ಜೈಸಲಮೇರ್ (ರಾಜಸ್ಥಾನ್): ಬೋರ್ವೆಲ್ ಅಗೆಯುವಾಗ ಹೊರಬಂದ ಭಾರೀ ನೀರು !

ಭೂಜಲ ಇಲಾಖೆಯಿಂದ ಪರಿಶೀಲನೆ ಆರಂಭ

ಜೈಸಲಮೇರ್ (ರಾಜಸ್ಥಾನ್) – ನಹರಿ ಎಂಬ ಪ್ರದೇಶದ ಮೋಹನಗಡದಲ್ಲಿ ಬೋರ್ವೆಲ್ ಅಗೆಯುವಾಗ ಅನಿರೀಕ್ಷಿತವಾಗಿ ಭೂಮಿ ಕುಸಿದು ಭಾರೀ ಪ್ರಮಾಣದಲ್ಲಿ ನೀರು ಹೊರ ಬರಲು ಆರಂಭಿಸಿತು. ಭೂಮಿಯಿಂದ ೪ ಅಡಿ ಎತ್ತರ ಕಾರಂಜಿಯಂತೆ ನೀರು ಮೇಲೆ ಚಿಮ್ಮಿತು. ಇದರ ಮಾಹಿತಿ ದೊರೆಯುತ್ತಲೇ ಭೂಜಲ ಇಲಾಖೆಯ ಸಿಬ್ಬಂದಿ ಘಟನಾ ಸ್ಥಳಕ್ಕೆ ತಲುಪಿದರು. ಪ್ರಸ್ತುತ ಅಲ್ಲಿನ ೫೦೦ ಮೀಟರ್ ಸುತ್ತಲಿನ ಭೂಪ್ರದೇಶವನ್ನು ನಿಷೇಧಿಸಲಾಗಿದೆ.

ಈ ನೀರಿನ ಕಾರಂಜಿಗೆ ಸರಸ್ವತಿ ನದಿಯೇ ಮೂಲವೆಂದು ಹೇಳುವುದು ಆತುರತೆಯಾಗಿದೆ ! – ಭೂಜಲ ವಿಜ್ಞಾನಿ

ಸ್ಥಳಕ್ಕೆ ತಲುಪಿದ ಭೂಜಲ ವಿಜ್ಞಾನಿ ಎನ್.ಡಿ. ಇಂಖಿಯಾ ಅವರು ಈ ಬಗ್ಗೆ ಮಾತನಾಡಿ, ಪೌರಾಣಿಕ ಮಾನ್ಯತೆಯ ಪ್ರಕಾರ ಜೈಸಲಮೇರದಲ್ಲಿ ಶ್ರೀ ಕೃಷ್ಣನು ತನ್ನ ಸುದರ್ಶನ ಚಕ್ರದ ಮೂಲಕ ಜೈಸಲು ಎಂಬ ಬಾವಿಯನ್ನು ನಿರ್ಮಿಸಿದ್ದನು ಮತ್ತು ಅಲ್ಲಿ ಸರಸ್ವತಿ ನದಿಯ ಅಸ್ತಿತ್ವವಿದೆ ಎಂದು ನಂಬಲಾಗಿದೆ; ಆದರೆ ಪ್ರಸ್ತುತ ಈ ನೀರಿನ ಕಾರಂಜಿಯನ್ನು ಸರಸ್ವತಿ ನದಿಗೆ ಜೋಡಿಸುವುದು ಆತುರದ ನಿರ್ಧಾರವಾಗುವುದು. ಇದು ಸಮೀಕ್ಷೆಯ ವಿಷಯವಾಗಿದ್ದು ಅದರ ಕುರಿತು ಮುಂದಿನ ಮಾಹಿತಿ ನೀಡಲಾಗುವುದೆಂದು ಅವರು ಸ್ಪಷ್ಟಪಡಿಸಿದರು.

ಇದು ಸರಸ್ವತಿ ನದಿಯೇ ಆಗಿದೆ ! – ವಿಶ್ವ ಹಿಂದೂ ಪರಿಷತ್

ಈ ಘಟನೆ ಬಗ್ಗೆ ವಿಶ್ವ ಹಿಂದೂ ಪರಿಷತ್ತಿನ ರಾಷ್ಟ್ರೀಯ ವಕ್ತಾರ ವಿನೋದ್ ಬನ್ಸರ್ ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡುತ್ತಾ, ಒಂದು ಕಾಲದಲ್ಲಿ ರಾಜಸ್ಥಾನದಲ್ಲಿ ಸರಸ್ವತಿ ಎಂಬ ನದಿ ಹರಿಯುತ್ತಿತ್ತು. ದೀರ್ಘಕಾಲದವರೆಗೆ ಕಣ್ಮರೆ ಆಗಿದ್ದ ಆ ನದಿ ಇಂದು ಪ್ರಕಟವಾಗಿದೆ ಎಂದು ಹೇಳಿದ್ದಾರೆ.