ರಾಮಬನ (ಜಮ್ಮು-ಕಾಶ್ಮೀರ್) – ಜಿಲ್ಲೆಯ ರಾಜಗಢ ಪ್ರದೇಶದ ಲಿಯಾಕತ ಅಲಿ ಎಂಬ ಮುಸಲ್ಮಾನ ಕುಟುಂಬದವರ ಮನೆಯಲ್ಲಿ ಹಿಂದೂ ದೇವತೆಯ ಮೂರ್ತಿಗಳು ದೊರೆತಿವೆ.
೧. ಇಲ್ಲಿಯ ಕುಗ್ರಾಮದಲ್ಲಿ ವಾಸಿಸುವ ಲಿಯಾಕತ ಅಲಿ ಇವರಿಗೆ ೨ ತಿಂಗಳಲ್ಲಿ ೫ ಬಾರಿ ಹಾವು ಕಚ್ಚಿತು. ಅಲಿ ಇವರಿಗೆ ಬಂದಿರುವ ಸಮಸ್ಯೆ ನೋಡಿ ಅವರು ಆ ಸ್ಥಳದಲ್ಲಿ ಓರ್ವ ಪೀರ್ ನನ್ನು(ಆಧ್ಯಾತ್ಮಿಕ ಉನ್ನತ ವ್ಯಕ್ತಿಗೆ ನೀಡಿರುವ ಸ್ಥಾನ) ಕರೆಸಿದರು. ಆ ಪೀರರು, ‘ನಿಮ್ಮ ಮನೆಯಲ್ಲಿ ಏನೋ ಹೂಳಿದೆ, ಅದನ್ನು ಅಗೆಯಿರಿ’, ಎಂದು ಹೇಳಿದರು. ಲಿಯಾಕತ್ ಅಲಿ ಮನೆಯನ್ನು ಅಗೆದಾಗ ಕೆಲವೇ ಅಡಿಯಲ್ಲಿ ಅವರಿಗೆ ಮಾತಾ ವೈಷ್ಣೋ ದೇವಿ ಮೂರ್ತಿ, ಶಿವಲಿಂಗ ಮತ್ತು ಗೌತಮ ಬುದ್ಧನ ಮೂರ್ತಿ ದೊರೆತವು.
೨. ಲಿಯಾಕತ ಇವನು ಸ್ಥಳೀಯ ಜನರಿಗೆ ಹೇಳಿದಾಗ, ಆಗ ಅವರಿಗೆ ಆಶ್ಚರ್ಯವಾಯಿತು; ಕಾರಣ ಈ ಪ್ರದೇಶದಲ್ಲಿ ಎಲ್ಲಕ್ಕಿಂತ ಹೆಚ್ಚು ಮುಸಲ್ಮಾನರ ಜನಸಂಖ್ಯೆ ಇರುವುದು. ಪ್ರಸ್ತುತ ಅಲ್ಲಿ ಪೂಜೆ ನಡೆಯುತ್ತಿದೆ.
೩. ಇಲಾಖೆಯ ಜೊತೆ ಮಾತನಾಡಿದ ನಂತರ ಈ ಸ್ಥಳದ ಸುರಕ್ಷೆಗಾಗಿ ಗ್ರಾಮರಕ್ಷಕ ತಂಡದ ಸದಸ್ಯರು ನೇಮಕಗೊಳಿಸಿರುವುದು ಬೆಳಕಿಗೆ ಬಂದಿದ್ದು ಈ ಮೂರ್ತಿಗಳು ಎಷ್ಟು ಹಳೆಯದಾಗಿವೆ ಎಂದುದರ ಮಾಹಿತಿ ಕೂಡ ಪಡೆಯಲಾಗುತ್ತಿದೆ.
೪. ಇಲಾಖೆಯು ಈ ಸ್ಥಳದಲ್ಲಿ ಗಮನಹರಿಸಿ ಮಾತಾ ವೈಷ್ಣೋದೇವಿ ದರಬಾರದ ಈ ಸ್ಥಳದಲ್ಲಿ ಭವ್ಯ ದೇವಸ್ಥಾನ ಕಟ್ಟಬೇಕು, ಜೊತೆಗೆ ದರ್ಶನಕ್ಕಾಗಿ ಆಸಕ್ತಿ ಇರುವ ಭಕ್ತರು ಬಂದು ಹೋಗಿ ಮಾಡುವುದಕ್ಕಾಗಿ ಇಲ್ಲಿ ರಸ್ತೆ ಮತ್ತು ಇತರ ಅಗತ್ಯ ಸೌಲಭ್ಯಗಳು ಒದಗಿಸಬೇಕೆಂದು ಸ್ಥಳೀಯ ಹಿಂದೂ ನಾಗರೀಕರು ಹೇಳಿದ್ದಾರೆ.
ಸಂಪಾದಕೀಯ ನಿಲುವುಮಸೀದಿಯಲ್ಲಿ ಉತ್ಖಲನ ಮಾಡಿದಾಗಷ್ಟೇ ಅಲ್ಲದೆ, ಈಗ ಮುಸಲ್ಮಾನರ ಮನೆಗಳಲ್ಲಿ ಅಗೆದಾಗ ಕೂಡ ಹಿಂದೂ ದೇವತೆಗಳ ಮೂರ್ತಿಗಳು ದೊರೆಯುತ್ತಿವೆ, ಈಗ ಇದರ ಬಗ್ಗೆ ವಿರೋಧಿಸುವವರು ಏನು ಹೇಳುವರು ? |