Mahakumbh Mela 2025 : ಹಲವು ವರ್ಷಗಳ ಬಳಿಕ ಕುಖ್ಯಾತ ದರೋಡೆಕೋರ ಅತೀಕ್ ಅಹ್ಮದ್ ಪ್ರದೇಶದಿಂದ ಪ್ರಾರಂಭಗೊಂಡ ಹಿಂದೂಗಳ ಮೆರವಣಿಗೆ !

ಪ್ರಯಾಗರಾಜ ಮಹಾಕುಂಭ ಪರ್ವ 2025

ಪ್ರಯಾಗರಾಜ – ಕೆಲವು ತಿಂಗಳ ಹಿಂದೆ ಕೊಲ್ಲಲ್ಪಟ್ಟ ಕುಖ್ಯಾತ ದರೋಡೆಕೋರ ಅತೀಕ್ ಅಹ್ಮದ್ ನ ಕ್ಷೇತ್ರವಾದ ಚಕಿಯಾ ಪ್ರದೇಶದಿಂದ ಹಲವು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಹಿಂದೂಗಳು ಮೆರವಣಿಗೆಯನ್ನು ನಡೆಸಿದರು. ಚಕಿಯಾ ಪ್ರದೇಶದಲ್ಲಿ ಅತೀಕ್ ಅಹ್ಮದ್ ಎಷ್ಟು ಭಯದ ವಾತಾವರಣ ನಿರ್ಮಾಣ ಮಾಡಿದ್ದನೆಂದರೆ ಅಲ್ಲಿ ಹಿಂದೂಗಳಿಗೆ ಮೆರವಣಿಗೆ ತೆಗೆಯುವುದಿರಲಿ ಹಬ್ಬ-ಹರಿದಿನಗಳನ್ನು ಕೂಡ ಬಹಿರಂಗವಾಗಿ ಆಚರಿಸಲು ಅವಕಾಶವಿರಲಿಲ್ಲ. ಆ ಪ್ರದೇಶದಲ್ಲಿ ಯಾವತ್ತೂ ಕಾನೂನು ಸುವ್ಯವಸ್ಥೆ ಇರಲಿಲ್ಲ ಎಂದು ಅಲ್ಲಿನ ಜನರು ಹೇಳುತ್ತಾರೆ. ಇದೀಗ ಅದೇ ಚಕಿಯಾದಲ್ಲಿ ಎರಡು ದಿನಗಳ ಹಿಂದೆಯಷ್ಟೇ ಶ್ರೀ ಶಂಭು ಪಂಚ್ ಅಗ್ನಿ ಅಖಾಡದ ಭವ್ಯ ಮೆರವಣಿಗೆ ನಡೆದಿದ್ದರಿಂದ ಹಿಂದೂಗಳು ಸಂತಸ ವ್ಯಕ್ತಪಡಿಸಿದ್ದಾರೆ.