ಹುಡುಗಿ ಅಪ್ರಾಪ್ತೆ ಎಂಬುದನ್ನು ಪೊಲೀಸರು ನಿರಾಕರಿಸಿದರು, ಆದ್ದರಿಂದ ಆಕೆಯನ್ನು ಕರೆದುಕೊಂಡು ಹೋಗಿದ್ದ ಮತಾಂಧ ಯುವಕನಿಗೆ ಜಾಮೀನು

ಇಲ್ಲಿಯ ಅಪ್ರಾಪ್ತ ಬಾಲಕಿಯನ್ನು ಶಾಹಿದ್ ಎಂಬ ಹೆಸರಿನ ಮುಸ್ಲಿಂ ಯುವಕ ಪ್ರೇಮದ ಬಲೆಯಲ್ಲಿ ಸಿಲುಕಿಸಿ ಆಕೆಯನ್ನು ಅಪಹರಿಸಿದ್ದಾನೆ. ಈ ಪ್ರಕರಣದಲ್ಲಿ ಆತನನ್ನು ಬಂಧಿಸಿದನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಹೊರಗೆ ಬಂದ ನಂತರ ಆತ ಮತ್ತೆ ಆ ಬಾಲಕಿಯನ್ನು ಅಪಹರಿಸಿದ ಘಟನೆ ಬೆಳಕಿಗೆ ಬಂದಿದೆ.

ಮಂಗಳೂರಿನಲ್ಲಿ ಲಷ್ಕರ್-ಎ-ತೋಯಬಾ ಮತ್ತು ತಾಲಿಬಾನ್ ಬೆಂಬಲವಾಗಿ ಗೋಡೆ ಬರಹ ಪತ್ತೆ

೨೦೦೮ ರ ಮುಂಬಯಿನ ಭಯೋತ್ಪಾದಕ ದಾಳಿಯ ೧೨ ನೇ ವರ್ಷ ಪೂರ್ಣಗೊಂಡಿರುವ ಸಂದರ್ಭದಲ್ಲಿ ಲಷ್ಕರ್-ಎ-ತೋಯಬಾ ಮತ್ತು ತಾಲಿಬಾನ್ ಭಯೋತ್ಪಾದಕ ಸಂಘಟನೆಗಳ ಬೆಂಬಲವಾಗಿ ಮಂಗಳೂರಿನ ವಸತಿ ಕಟ್ಟಡವೊಂದರ ಗೋಡೆಯ ಮೇಲೆ ಪ್ರಚೋದನಕಾರಿ ಬರಹವೊಂದು ಬರೆದಿರುವ ಘಟನೆ ಬೆಳಕಿಗೆ ಬಂದಿದೆ. ಪೊಲೀಸರು ಬರೆದವರನ್ನು ಹುಡುಕುತ್ತಿದ್ದಾರೆ.

ಹಿಂದೂ ವಿರೋಧಿ ಕಾರ್ಯಕರ್ತೆ ರೆಹಾನಾ ಫಾತಿಮಾ ‘ಗೋಮಾತೆ’ ಪದ ಬಳಸುವುದನ್ನು ನಿಷೇಧಿಸಿದೆ !

‘ಗೋಮಾತೆ’ ಎಂಬ ಪದವನ್ನು ಯಾವುದೇ ಮಾಧ್ಯಮದಲ್ಲಿ ಬಳಸದಂತೆ ಕೇರಳ ಉಚ್ಚನ್ಯಾಯಾಲಯ ಹಿಂದೂದ್ವೇಷಿ ಕಾರ್ಯಕರ್ತೆ ರೆಹಾನಾ ಫಾತಿಮಾಳನ್ನು ಆದೇಶಿಸಿದೆ. ಫಾತಿಮಾ ಇನ್ನು ಮುಂದೆ ಗೋಮಾತೆಯ ಬಗ್ಗೆ ಯಾವುದೇ ಅಭಿಪ್ರಾಯ ಅಥವಾ ಟಿಪ್ಪಣೆಯನ್ನು ವ್ಯಕ್ತಪಡಿಸಲು ಸಾಧ್ಯವಾಗುವುದಿಲ್ಲ. ಫಾತಿಮಾ ಸ್ವಲ್ಪ ಸಮಯದ ಹಿಂದೆ ಗೋಮಾಂಸದಿಂದ ತಯಾರಿಸಿದ ತಿಂಡಿಯನ್ನು ‘ಗೋಮಾತಾ’ ಎಂದು ಉಲ್ಲೇಖಿಸಿದ್ದರು.

ಇಸ್ಲಾಮಿಕ್ ರಾಷ್ಟ್ರಗಳ ಸಂಘಟನೆಯ ಸಭೆಯಲ್ಲಿ ಕಾಶ್ಮೀರದ ಕುರಿತು ಚರ್ಚಿಸಲಾಗುವುದಿಲ್ಲ !

‘ಆರ್ಗನೈಜೆಶನ್ ಆಫ್ ಇಸ್ಲಾಮಿಕ್ ಕೊಆಪರೇಶನ್’ (ಒ.ಐ.ಸಿ.), ಇಸ್ಲಾಮಿ ದೇಶಗಳ ಸಂಘಟನೆಯ ಸಭೆಯಲ್ಲಿ ಕಾಶ್ಮೀರ ಕುರಿತು ಚರ್ಚಿಸಲಾಗುವುದಿಲ್ಲ. ಸಭೆಯ ಸೂಚಿಯಲ್ಲಿ ಈ ವಿಷಯವನ್ನು ಇಟ್ಟುಕೊಂಡಿಲ್ಲ. ಆದ್ದರಿಂದ ಪಾಕಿಸ್ತಾನ ಮತ್ತೊಮ್ಮೆ ಮುಜುಗರ ಉಂಟಾಗಿದೆ.

ತುಂಡುಡುಗೆಯ ಮೇಲೆ ಗಣಪತಿಯ ಚಿತ್ರಕ್ಕೆ ಬ್ರೆಜಿಲ್‌ನ ಸಂಸ್ಥೆಯಿಂದ ಕ್ಷಮಾಯಾಚನೆ !

ದಕ್ಷಿಣ ಅಮೆರಿಕಾದ ಬ್ರಾಜಿಲ್‌ನಲ್ಲಿ ಹಿಂದೂಗಳ ಸಂಘಟಿತ ವಿರೋಧದಿಂದಾಗಿ, ಇಲ್ಲಿಯ ‘ಜಾನ್ ಕೊಟ್ರೆ’ ಸಂಸ್ಥೆಯು ಪ್ರಸಾರ ಮಾಡಿದ್ದ ಗಣಪತಿಯ ವಿಡಂಬನಾತ್ಮಕ ಜಾಹೀರಾತುಗಳನ್ನು ಹಿಂಪಡೆದಿದೆ. ಈ ಜಾಹೀರಾತಿನಲ್ಲಿ ಪುರುಷರು ಮತ್ತು ಮಹಿಳೆಯರು ಗಣಪತಿಯ ಚಿತ್ರವಿರುವ ತುಂಡುಬಟ್ಟೆಗಳನ್ನು ಧರಿಸಿರುವುದನ್ನು ತೋರಿಸಲಾಗಿದೆ.

ಬೆಂಗಳೂರಿನ ೨ ಮಸೀದಿಗಳಲ್ಲಿ ಧ್ವನಿವರ್ಧಕಗಳಿಂದ ಉಂಟಾಗುವ ಶಬ್ದಮಾಲಿನ್ಯ ತಡೆದ ಬೆಂಗಳೂರು ಉಚ್ಚನ್ಯಾಯಾಲಯದ ನ್ಯಾಯವಾದಿ ಜಿ. ಎಂ. ನಟರಾಜ!

ನ್ಯಾಯವಾದಿ ನಟರಾಜ ಹಾಗೂ ಅನೇಕ ವಕೀಲರ ಕಚೇರಿಗಳು ಮಲ್ಲೇಶ್ವರಂನಲ್ಲಿದೆ. ಅಲ್ಲಿಂದ ೧ ಕಿ.ಮೀ ದೂರದಲ್ಲಿ ೨ ಮಸೀದಿಗಳಿವೆ. ಈ ಮಸೀದಿಯಲ್ಲಿ ಧ್ವನಿವರ್ಧಕದಿಂದ ಬೆಳಗ್ಗೆ ೫.೩೦ ರಿಂದ ರಾತ್ರಿ ೮.೩೦ ರ ವರೆಗೆ ೫ ಸಲ ಆಜಾನ್ ನೀಡಲಾಗುತ್ತಿದ್ದು ಶಬ್ದ ಮಾಲಿನ್ಯ ಆಗುತ್ತಿತ್ತು.

ಅಯೋಧ್ಯೆಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ‘ಮರ್ಯಾದಾ ಪುರುಷೋತ್ತಮ ಶ್ರೀರಾಮ್’ ಎಂದು ಹೆಸರು !

ಅಯೋಧ್ಯೆಯಲ್ಲಿ ನಿರ್ಮಿಸಲಾಗುವ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ‘ಮರ್ಯಾದಾ ಪುರುಷೋತ್ತಮ ಶ್ರೀರಾಮ್ ವಿಮಾನ ನಿಲ್ದಾಣ, ಅಯೋಧ್ಯಾ’ ಎಂದು ಹೆಸರಿಸುವ ಪ್ರಸ್ತಾವನೆಗೆ ಉತ್ತರ ಪ್ರದೇಶ ಸರ್ಕಾರದ ಸಂಪುಟ ಅನುಮೋದನೆ ನೀಡಿದೆ.

ಮೈಸೂರಿನಲ್ಲಿ ದಲಿತನ ಕ್ಷೌರ ಮಾಡಿದ ಕ್ಷೌರದಂಗಡಿಯ ಮಾಲೀಕನಿಗೆ ೫೦ ಸಾವಿರ ದಂಡ ಹಾಗೂ ಸಾಮಾಜಿಕ ಬಹಿಷ್ಕಾರ

ಹಲ್ಲಾರೆ ಗ್ರಾಮದಲ್ಲಿರುವ ಮಲ್ಲಿಕಾರ್ಜುನ್ ಶೆಟ್ಟಿಯವರ ಕ್ಷೌರದಂಗಡಿಯಲ್ಲಿ ದಲಿತ ವ್ಯಕ್ತಿಯೊಬ್ಬರ ಕೂದಲನ್ನು ಕತ್ತರಿಸಿದಕ್ಕೆ ಶೆಟ್ಟಿಯವರಿಗೆ ಗ್ರಾಮಸ್ಥರು ೫೦ ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ ಅದೇರೀತಿ ಇದರಿಂದಾಗಿಯೇ ಕಳೆದ ಕೆಲವು ದಿನಗಳಿಂದ ಶೆಟ್ಟಿ ಹಾಗೂ ಅವರ ಕುಟುಂಬದವರ ಸಾಮಾಜಿಕ ಬಹಿಷ್ಕಾರ ಮಾಡಿದ್ದಾರೆ. ದಲಿತರ ಕೂದಲನ್ನು ಕತ್ತರಿಸಬೇಡಿ ಎಂದು ಶೆಟ್ಟಿಯವರಿಗೆ ಮೊದಲೇ ಹೇಳಲಾಗಿತ್ತು.

‘ನೆಟ್‌ಫ್ಲಿಕ್ಸ್’ನಲ್ಲಿ ಪ್ರಸಾರವಾಗುವ ‘ಲುಡೋ’ ಚಲನಚಿತ್ರದಲ್ಲಿಯೂ ಹಿಂದೂ ದೇವತೆಗಳ ವಿಡಂಬನೆ !

ಎ ಸೂಟಬಲ್ ಬಾಯ್’ ಎಂಬ ವೆಬ್ ಸರಣಿಯು ಮುಸ್ಲಿಂ ಹುಡುಗನೊಬ್ಬ ದೇವಾಲಯದ ಆವರಣದಲ್ಲಿ ಹಿಂದೂ ಹುಡುಗಿಯನ್ನು ಚುಂಬಿಸುತ್ತಿರುವುದನ್ನು ಚಿತ್ರಿಸಿದರೆ, ದೀಪಾವಳಿಯಂದು ನೆಟ್‌ಫ್ಲಿಕ್ಸ್‌ನಲ್ಲಿ ಪ್ರದರ್ಶನಗೊಂಡ ‘ಲುಡೋ’ ಚಲನಚಿತ್ರವು ಹಿಂದೂ ದೇವತೆಗಳನ್ನು ಬಹುರೂಪಿಗಳ (ಛದ್ಮವೇಷ ಧರಿಸುವವರ) ಹಾಗಿ ಚಿತ್ರಿಸಿ ಅವಮಾನ ಮಾಡಲಾಗಿದೆ.

ಧೈರ್ಯವಿದ್ದರೆ, ಬಿಜೆಪಿ ಸರಕಾರ ಚೀನಾ ಸೈನ್ಯದ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಿ ತೋರಿಸಲಿ ! – ಅಸದುದ್ದೀನ್ ಒವೈಸಿ ಅವರ ಸವಾಲು

ಧೈರ್ಯವಿದ್ದರೆ, ಚೀನಾ ಸೈನ್ಯದ ಮೇಲೆ ‘ಸರ್ಜಿಕಲ್ ಸ್ಟ್ರೈಕ್’ ಮಾಡಿ ತೋರಿಸಲಿ. ಭಾರತದ ಭೂಪ್ರದೇಶವನ್ನು ಚೀನಾ ಸ್ವಾಧೀನಪಡಿಸಿಕೊಂಡಿರುವ ಲಡಾಖ್‌ನಲ್ಲಿ ಅಂತಹ ಧೈರ್ಯವನ್ನು ಬಿಜೆಪಿ ಏಕೆ ತೋರಿಸುತ್ತಿಲ್ಲ ಎಂದು ಎಂ.ಐ.ಎಂ.ನ ಅಧ್ಯಕ್ಷ ಮತ್ತು ಸಂಸದ ಅಸದುದ್ದೀನ್ ಒವೈಸಿ ಬಿಜೆಪಿಗೆ ಸವಾಲು ಹಾಕಿದ್ದಾರೆ. ಇಲ್ಲಿ ನಡೆದ ಮಹಾನಗರ ಪಾಲಿಕೆಯ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.