ಬೆಂಗಳೂರು ಗಲಭೆ ಪ್ರಕರಣದಲ್ಲಿ ಕಾಂಗ್ರೆಸ್ ಕಾರ್ಪೊರೇಟರ್ ಮತ್ತು ಮಾಜಿ ಮೇಯರ್ ಸಂಪತ ರಾಜನ ಬಂಧನ

ಡಿ ಜೆ ಹಳ್ಳಿಯಲ್ಲಿ ನಡೆದ ಮತಾಂಧರ ಗಲಭೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಕಾರ್ಪೊರೇಟರ್ ಮತ್ತು ಮಾಜಿ ಮೇಯರ್ ಸಂಪತ ರಾಜ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಅವರ ಮೇಲೆ ಜನಸಮೂಹವನ್ನು ಪ್ರಚೋದಿಸಿದ ಆರೋಪವಿದೆ. ಈ ಗಲಭೆಯಲ್ಲಿ ನಾಲ್ಕು ಜನರು ಸಾವನ್ನಪ್ಪಿದ್ದಾರೆ.

ಕರ್ನಾಟಕದ ಕಿಷ್ಕಿಂಧೆಯಲ್ಲಿ ೨೧೫ ಮೀಟರ್ ಎತ್ತರದ ಹನುಮಂತನ ವಿಗ್ರಹವನ್ನು ಸ್ಥಾಪಿಸಲಾಗುವುದು

ಕರ್ನಾಟಕದ ವಿಶ್ವ ಪ್ರಸಿದ್ಧ ಹಂಪಿಯ ‘ಹನುಮಾನ್ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್’ನ ಮುಖ್ಯಸ್ಥ ಸ್ವಾಮಿ ಗೋವಿಂದ ಆನಂದ ಸರಸ್ವತಿ ಅವರು ೨೧೫ ಮೀಟರ್ ಎತ್ತರದ ಹನುಮಾನ್ ವಿಗ್ರಹವನ್ನು ಕರ್ನಾಟಕದ ಪಂಪಾಪುರ ಕಿಷ್ಕಿಂಧೆಯಲ್ಲಿ ನಿರ್ಮಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ಧಾರ್ಮಿಕ ಟೋಪಿಯನ್ನು ಹಾಕಿಕೊಂಡ ಪ್ರಕರಣದಲ್ಲಿ ಪೊಲೀಸ್ ಉಪನಿರೀಕ್ಷಕ ಅಮಾನತು

ಅಸ್ಸಾಂನ ವೈರ್‌ಲೆಸ್ ಮೆಸೇಜಿಂಗ್ ಘಟಕದ ಪೊಲೀಸ್ ಉಪನಿರೀಕ್ಷಕ ಮಹಮ್ಮದ ಶೌಕತ್ ಅಲಿಯನ್ನು ಕಾರ್ಯ ನಿರ್ವಹಿಸುತ್ತಿರುವಾಗ ಗೋಲಾಕಾರ (ಧಾರ್ಮಿಕ) ಟೋಪಿ ಹಾಕಿದ ಪ್ರಕರಣದಲ್ಲಿ ಅವರನ್ನು ಅಮಾನತು ಮಾಡಲಾಗಿದೆ. ಟೋಪಿ ಹಾಕಿಕೊಂಡಿರುವುದರ ಛಾಯಾಚಿತ್ರ ಸಾಮಾಜಿಕ ಮಾಧ್ಯಮದಿಂದ ಪ್ರಸಾರವಾಗಿದೆ.

ಜೆ.ಎನ್.ಯು. ಅನ್ನು ‘ಸ್ವಾಮಿ ವಿವೇಕಾನಂದ ವಿಶ್ವವಿದ್ಯಾಲಯ’ ಎಂದು ಮರುನಾಮಕರಣ ಮಾಡಿ !

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕದ ಮಾಜಿ ಸಚಿವ ಸಿ.ಟಿ. ರವಿ ಇವರು ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ(ಜೆ.ಎನ್.ಯು.) ಹೆಸರನ್ನು ಬದಲಾಯಿಸಿ ‘ಸ್ವಾಮಿ ವಿವೇಕಾನಂದ ವಿಶ್ವವಿದ್ಯಾಲಯ’ ಎಂದು ಮರುನಾಮಕರಣ ಮಾಡಬೇಕೆಂದು ಒತ್ತಾಯಿಸಿದ್ದಾರೆ.

ತುರ್ಕಿಸ್ತಾನದ ಕಟ್ಟರ ಸಂಘಟನೆಯೊಂದಿಗೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಸಂಬಂಧ – ಸ್ವೀಡನ್‌ನ ಸಂಶೋಧನಾ ಸಂಸ್ಥೆಯಿಂದ ಮಾಹಿತಿ

ಸ್ವೀಡನ್‌ನ ಸಂಶೋಧನಾ ಸಂಸ್ಥೆ ‘ನಾರ್ಡಿಕ್ ಮಾನಿಟರ್’ವು ತುರ್ಕಸ್ತಾನದ ಕಟ್ಟರ ಸಂಘಟನೆಯಾದ ಐ.ಎಚ್.ಎಚ್. (ಇಂಸಾನಿ ಯಾರ್ದಿಮ್ ವಕ್ಫಿ ಅಂದರೆ ಮಾನವತಾವಾದಿ ಸಹಾಯ ಸಂಸ್ಥೆ) ಹಾಗೂ ಜಿಹಾದಿ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿ.ಎಫ್.ಐ.) ಇವರೊಂದಿಗೆ ಸಂಬಂಧ ಇದೆ ಎಂದು ಆರೋಪಿಸಿದೆ.

‘ಇಡೀ ದೇಶದಲ್ಲಿ ಎಂ.ಐ.ಎಂ.ನ ಧ್ವಜ ಹಾರಿಸುವುದನ್ನು ಜಗತ್ತು ನೋಡಲಿದೆ !’(ಅಂತೆ) – ಅಕಬರುದ್ದೀನ್ ಒವೈಸಿ

ಬಿಹಾರ ಚುನಾವಣೆಯಲ್ಲಿ ಎಂ.ಐ.ಎಂ.ಗೆ ಸಿಕ್ಕಿದ ಯಶಸ್ಸು ಭಾರತೀಯ ರಾಜಕೀಯದಲ್ಲಿ ಹೊಸ ತಿರುವನ್ನು ಸೂಚಿಸುತ್ತದೆ. ಎಂ.ಐ.ಎಂ. ಭಾರತದಾದ್ಯಂತ ಧ್ವಜ ಹಾರಿಸುತ್ತಿದೆ ಎಂದು ಎಂ.ಐ.ಎಂ. ಶಾಸಕ ಮತ್ತು ಪಕ್ಷದ ಮುಖ್ಯಸ್ಥ, ಸಂಸದ ಅಸದುದ್ದೀನ್ ಒವೈಸಿಯವರ ಸಹೋದರ ಅಕಬರುದ್ದೀನ್ ಒವೈಸಿ ಹೇಳಿದ್ದಾರೆ.

ದೀಪಾವಳಿಯಂದು ಬೆಳಿಗ್ಗೆ ಪಟಾಕಿ ಸಿಡಿಸಲು ಕಾಂಗ್ರೆಸ್ ಮಾಜಿ ಸಂಸದ ಶಾಹಿದ್ ಸಿದ್ದಿಕಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ !

ದೀಪಾವಳಿಯ ಮುಂಜಾನೆ ಪಟಾಕಿ ಸಿಡಿಸುವುದಕ್ಕೆ ಕಾಂಗ್ರೆಸ್‌ನ ಮಾಜಿ ಸಂಸದ ಶಾಹಿದ್ ಸಿದ್ದಿಕಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ‘ಬೆಳಗ್ಗೆ ೪ ಗಂಟೆಗೆ ಯಾವ ರೀತಿಯ ಜನರು ಪಟಾಕಿ ಸಿಡಿಸುತ್ತಾರೆ?’ ಎಂದು ಅವರು ಟ್ವೀಟ್ ಮಾಡಿದ್ದಾರೆ. ನಿರ್ಧಾರವನ್ನು ಸರಿಯಾಗಿ ಜಾರಿಗೊಳಿಸದಿದ್ದರೆ, ಪಟಾಕಿಗಳನ್ನು ನಿಷೇಧಿಸುವುದರಿಂದ ಏನು ಪ್ರಯೋಜನ ? ’ಎಂದು ಅವರು ಕೇಳಿದರು.

ಈ ಸಲದ ದೀಪಾವಳಿಯಲ್ಲಿ ಚೀನಾದ ಸಂಸ್ಥೆಗಳಿಗೆ ೪೦ ಸಾವಿರ ಕೋಟಿ ರೂಪಾಯಿ ನಷ್ಟ

ಚಿಲ್ಲರೆ ವ್ಯಾಪಾರಿ ಸಂಘಟನೆಯಾದ ‘ಕಾನ್ಫಡರೆಶನ್ ಆಫ್ ಆಲ್ ಇಂಡಿಯಾ ಟ್ರೆಡರ‍್ಸ್’ನ ನೀಡಿದ ಮಾಹಿತಿಯ ಪ್ರಕಾರ ಈ ವರ್ಷ ದೀಪಾವಳಿಯ ಸಂದರ್ಭದಲ್ಲಿ ಭಾರತೀಯ ಚಿಲ್ಲರೆ ವ್ಯಾಪಾರಿಗಳು ೭೨ ಸಾವಿರ ಕೋಟಿ ರೂಪಾಯಿ ಮಾರಾಟ ಮಾಡಿದರೆ, ಚೀನಾದ ಸಂಸ್ಥೆಗಳು ೪೦ ಸಾವಿರ ಕೋಟಿ ರೂಪಾಯಿ ನಷ್ಟ ಅನಭವಿಸಬೇಕಾಯಿತು

ಬಂಗಾಳ ಅಲ್ ಕೈದಾದ ತಾಣವಾಗಿ ಮಾರ್ಪಟ್ಟಿದೆ; ಅದರ ಪರಿಸ್ಥಿತಿ ಕಾಶ್ಮೀರಕ್ಕಿಂತ ಕೆಟ್ಟದಾಗಿದೆ ! – ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್

ಕೆಲವು ದಿನಗಳ ಹಿಂದೆ ಕೂಚ್‌ಬಿಹಾರ್‌ನಲ್ಲಿ ಅಲ್ ಕೈದಾ ಭಯೋತ್ಪಾದಕರನ್ನು ಗುರುತಿಸಲಾಗಿತ್ತು. ಅವರ ಜಾಲವು ಬಂಗಾಲದಾದ್ಯಂತ ಹರಡಿದೆ. ಈ ರಾಜ್ಯ ಭಯೋತ್ಪಾದಕರ ತಾಣವಾಗಿ ಮಾರ್ಪಟ್ಟಿದೆ. ಕಾಶ್ಮೀರಕ್ಕಿಂತ ಇಲ್ಲಿ ಪರಿಸ್ಥಿತಿ ಕೆಟ್ಟದಾಗಿದೆ ಎಂದು ಬಿಜೆಪಿಯ ಬಂಗಾಳ ರಾಜ್ಯ ಅಧ್ಯಕ್ಷ ದಿಲೀಪ್ ಘೋಷ್ ಆರೋಪಿಸಿದ್ದಾರೆ.

ಹಿಂದೂಗಳ ವಿರೋಧದ ನಂತರ, ‘ಜೆನೀಶ್ ಮಸಾಲೆ’ ತಯಾರಿಸುವ ಸಂಸ್ಥೆಯು ರಾಮಾಯಣವನ್ನು ಅವಮಾನಿಸುವ ಫೇಸ್‌ಬುಕ್ ಪೋಸ್ಟ್ ಅನ್ನು ಅಳಿಸಿದೆ !

ಗುಜರಾತ್‌ನಲ್ಲಿ ‘ಜೆನೀಶ್ ಮಸಾಲೆ’ ತಯಾರಿಸುವ ಸಂಸ್ಥೆಯು ಪ್ರಸಿದ್ಧಿಗಾಗಿ ಫೇಸ್‌ಬುಕ್‌ನಲ್ಲಿ ಒಂದು ಪೋಸ್ಟ್ ಅನ್ನು ಮಾಡಿತ್ತು. ಅದರಲ್ಲಿ ರಾಮಾಯಣದ ಪ್ರಸಂಗ ಒಂದನ್ನು ತೋರಿಸಲಾಗಿದೆ. ಅದರಲ್ಲಿ ‘ಯಾವಾಗ ನಿಮ್ಮ ಸ್ನೇಹಿತ ‘ಯಾವುದೇ ಮಸಾಲೆ ಹಾಕು, ಏನು ವ್ಯತ್ಯಾಸ ಆಗುತ್ತದೆ?’ ಎಂದು ಹೇಳುತ್ತಾನೆ, ಅದಕ್ಕೆ ಶ್ರೀರಾಮನ ಭಕ್ತ ಹೇಳುತ್ತಾರೆ