ಬಾಂಗ್ಲಾದೇಶದಲ್ಲಿರುವ ಅಲ್ಪಸಂಖ್ಯಾತರನ್ನು ರಕ್ಷಿಸಲು ಸಹಾಯ ಮಾಡಿ ! – ಡೊನಾಲ್ಡ್ ಟ್ರಂಪ್‌ಗೆ ಮನವಿ

ಅಮೆರಿಕದಲ್ಲಿರುವ ಬಾಂಗ್ಲಾದೇಶಿ ಹಿಂದೂಗಳು, ಬೌದ್ಧರು ಮತ್ತು ಕ್ರೈಸ್ತರಿಂದ ಡೊನಾಲ್ಡ್ ಟ್ರಂಪ್‌ಗೆ ಮನವಿ !

ವಾಷಿಂಗ್ಟನ್ (ಅಮೇರಿಕಾ) – ಬಾಂಗ್ಲಾದೇಶಿ ಅಮೆರಿಕನ್ನರು, ಹಿಂದೂಗಳು, ಬೌದ್ಧರು ಮತ್ತು ಕ್ರೈಸ್ತರ ಗುಂಪು ಹೊಸದಾಗಿ ಆಯ್ಕೆಯಾದ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಮನವಿಯನ್ನು ಕಳುಹಿಸಿದೆ. ಇದರಲ್ಲಿ ಟ್ರಂಪ್ ಅವರಿಗೆ ಬಾಂಗ್ಲಾದೇಶದಲ್ಲಿರುವ ಅಲ್ಪಸಂಖ್ಯಾತ ಸಮುದಾಯಗಳ ರಕ್ಷಣೆಗಾಗಿ ಸಹಾಯ ಮಾಡುವಂತೆ ಮನವಿ ಮಾಡಿದೆ. ದೇಶದ್ರೋಹದ ಆರೋಪದಡಿಯಲ್ಲಿ ಬಂಧಿತರಾಗಿರುವ ಚಿನ್ಮಯ ಪ್ರಭು ಅವರನ್ನು ಬಿಡುಗಡೆ ಮಾಡಿಸುವ ಬೇಡಿಕೆಯನ್ನೂ ಟ್ರಂಪ್‌ ರವರಿಗೆ ಮಾಡಿದೆ.

ಈ ಮನವಿಯಲ್ಲಿ ಬಾಂಗ್ಲಾದೇಶದಲ್ಲಿರುವ ಅಲ್ಪಸಂಖ್ಯಾತ ಸಮುದಾಯಗಳ ರಕ್ಷಣೆ ಮಾಡುವುದಕ್ಕಾಗಿ ಅಲ್ಲಿ ಸಮಗ್ರ ‘ಅಲ್ಪಸಂಖ್ಯಾತರ ಸಂರಕ್ಷಣಾ ಕಾಯ್ದೆ’ಯನ್ನು ಮಾಡುವಂತೆ ಶಿಫಾರಸ್ಸು ಮಾಡಲಾಗಿದೆ. ಹಾಗೆಯೇ ಸುರಕ್ಷಿತ ವಲಯಗಳ ಸ್ಥಾಪನೆ, ಅಲ್ಪಸಂಖ್ಯಾತರಿಗಾಗಿ ಸ್ವತಂತ್ರ ಮತಕ್ಷೇತ್ರಗಳನ್ನು ಒದಗಿಸುವುದು, ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ರಕ್ಷಿಸಲು ದ್ವೇಷ ಪೂರ್ಣ ಅಪರಾಧಗಳು ಮತ್ತು ದ್ವೇಷಯುಕ್ತ ಭಾಷಣಗಳ ವಿರುದ್ಧ ಕಠಿಣ ಕಾನೂನುಗಳನ್ನು ಮಾಡುವ ಬೇಡಿಕೆಯನ್ನು ಮಾಡಿದೆ.

ಸಂಪಾದಕೀಯ ನಿಲುವು

ನಾಳೆ ಟ್ರಂಪ್ ಇವರು ಬಾಂಗ್ಲಾದೇಶದ ಹಿಂದೂಗಳನ್ನು ರಕ್ಷಿಸಿದರೆ, ಭಾರತೀಯ ಹಿಂದೂಗಳೂ ಸಂತೋಷಪಟ್ಟರೇ ಇನ್ನೊಂದು ಕಡೆ ತಮ್ಮ ಧರ್ಮದವರನ್ನು ರಕ್ಷಿಸಲು ಸಾಧ್ಯವಾಗದ್ದಕ್ಕೆ ನಾಚಿಕೆಪಡುತ್ತಾರೆ !