|
ಮುಂಬಯಿ – ಗುಜರಾತ್‌ನಲ್ಲಿ ‘ಜೆನೀಶ್ ಮಸಾಲೆ’ ತಯಾರಿಸುವ ಸಂಸ್ಥೆಯು ಪ್ರಸಿದ್ಧಿಗಾಗಿ ಫೇಸ್‌ಬುಕ್‌ನಲ್ಲಿ ಒಂದು ಪೋಸ್ಟ್ ಅನ್ನು ಮಾಡಿತ್ತು. ಅದರಲ್ಲಿ ರಾಮಾಯಣದ ಪ್ರಸಂಗ ಒಂದನ್ನು ತೋರಿಸಲಾಗಿದೆ. ಅದರಲ್ಲಿ ‘ಯಾವಾಗ ನಿಮ್ಮ ಸ್ನೇಹಿತ ‘ಯಾವುದೇ ಮಸಾಲೆ ಹಾಕು, ಏನು ವ್ಯತ್ಯಾಸ ಆಗುತ್ತದೆ?’ ಎಂದು ಹೇಳುತ್ತಾನೆ, ಅದಕ್ಕೆ ಶ್ರೀರಾಮನ ಭಕ್ತ ಹೇಳುತ್ತಾರೆ, ‘ಆತನ ಹೊಟ್ಟೆಗೆ ಬಾಣ ಬಿಡಿ ಪ್ರಭು.’
ಈ ಪೋಸ್ಟ ಬಗ್ಗೆ ಧರ್ಮಾಭಿಮಾನಿಗಳು ಹಿಂದೂ ಜನಜಾಗೃತಿ ಸಮಿತಿಗೆ ತಿಳಿಸಿದಾಗ ಸಮಿತಿಯು ನ್ಯಾಯೋಚಿತ ಮಾರ್ಗದಲ್ಲಿ ವಿರೋಧಿಸಲು ಹಿಂದೂಗಳಿಗೆ ಕರೆ ನೀಡಿತ್ತು. ಹಿಂದೂಗಳು ಸಂಘಟಿತರಾಗಿ ವಿರೋಧಿಸಿದ ನಂತರ ಕೆಲವೇ ಗಂಟೆಗಳಲ್ಲಿ ಈ ಪೋಸ್ಟ್ ಅನ್ನು ಅಳಿಸಲಾಯಿತು.