ಹುಬ್ಬಳ್ಳಿಯಲ್ಲಿ ಧಾರವಾಡ ಜಿಲ್ಲಾ ಮಟ್ಟದ ಅಧಿವೇಶನ ಭಾವಪೂರ್ಣ ವಾತಾವರಣದಲ್ಲಿ ಸಂಪನ್ನ

ಮಂಗಳುರು – ಡಿಸೆಂಬರ್ 29ರಂದು ಹುಬ್ಬಳ್ಳಿಯಲ್ಲಿ ನಡೆದ ಜಿಲ್ಲಾ ಹಿಂದೂರಾಷ್ಟ್ರ ಅಧಿವೇಶನಕ್ಕೆ ಸುಮಾರು 135 ಕ್ಕಿಂತ ಹೆಚ್ಚು ಹಿಂದತ್ವನಿಷ್ಠರು ಭಾಗವಹಿಸಿದ್ದರು. ಕಾರ್ಯಕ್ರಮವು ಶಂಖನಾದ ಮತ್ತು ವೇದಮಂತ್ರ ಪಠಣೆ, ದೀಪ ಪ್ರಜ್ವಲನೆ ಮೂಲಕ ಪ್ರಾರಂಭ ಮಾಡಲಾಯಿತು. ವ್ಯಾಸಪೀಠದಲ್ಲಿ ಶ್ರೀ. ಮಹಾದೇವ ಸಾಗರೆಕರ್, ಬ್ರಹ್ಮರ್ಷಿ ವೇ ಮೂ ಶ್ರೀ ಇಂದ್ರಾಚಾರ್ಯ್, ಶ್ರೀ. ರಾಜಣ್ಣ ಕೊರವಿ, ಕಾರ್ಪೊರೇಟರ್, ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಸಮನ್ವಯಕರಾದ ಶ್ರೀ. ಗುರುಪ್ರಸಾದ ಗೌಡ ಇವರ ಉಪಸ್ಥಿತಿ ಇತ್ತು. ಸಮಿತಿಯ ಶ್ರೀ. ಗುರುಪ್ರಸಾದ ಗೌಡ ಇವರು ಹಿಂದೂರಾಷ್ಟ್ರ ಅಧಿವೇಶನದ ಉದ್ದೇಶವನ್ನು ತಿಳಿಸಿದರು. ವಕ್ತಾರರಾದ ಶ್ರೀ. ಮಹಾದೇವ ಸಾಗರೆಕರ್ ಇವರು ಮಾತನಾಡಿ ಹಿಂದೂರಾಷ್ಟ್ರ ಸ್ಥಾಪನೆಯ ಉದ್ದೇಶ ಸಫಲವಾಗ ಬೇಕಾದರೆ ನಿಸ್ವಾರ್ಥ ಮನೋಭಾವನೆಯಿಂದ, ರಾಷ್ಟ್ರ ನಿರ್ಮಾಣಕೋಸ್ಕರ ಬಲಿಷ್ಠ ಸಂಘಟನೆಯ ಅವಶ್ಯಕತೆ ಬಗ್ಗೆ ತಿಳಿಸಿದರು.

ರಾಜಣ್ಣ ಕೊರವಿ ಇವರು ಮಾತನಾಡುತ್ತಾ ಬಾಂಗ್ಲಾದೇಶದಲ್ಲಿ ಹಿಂದೂಗಳ ಸ್ಥಿತಿ ನೋಡಿದರೆ ಭಯ ಅನ್ನಿಸುತ್ತೆ, ಭಾರತದಲ್ಲಿ ಹಿಂದೂಗಳು ಎಚ್ಚರದಿಂದ ಇರಬೇಕೆಂದು ತಿಳಿಸಿದರು. ಬ್ರಹ್ಮರ್ಷಿ ವೇ.ಮೂ. ಶ್ರೀ. ಇಂದ್ರಾಚಾರ್ಯ ಇವರು ಮಕ್ಕಳನ್ನು, ಕುಟುಂಬದವರನ್ನು ಧರ್ಮಯೋಧರನ್ನಾಗಿ ಮಾಡೋಣ, ಹಿಂದೂರಾಷ್ಟ್ರ ಸ್ಥಾಪನೆ ದಿಶೆ ಕಡೆ ನಡೆಯೋಣ ಎಂದು ತಿಳಿಸಿದರು. ಸನಾತನ ಸಂಸ್ಥೆಯ ಸೌ. ವಿದುಲಾ ಹಳದೀಪುರ ಇವರು ಮಾತನಾಡುತ್ತಾ ದೇವಸ್ಥಾನಗಳು ಧರ್ಮಶಿಕ್ಷಣ ಕೊಡುವ ಕೇಂದ್ರವಾಗಬೇಕು ಮತ್ತು ದೇವಸ್ಥಾನಗಳು ಕೇವಲ ಧಾರ್ಮಿಕ ಕೇಂದ್ರವಲ್ಲ ಅದು ಕಲೆ ಸಂಸ್ಕೃತಿ,ನ್ಯಾಯ ಅರ್ಥ ಮತ್ತು ಸಮಾಜ ಈ ಎಲ್ಲ ಸ್ತರದಲ್ಲಿ ನಮಗೆ ಕೇಂದ್ರ ಬಿಂದುಗಳಾಗಿವೆ ಎಂದರು.

ಸಮಾಜದಲ್ಲಿ ಲವ್ ಜಿಹಾದ್ ತಡೆಗಟ್ಟಲು ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜಾಗೃತಿ ಮೂಡಿಸುತ್ತಿರುವ ಸಂಘಟನೆಗಳ ಪ್ರಮುಖರು ತಮ್ಮ ಅನುಭವ ಕಥನವನ್ನು ಹಂಚಿಕೊಂಡರು ವಕ್ಫ್ ಬೋರ್ಡನ ಕರಾಳತೆ, ಹಿಂದೂರಾಷ್ಟ್ರದ ಅವಶ್ಯಕತೆ, ಹಿಂದೂರಾಷ್ಟ್ರ ಸಮನ್ವಯದ ಅವಶ್ಯಕತೆ ಮತ್ತು ಇತರ ಪ್ರಮುಖ ವಿಷಯಗಳ ಬಗ್ಗೆ ಧರ್ಮಪ್ರೇಮಿಗಳು ಹಾಗೂ ಸಂಘಟನೆಗಳ ಪ್ರಮುಖರು ತಮ್ಮ ಅನುಭವಕಥನ ಹಂಚಿಕೊಂಡರು. ಗುಂಪು ಚರ್ಚೆಯನ್ನು ಮಾಡಿ ಸಮಿತಿಯ ಕಾರ್ಯಗಳನ್ನು ವ್ಯಾಪಕ ಸ್ತರದಲ್ಲಿ ಮಾಡುವುದರ ಬಗ್ಗೆ ಚರ್ಚಿಸಲಾಯಿತು. ಈ ಅಧಿವೇಶನದಲ್ಲಿ ವಕೀಲರ, ಉದ್ಯಮಿಗಳ ಉಪಸ್ಥಿಯು ಕೂಡ ಇತ್ತು. ಕೊನೆಗೆ ಶಾಂತಿ ಮಂತ್ರದೊಂದಿಗೆ ಅಧಿವೇಶನವನ್ನು ಮುಗಿಸಲಾಯಿತು. ಕಾರ್ಯಕ್ರಮದ ಸೂತ್ರ ಸಂಚಾಲನೆಯನ್ನು ಕು. ಅನುಷಾ ಕಲ್ಯಾಣಶೆಟ್ಟಿ ಹಾಗೂ ಕು. ಪ್ರಣೀತಾ ಉಪ್ಪಾರ ಇವರು ನಡೆಸಿಕೊಟ್ಟರು. ಶ್ರೀ. ರಾಜು ಧರೆಯಣ್ಣನವರ ಇವರು ಕಾರ್ಯಕ್ರಮಕ್ಕೆ ಸಹಾಯ ಮಾಡಿದವರಿಗೆ ಅಭಾರ ವ್ಯಕ್ತ ಪಡಿಸಿದರು.