Cyber Security System : ಭಕ್ತರ ವಂಚನೆ ತಡೆಯಲು ಸೈಬರ್ ಭದ್ರತಾ ವ್ಯವಸ್ಥೆಯ ನೇಮಕ

ಪ್ರಯಾಗರಾಜ್ ಮಹಾಕುಂಭ ಮೇಳ 2025

ಪ್ರಯಾಗರಾಜ – ಮಹಾಕುಂಭ ಮೇಳಕ್ಕೆ ಬರುವ ಭಕ್ತರಿಗೆ ಆಗುವ ವಂಚನೆಯನ್ನು ತಡೆಯಲು ಯೋಗಿ ಆದಿತ್ಯನಾಥ್ ಸರಕಾರವು 56 ಸೈಬರ್ ಭದ್ರತಾ ಸಿಬ್ಬಂದಿಯ ತಂಡವನ್ನು ನಿಯೋಜಿಸಿದೆ. ಈ ತಂಡ ಸೈಬರ್ ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿದೆ. ಮಹಾಕುಂಭನಗರದ ಪ್ರತಿ ಪೊಲೀಸ್ ಠಾಣೆಗಳಲ್ಲಿ ‘ಸೈಬರ್ ಹೆಲ್ಪ್ ಡೆಸ್ಕ್’ ಸ್ಥಾಪಿಸಲಾಗಿದ್ದು, ಸೈಬರ್ ಅಪರಾಧ ಪತ್ತೆಗೆ ತಜ್ಞರನ್ನು ನೇಮಿಸಲಾಗಿದೆ.  ಇದರೊಂದಿಗೆ ವಿವಿಧ ಮಾಧ್ಯಮಗಳ ಮೂಲಕ ಸೈಬರ್ ಅಪರಾಧಗಳ ಬಗ್ಗೆ ಭಕ್ತರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಈ ತಂಡವು ನಕಲಿ ಜಾಲತಾಣಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿದೆ. ಪ್ರಸ್ತುತ, ಈ ತಂಡವು ಅಂತಹ 50 ಜಾಲತಾಣಗಳನ್ನು ಸೂಕ್ಷ್ಮವಾಗಿ ನಿಗಾ ವಹಿಸುತ್ತಿದೆ.