ಬಾಂಗ್ಲಾದೇಶದ ಹಿರಿಯ ಪತ್ರಕರ್ತರೊಬ್ಬರು ಮಾಹಿತಿ ನೀಡಿರುವುದಾಗಿ ಝೀ ನ್ಯೂಸ್ ವರದಿ ಮಾಡಿದೆ
ನವದೆಹಲಿ – ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದಾಳಿಯ ಹಿನ್ನೆಲೆಯಲ್ಲಿ ಹೊಸ ಮಾಹಿತಿ ಬಹಿರಂಗವಾಗಿದೆ. ಬಾಂಗ್ಲಾದೇಶದ ಮಧ್ಯಂತರ ಸರಕಾರವು ತನ್ನದೇ ಆದ ಭಯೋತ್ಪಾದಕ ಸಂಘಟನೆಯೊಂದನ್ನು ಸಿದ್ಧಪಡಿಸುತ್ತಿದೆ ಎಂದು ಬಾಂಗ್ಲಾದೇಶದ ಹಿರಿಯ ಪತ್ರಕರ್ತರೊಬ್ಬರು ತಿಳಿಸಿದ್ದಾರೆ ಎಂದು ಝೀ ನ್ಯೂಸ್ ವೆಬ್ ಸೈಟ್ ವರದಿ ಮಾಡಿದ್ದು ಆ ಹಿರಿಯ ಪತ್ರಕರ್ತರ ಹೆಸರನ್ನು ವರದಿಯಲ್ಲಿ ನೀಡಿಲ್ಲ. ಈ ಹೊಸ ಜಿಹಾದಿ ಸಂಘಟನೆಗೆ ‘ಇಸ್ಲಾಮಿಕ್ ರೆವಲ್ಯೂಷನರಿ ಆರ್ಮಿ’ (ಐ.ಆರ್. ಎ.) ಎಂದು ಹೆಸರಿಸಲಾಗಿದೆ. ಈ ಭಯೋತ್ಪಾದಕ ಸಂಘಟನೆಯನ್ನು ಇರಾನ್‌ನ ‘ಇರಾನ್ ರೆವಲ್ಯೂಷನರಿ ಗಾರ್ಡ್’ ಮಾದರಿಯಲ್ಲಿ ರೂಪಿಸಲಾಗುವುದು ಮತ್ತು ಅದರ ಭಯೋತ್ಪಾದಕರಿಗೆ ಹಿಜ್ಬುಲ್ಲಾ ಮತ್ತು ಹೌತಿ ಭಯೋತ್ಪಾದಕರಂತೆ ತರಬೇತಿ ನೀಡಲಾಗುವುದು. ತಥಾಕಥಿತ ವಿದ್ಯಾರ್ಥಿ ಮುಖಂಡರ ಹಿಡಿತದಲ್ಲಿ ಈ ಸಂಘಟನೆಯ ಹಿಡಿತವಿರಲಿದೆ ಎಂದು ಹೇಳಲಾಗುತ್ತಿದೆ . ಈ ಸಂಘಟನೆಯ ಸ್ಥಾಪನೆಗೆ 100 ಕೋಟಿ ರೂಪಾಯಿ ನಿಧಿಯನ್ನೂ ಸಹ ಮಂಜೂರು ಮಾಡಲಾಗಿದೆ. ಈ ಯೋಜನೆಗೆ ‘ಆಪರೇಷನ್ ಆಕ್ಟೋಪಸ್’ ಎಂದು ಹೆಸರಿಡಲಾಗಿದೆ.
🚨📰 A shocking claim by a senior Bangladeshi journalist, as reported by @ZeeNews alleges that the Bangladesh Govt is instrumental in creating j!h@d! terrorist organizations within the country. 🤯
This revelation is not entirely surprising, given the #MuhammadYunus led interim… pic.twitter.com/E0twDZGqgf
— Sanatan Prabhat (@SanatanPrabhat) December 29, 2024
ಈ ಯೋಜನೆ ಬಹಿರಂಗವಾಗಿದ್ದು ಹೇಗೆ ?
ಪಾಕಿಸ್ತಾನದ ಒಂದು ಹಡಗು ಕರಾಚಿಯಿಂದ ಬಾಂಗ್ಲಾದೇಶದ ಚಿತ್ತಗಾಂಗ್ ಬಂದರಿಗೆ ಆಗಮಿಸಿತ್ತು. ಈ ಹಡಗಿನಲ್ಲಿ ಅಪಾರ ಪ್ರಮಾಣದ ಸ್ಫೋಟಕಗಳಿದ್ದವು. ಈ ಹಡಗಿನ ಛಾಯಾಚಿತ್ರಗಳನ್ನು ಪ್ರಸಾರ ಮಾಡಲಾಗಿದೆ. ಈ ಸ್ಫೋಟಕಗಳನ್ನು ಕಾಂಬೋಡಿಯನ್ ಸಂಸ್ಥೆಯು ತಯಾರಿಸಿದೆ. ಬಾಂಗ್ಲಾದೇಶದ ನೌಕಾಪಡೆಯು ಈ ಹಡಗನ್ನು ತಡೆದಿತ್ತು; ಆದರೆ ಸರಕಾರದಿಂದ ಆದೇಶ ಬಂದ ನಂತರ ಈ ಹಡಗನ್ನು ಚಿತ್ತಗಾಂಗ್ ಬಂದರಿಗೆ ಹೋಗಲು ಅನುಮತಿ ನೀಡಲಾಯಿತು.
ಮಾದಕವಸ್ತು ಕಳ್ಳಸಾಗಣೆಯಿಂದ ಹಣ ಸಂಗ್ರಹಿಸಲಾಗುವುದು !
ಝೀ ನ್ಯೂಸ್ ಸುದ್ದಿಯನುಸಾರ, ಭಯೋತ್ಪಾದಕರ ನೇಮಕಕ್ಕೆ ಜಮಾತ್-ಎ-ಇಸ್ಲಾಮಿ ನಂತಹ ಕಟ್ಟರ್ ಸಂಘಟನೆಗಳನ್ನು ಬಳಸಿಕೊಳ್ಳಲಾಗುತ್ತದೆ. ಮೊದಲು, ಅಪ್ರಾಪ್ತ ವಯಸ್ಕರನ್ನು ಮದರಸಾಗಳಿಂದ ನೇಮಿಸಿಕೊಳ್ಳಲಾಗುವುದು; ನಂತರ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಿಂದ ವಿದ್ಯಾವಂತ ಯುವಕರನ್ನು ನೇಮಿಸಿಕೊಳ್ಳಲಾಗುತ್ತದೆ. ಸದ್ಯ 100 ಕೋಟಿ ರೂಪಾಯಿ ಅನುದಾನ ನೀಡಲಾಗಿದ್ದರೂ, ಮತ್ತಷ್ಟು ಭಯೋತ್ಪಾದಕ ಚಟುವಟಿಕೆಗಳಿಗೆ ಹಣ ಹೊಂದಿಸುವ ಯೋಜನೆಯೂ ಸಿದ್ಧಪಡಿಸಲಾಗಿದೆ. ಈ ಹಣ ಮಾದಕವಸ್ತು ಕಳ್ಳಸಾಗಣೆಯಿಂದ ಬರಲಿದ್ದು, ಇದಕ್ಕಾಗಿ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐ.ಎಸ್.ಐ (ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್) ಮತ್ತು ಪಾಕ್ ಸರಕಾರವು ಅಮಲು ಪದಾರ್ಥ ಸರಬರಾಜು ಮಾರ್ಗವನ್ನು ಸಿದ್ಧಪಡಿಸಿದೆ. ಮಲಕ್ಕಾ ಜಲಸಂಧಿ ಮೂಲಕ ಪಾಕಿಸ್ತಾನದಿಂದ ಬಾಂಗ್ಲಾದೇಶಕ್ಕೆ ಮಾದಕವಸ್ತು ಬರಲಿದೆ. ಬಾಂಗ್ಲಾದೇಶದಿಂದ ಫಿಲಿಪೈನ್ಸ್ ತಲುಪಿ ನಂತರ ರಷ್ಯಾ ಮೂಲಕ ಈ ವಸ್ತು ಜಪಾನ್ ತಲುಪಲಿದೆ. ಇನ್ನೊಂದು ಮಾರ್ಗವನ್ನು ಪಾಕಿಸ್ತಾನ ಸಿದ್ಧಮಾಡಿದೆ. ಮೊದಲು ಪಾಕಿಸ್ತಾನದಿಂದ ದಕ್ಷಿಣ ಆಫ್ರಿಕಾಕ್ಕೆ ಅಮಲು ಪದಾರ್ಥ ತಯಾರಿ ಔಷಧಗಳು ಹೋಗುವುದು. ಅಲ್ಲಿಂದ ಮೆಕ್ಸಿಕೋ ಮೂಲಕ ಅಮೇರಿಕಾ ಮತ್ತು ಯುರೋಪ್ ಗೆ ಮಾದಕವಸ್ತು ತಲುಪಿಸುವ ಯೋಜನೆ ಸಿದ್ಧಪಡಿಸಲಾಗಿದೆ.
ಸಂಪಾದಕೀಯ ನಿಲುವು
|