ಮೇವಾತ್ (ಹರಿಯಾಣ)ದಲ್ಲಿ ಮತಾಂಧರಿಂದ ‘ಮುಕ್ತಿಧಾಮ ಆಶ್ರಮದ ಮುಖ್ಯ ಮಹಂತ ರಾಮದಾಸ ಮಹಾರಾಜರ ಮೇಲೆ ದಾಳಿ
ಏಪ್ರಿಲ್ ೨೯ರಂದು ಇಲ್ಲಿನ ಪುನ್ಹಾನಾದಲ್ಲಿ‘ಮುಕ್ತಿಧಾಮ ಆಶ್ರಮದ ಮುಖ್ಯ ಮಹಂತರಾದ ರಾಮದಾಸ ಮಹಾರಾಜರ ಮೇಲೆ ಮತಾಂಧರು ಹಲ್ಲೆ ಮಾಡಿದ ಘಟನೆ ನಡೆದಿದೆ. ಇದರೊಂದಿಗೆ ‘ಸಾಧು ಹಾಗೂ ಸಂತರನ್ನು ಇಲ್ಲಿಂದ ಓಡಿಸಬೇಕು. ಅವರೇನಾದರೂ ಹೋಗದಿದ್ದಲ್ಲಿ, ಅವರನ್ನು ಬೆಂಕಿಯಲ್ಲಿ ಸುಟ್ಟು ಕೊಲ್ಲಬೇಕು ಎಂದು ಹೇಳುತ್ತ ಮತಾಂಧರು ಬೆದರಿಕೆಯೊಡ್ಡಿದ್ದಾರೆ.