ತಮಿಳುನಾಡು ಸರಕಾರದ ತೀರ್ಮಾನಕ್ಕೆ ಧರ್ಮಪ್ರೇಮಿಗಳ ಟ್ವೀಟ್ ಮೂಲಕ ತೀವ್ರ ವಿರೋಧ

ದೇವಾಲಯಗಳು ‘ಮುಖ್ಯಮಂತ್ರಿ ಸಹಾಯ ನಿಧಿ’ಗಾಗಿ ಕೋಟಿ

ರಾಷ್ಟ್ರೀಯ ‘ಟ್ರೆಂಡ್’ ನಲ್ಲಿ ಮೂರನೇ ಸ್ಥಾನದಲ್ಲಿ ! ?

ಮುಂಬೈ – ತಮಿಳುನಾಡು ಸರಕಾರವು ರಾಜ್ಯದಲ್ಲಿ ಸರಕಾರೀಕರಣಗೊಂಡಿರುವ ೩ ಸಾವಿರ ದೇವಾಲಯಗಳ ಪೈಕಿ ೪೭ ದೊಡ್ಡ ದೇವಾಲಯಗಳನ್ನು ಕೊರೋನಾದ ವಿರುದ್ಧ ಹೋರಾಡಲು ‘ಮುಖ್ಯಮಂತ್ರಿ ಸಹಾಯ ನಿಧಿ’ ಗೆ ಕೋಟಿಗಟ್ಟಲೆ ಹಣ ನೀಡಲು ಇತ್ತೀಚೆಗಷ್ಟೇ ಆದೇಶಿಸಿತು, ಮತ್ತೊಂದು ಕಡೆ ರಂಝಾನ್‌ನ ಹಿನ್ನೆಲೆಯಲ್ಲಿ ರಾಜ್ಯದಲ್ಲಿನ ೨ ಸಾವಿರ ೮೯೫ ಮಸೀದಿಗಳಿಗೆ ಬಿರ್ಯಾನಿಗಾಗಿ ೫ ಸಾವಿರ ೪೫೦ ಟನ್ ಅಕ್ಕಿಯನ್ನು ಉಚಿತವಾಗಿ ನೀಡಲಾಯಿತು. ಈ ಭೇದಭಾವದ ವಿರುದ್ಧ ಧರ್ಮಪ್ರೇಮಿಗಳು ಟ್ವಿಟರ್ ಮೇಲೆ #LootTemplesGiftMinorities ಎಂಬ ‘ಹ್ಯಾಶ್‌ಟಾಗ್  ‘ಟ್ರೆಂಡ್’ ಅನ್ನು ಪ್ರಾರಂಭಿಸಿದ್ದಾರೆ. ಈ ಕಾಲಾವಧಿಯಲ್ಲೇ ಅದು ರಾಷ್ಟ್ರೀಯ ‘ಟ್ರಂಡ್’ ನಲ್ಲಿ ೫ನೇಯ ಹಾಗೂ ನಂತರ ೩ನೇಯ ಸ್ಥಾನಕ್ಕೆ ಬಂದಿತ್ತು. ಸಂಜೆಯವರೆಗೆ ೫೦ ಸಾವಿರ ಜನರು ಇದರ ಮೇಲೆ ಟ್ವಿಟ್ಸ್ ಮಾಡಿದ್ದಾರೆ. ಈ ಮೂಲಕ ಜನರು ಸರಕಾರಕ್ಕೆ ಹಿಂದೂಗಳೊಂದಿಗೆ ಭೇದಭಾವ ಮಾಡದಿರಿ, ದೇವಾಲಯಗಳನ್ನು ಕೊಳ್ಳೆಹೊಡೆಯುವುದನ್ನು ತಡೆಯಲು ತಕ್ಷಣ ಈ ಆದೇಶವನ್ನು ಹಿಂದಕ್ಕೆ ತೆಗೆದುಕೊಳ್ಳಲಿ’, ಎಂದು ಬೇಡಿಕೆ ಮಾಡಿದರು. ‘ದೇವಾಲಯಗಳನ್ನು ಸರಕಾರೀಕರಣ ಮಾಡಿದ ನಂತರ ಹೇಗೆ ಕೊಳ್ಳೆಹೊಡೆಯುತ್ತಿದ್ದಾರೆ’, ಎಂಬ ವಿಷಯವಾಗಿ ಟ್ವಿಟರ್‌ನ ಮೂಲಕ ಜಾಗೃತಿ ಮೂಡಿಸಲಾಯಿತು.