‘ಯೋಗಿ ಆದಿತ್ಯನಾಥರ ಮನೆಯ ಕೆಳಗೂ ಶಿವಲಿಂಗವಿದೆ, ಅಲ್ಲಿಯೂ ಅಗೆಯಬೇಕಂತೆ !’ – ಅಖಿಲೇಶ ಯಾದವ

ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ ಯಾದವ ಇವರ ಖೇದಕರ ಹೇಳಿಕೆ

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಮುಖ್ಯಮಂತ್ರಿಯ ನಿವಾಸದ ಕೆಳಗೂ ಶಿವಲಿಂಗವಿರುವುದು ನಮಗೆ ತಿಳಿದಿದೆ. ಅಲ್ಲಿಯೂ ಅಗೆಯಬೇಕು ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಹಾಗೂ ಸಂಸದ ಅಖಿಲೇಶ್ ಯಾದವ ವ್ಯಂಗ್ಯವಾಡಿದರು. ಸಧ್ಯ ಉತ್ತರ ಪ್ರದೇಶದಲ್ಲಿ ದೇವಸ್ಥಾನಗಳನ್ನು ಪತ್ತೆ ಹಚ್ಚುತ್ತಿರುವ ಹಾಗೆಯೇ ಬಾವಿ ತೋಡುತ್ತಿರುವ ಹಿನ್ನಲೆಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ. ‘ಜನರ ಗಮನ ಬೇರೆಡೆ ಸೆಳೆಯಲು ಭಾಜಪ ಉದ್ದೇಶಪೂರ್ವಕವಾಗಿ ಬೇರೆ ಬೇರೆ ವಿಚಾರಗಳನ್ನು ಮುಂದಿಡುತ್ತಿದೆ. ಭಾಜಪ ಕೈಯಲ್ಲಿ ಅಭಿವೃದ್ಧಿಯದ್ದಲ್ಲ ವಿನಾಶದ ಗೆರೆ ಇದೆ’, ಎಂದು ಟೀಕಿಸಿದರು.

ಅಖಿಲೇಶ ಯಾದವ ಅವರನ್ನು ಭಾಜಪ ಟೀಕಿಸಿದೆ. ಭಾಜಪ ವಕ್ತಾರ ರಾಕೇಶ ತ್ರಿಪಾಠಿ ಮಾತನಾಡಿ, ಸಂಭಲ್‌ನಲ್ಲಿ ಅಗೆಯುತ್ತಿರುವುದಕ್ಕೆ ಅಖಿಲೇಶ ಯಾದವ ಅವರಿಗೆ ದುಃಖವಾಗಿದೆ. 2013ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಅವರು ಸಂಪೂರ್ಣ ವ್ಯವಸ್ಥೆಯನ್ನು ಬಳಸಿಕೊಂಡು 1 ಸಾವಿರ ಟನ್ ಚಿನ್ನವನ್ನು ಅಗೆದಿದ್ದರು. ಅವರು ಚಿನ್ನವನ್ನು ಹೊರತೆಗೆಯಲು ಆಸಕ್ತಿ ಹೊಂದಿದ್ದಾರೆ; ಆದರೆ ಉತ್ಖನನದಿಂದ ಶಿವಲಿಂಗವನ್ನು ಕಂಡುಹಿಡಿಯುತ್ತಿದ್ದರೆ, ಅವರಿಗೆ ಕಷ್ಟವಾಗುತ್ತಿದೆ’, ಎಂದು ಹೇಳಿದರು.

ಸಂಪಾದಕೀಯ ನಿಲುವು

ಅಖಿಲೇಶ ಯಾದವ ಅವರ ತಂದೆ ಮುಲಾಯಂ ಸಿಂಗ ಯಾದವ ಅವರು ಮುಖ್ಯಮಂತ್ರಿಯಾಗಿದ್ದಾಗ ಅಯೋಧ್ಯೆಯಲ್ಲಿ ಕರಸೇವಕರ ಮೇಲೆ ಗುಂಡಿನ ದಾಳಿಗೆ ಆದೇಶ ನೀಡಿ ನೂರಾರು ಕರಸೇವಕರನ್ನು ಕೊಂದರು. ಅವರ ಪುತ್ರನಿಂದ ಇದಕ್ಕಿಂತ ಇನ್ನೇನು ನಿರೀಕ್ಷಿಸಬಹುದು ? ಹಿಂದೂಗಳು ಅವರನ್ನು ತಿರಸ್ಕರಿಸಿದಾಗ, ಅವರು ಮುಸ್ಲಿಮರ ಮತಗಳ ಮೇಲೆ ತಮ್ಮದೇ ಆದ ರಾಜಕೀಯ ಅಸ್ತಿತ್ವವನ್ನು ಉಳಿಸಿಕೊಳ್ಳಲು ಸೈದ್ಧಾಂತಿಕ ಸುನ್ನತಿಯನ್ನು ಮಾಡಿಕೊಂಡಿದ್ದಾರೆ !