಗೂ ಭಯಗೊಂಡ ಕೆಲವು ಮುಸಲ್ಮಾನರ ಬಗ್ಗೆ ದ್ವೇಷ ವ್ಯಕ್ತವನ್ನು ಮಾಡದೇ ಅನುಕಂಪವನ್ನು ತೋರಬೇಕು, ಎಂದು ಸೂಚಿಸಿದ್ದರು. ಮುಸಲ್ಮಾನರಿಲ್ಲದೇ ಭಾರತದಲ್ಲಿ ಇರುವುದರ ಕಲ್ಪನೆಯನ್ನು ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದರು.

೨. ಇಸ್ಲಾಮಿನ ಜನ್ಮದ ಇತಿಹಾಸ ಕೇವಲ ೧ ಸಾವಿರದ ೪೦೦ ವರ್ಷಗಳಷ್ಟು ಹಳೆಯದಾಗಿದೆ ಹಾಗೂ ಹಿಂದೂ ಧರ್ಮದ ಪರಂಪರೆಯು ಅತೀ ಪ್ರಾಚೀನವಾಗಿದೆ. ಇಸ್ಲಾಮೀ ದಾಳಿಖೋರರು ಭಾರತದಲ್ಲಿ ಭಯ ಹಾಗೂ ಭಯೋತ್ಪಾದನೆಯನ್ನು ತಂದರು. ಇಸ್ಲಾಮಿ ದಾಳಿಖೋರರು ಶಾಂತಿ ಹಾಗೂ ಪ್ರೀತಿಯ ಪತಾಕೆಯನ್ನು ತೆಗೆದುಕೊಂಡು ಬಂದಿರಲಿಲ್ಲ. ರಕ್ತದ ನದಿಯನ್ನು ತೆಗೆದುಕೊಂಡು ಬಂದರು, ಈ ಇತಿಹಾಸವು ಬಹಿರಂಗವಾಗಿದೆ.

೩. ಅಶ್ಫಾಖ ಉಲ್ಲಾ ಖಾನ ಸಾಹೇಬ್, ಡಾ. ಅಬ್ದುಲ್ ಕಲಾಂ, ಶಹನಾಯಿ ವಾದಕ ಬಿಸ್ಮಿಲ್ಲಾ ಖಾನ ಸಾಹೆಬ್ ಇಂತಹ ವಿಭೂತಿಗಳನ್ನು ನಾವು ಖಂಡಿತವಾಗಿಯೂ ನಮಸ್ಕರಿಸುತ್ತೇವೆ; ಆದರೆ ಕಟ್ಟರ ಮತಾಂಧರನ್ನು ನಾವು ಸ್ವೀಕಾರ ಮಾಡುವುದಿಲ್ಲ.