ಹಿಂದೂ ರಾಷ್ಟ್ರದ ಗ್ರಂಥ ಕಾಲದ ಆವಶ್ಯಕತೆ ! – ಪಂಡಿತ ಧೀರೇಂದ್ರ ಕೃಷ್ಣ ಶಾಸ್ತ್ರಿ

ಹಿಂದೂ ಜನಜಾಗೃತಿ ಸಮಿತಿಯಿಂದ ಬಾಗೇಶ್ವರ ಧಾಮದ ಪ್ರಮುಖ ಪಂಡಿತ ಧೀರೇಂದ್ರ ಕೃಷ್ಣ ಶಾಸ್ತ್ರಿ ಅವರ ಭೇಟಿ

ಗ್ರಂಥ ಉಡುಗೊರೆಯಾಗಿ ನೀಡಿ ಪಂಡಿತ ದೇವೇಂದ್ರ ಕೃಷ್ಣ ಶಾಸ್ತ್ರಿ ಅವರ ಜೊತೆಗೆ ಮಾತನಾಡುತ್ತಿರುವ ಶ್ರೀ ಪ್ರಶಾಂತ ಜುವೇಕರ್

ಜಳಗಾವ(ಮಹಾರಾಷ್ಟ್ರ) – ಜಳಗಾವ ಜಿಲ್ಲೆಯಲ್ಲಿನ ಝುರಖೇಡ ನಲ್ಲಿ ಡಿಸೆಂಬರ್ ೨೬ ರಿಂದ ೩೦ರವರೆಗೆ ಬಾಗೇಶ್ವರ ಧಾಮದ ಪ್ರಮುಖ ಪಂಡಿತರಾದ ಧೀರೇಂದ್ರ ಕೃಷ್ಣ ಶಾಸ್ತ್ರಿ ಅವರ ಹರಿಕಥೆ ಮತ್ತು ದಿವ್ಯ ದರಬಾರದ ಆಯೋಜನೆ ಮಾಡಲಾಗಿದೆ. ಈ ಕಾರ್ಯಕ್ರಮದ ವೇಳೆ ಹಿಂದೂ ಅವರನ್ನು ಭೇಟಿ ಮಾಡಲು ಹೋಗಿದ್ದ ಜನಜಾಗೃತಿ ಸಮಿತಿಯ ಕಾರ್ಯಕರ್ತರು ಅವರ ಆಶೀರ್ವಾದ ಪಡೆದರು. ಸಮಿತಿಯ ವತಿಯಿಂದ ಪ್ರಕಾಶಿತವಾದ ‘ ಹಿಂದೂ ರಾಷ್ಟ್ರ’ ಎಂಬ ಗ್ರಂಥವನ್ನು ಧೀರೇಂದ್ರ ಶಾಸ್ತ್ರಿಗಳಿಗೆ ಉಡುಗೊರೆಯಾಗಿ ನೀಡಲಾಯಿತು. ಈ ಗ್ರಂಥ ನೋಡಿ ಧೀರೇಂದ್ರ ಶಾಸ್ತ್ರಿ ಅವರು, ಇಂದು ಈ ಗ್ರಂಥದ ಆವಶ್ಯಕತೆ ಇದೆ. ಇದು ಹಿಂದಿ ಭಾಷೆಯಲ್ಲಿರುವುದರಿಂದ ಇದರ ಲಾಭವಾಗುವುದು ಎಂದು ಉದ್ಘಾರ ತೆಗೆದರು. ಸಮಿತಿಯ ಕಾರ್ಯಕರ್ತರಾದ ಶ್ರೀ. ಪ್ರಶಾಂತ ಜುವೇಕರ್, ವಿನೋದ ಶಿಂಧೆ, ಧೀರಜ್ ಬೋಳೆ, ನಿಖಿಲ್ ಕದಮ ಇವರೂ ಸಹ ಉಪಸ್ಥಿತರಿದ್ದರು.