ಸಂಬಲ್(ಉತ್ತರಪ್ರದೇಶ) – ಶಾಹಿ ಜಮಾ ಮಸೀದಿಯ ಸಮೀಕ್ಷೆಯ ಸಮಯದಲ್ಲಿ ನವೆಂಬರ್ ೨೪ ರಂದು ನಡೆದಿರುವ ಹಿಂಸಾಚಾರದ ಷಡ್ಯಂತ್ರವನ್ನು ದೀಪ್ ಸರಾಯಿ ಪ್ರದೇಶದ ನಿವಾಸಿ ಶಾರಿಕ್ ಸಾಠಾ ಎಂಬ ವ್ಯಕ್ತಿ ರಚಿಸಿರುವ ಸಂದೇಹವಿದೆ. ಇದರ ಆಧಾರದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಶಾರಿಕ್ ಸಾಠಾ ಭಾರತದ ಅತಿ ದೊಡ್ಡ ವಾಹನ ಕಳ್ಳನಾಗಿದ್ದಾನೆ. ಪ್ರಸ್ತುತ ಅವನು ನಕಲಿ ಪಾಸ್ಪೋರ್ಟ್ ಬಳಸಿ ದುಬೈಯಲ್ಲಿ ಅಡಗಿದ್ದಾನೆ. ಅವನು ಅಂತರಾಷ್ಟ್ರೀಯ ಭಯೋತ್ಪಾದಕ ದಾವುದ್ ಇಬ್ರಾಹಿಂ ಮತ್ತು ಪಾಕಿಸ್ತಾನದ ಗುಪ್ತಚರ ಇಲಾಖೆ ಐ.ಎಸ್ .ಐ. (ಇಂಟರ್ ಸರ್ವಿಸ್ ಇಂಟೆಲಿಜೆನ್ಸ್)ಗಾಗಿ ಕೆಲಸ ಮಾಡುತ್ತಿದ್ದಾನೆಂದು ಪೊಲೀಸರಿಗೆ ಸಂಶಯವಿದೆ. ಶಾರಿಕ್ ನಕಲಿ ನೋಟಿನ ಅಪರಾಧದಲ್ಲಿಯೂ ಕೂಡ ಭಾಗಿ ಆಗಿರುವ ಕುರಿತು ಪೊಲೀಸರಿಗೆ ಮಾಹಿತಿ ದೊರೆತಿದೆ.
೧. ಶಾರಿಕ್ ಸಾಠಾ ಮೇಲೆ ನಖಾಸಾ ಪೊಲೀಸ ಠಾಣೆಯಲ್ಲಿ ೧೨ ದೂರುಗಳು ದಾಖಲಿವೆ. ಪೊಲೀಸರು ಹಸನಪುರ್ ಮಾರ್ಗದಲ್ಲಿರುವ ಒಂದು ಜಮೀನು ಕೂಡ ವಶಪಡಿಸಿಕೊಂಡಿದ್ದಾರೆ ಅದರ ಬೆಲೆ ೧ ಕೋಟಿಗಿಂತಲೂ ಹೆಚ್ಚಿದೆ ಎಂದು ಹೇಳಲಾಗಿದೆ.
೨. ಪೊಲೀಸ್ ಅಧಿಕಾರಿ ಕೃಷ್ಣಕುಮಾರ್ ಬಿಸ್ನೋಯ್ ಅವರು ಈ ಬಗ್ಗೆ ಮಾತನಾಡಿ, ಸಂಬಲ್ ನಲ್ಲಿ ಹಿಂಸಾಚಾರ ಮಾಡುವುದಕ್ಕಾಗಿ ಶಾರಿಕ್ ಸಾಠಾ ಪಾಕಿಸ್ತಾನಿ ಮತ್ತು ಅಮೇರಿಕಾದ ಮದ್ದು-ಗುಂಡುಗಳನ್ನು ಕಳಿಸಿರಬಹುದೆಂದು ಅವನ ಗ್ಯಾಂಗ್ ಪತ್ತೆ ಹಚ್ಚುವುದಕ್ಕಾಗಿ ತನಿಖೆ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.
೩. ಶಾರಿಕ್ ಸಾಠಾ ದೇಶದ ವಿವಿಧ ಪ್ರದೇಶದಿಂದ ಬೆಲೆ ಬಾಳುವ ವಾಹನಗಳನ್ನು ಕಳವು ಮಾಡಿ ನೇಪಾಳಕ್ಕೆ ಕಳುಹಿಸುತ್ತಿದ್ದನು. ಅಲ್ಲಿ ಅವನ ತಂಡದ ಸದಸ್ಯರು ಕೆಲಸ ಮಾಡುತ್ತಿದ್ದರು. ಶಾರಿಕ್ ಜೈಲಿನಲ್ಲಿದ್ದಾಗಲೂ ಕೂಡ ತನ್ನ ಈ ದುಷ್ಕೃತ್ಯಗಳನ್ನು ನಡೆಸುತ್ತಿದ್ದನು. ೨೦೨೦ ರಲ್ಲಿ ಜೈಲಿನಿಂದ ಬಿಡುಗಡೆ ಆದ ನಂತರ ಅವನು ನಕಲಿ ಪಾಸ್ಪೋರ್ಟ್ ತಯಾರಿಸಿ ದುಬೈಗೆ ಪಲಾಯನ ಮಾಡಿದನು. ೨ ವರ್ಷಗಳ ಹಿಂದೆ ದೆಹಲಿ ಪೋಲಿಸರು ಶಾರಿಕ್ ನ ತಂಡದಿಂದ ೩೦೦ ವಾಹನಗಳನ್ನು ವಶಪಡಿಸಿಕೊಂಡಿದ್ದರು. ಈ ಪ್ರಕರಣದಲ್ಲಿ ಶಾರಿಕ್ ನ ಕುಟುಂಬದ ಆರೋಪಿಗಳನ್ನು ಕೂಡ ಬಂಧಿಸಲಾಗಿದೆ.
ಸಂಪಾದಕೀಯ ನಿಲುವುಪಾಕಿಸ್ತಾನದ ಜೊತೆಗೆ ಯಾವ-ಯಾವ ಭಾರತೀಯ ರೌಡಿಗಳ ಸಂಬಂಧವಿದೆ ಮತ್ತು ಅವರು ಭಾರತದಲ್ಲಿ ಯಾವ ಕೃತ್ಯಗಳು ಮಾಡಬಹುದು ಅಥವಾ ಮಾಡುತ್ತಿದ್ದಾರೆ, ಎಂಬ ಮಾಹಿತಿ ನಮ್ಮ ಗುಪ್ತಚರ ಇಲಾಖೆಗೆ ಮೊದಲೇ ಏಕೆ ಸಿಗುವುದಿಲ್ಲ ? |