ಪ್ರಯಾಗರಾಜ್ ಮಹಾಕುಂಭ ಮೇಳ 2025
ಪ್ರಯಾಗರಾಜ್ – ವೈಷ್ಣವ ಸಂಪ್ರದಾಯಕ್ಕೆ ಸಂಬಂಧಿಸಿದ ಶ್ರೀ ಪಂಚ ದಿಗಂಬರ ಅನಿ ಅಖಾಡ, ಶ್ರೀ ಪಂಚ ನಿರ್ಮೋಹಿ ಅನಿ ಅಖಾಡ ಮತ್ತು ಶ್ರೀ ಪಂಚ ನಿರ್ವಾಣಿ ಅಖಾಡ ಈ ಮೂರು ಅನಿ ಅಖಾಡಗಳ ಧರ್ಮಧ್ವಜದ ಆರೋಹಣ ಡಿಸೆಂಬರ್ 28 ರಂದು ಬೆಳಿಗ್ಗೆ 9.30 ರಿಂದ 11.30 ಈ ಸಮಯದಲ್ಲಿ ಅವರ ಆಖಾಡಾಗಳಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಈ ಮೂರು ಆಖಾಡಾಗಳ ಮಹಾಮಂಡಳೇಶ್ವರ, ಶ್ರೀಮಹಂತ, ಮಹಂತ ಹಾಗೂ ಅನೇಕ ಸಾಧು-ಸಂತರು ಉಪಸ್ಥಿತರಿದ್ದರು. ಈ ಮೂರು ಆಖಾಡಾಗಳ ಆರಾಧ್ಯದೇವತೆ ಶ್ರೀ ಹನುಮಾನ ಆಗಿದ್ದಾನೆ.
ಪ್ರಾರಂಭದಲ್ಲಿ ಶ್ರೀ ಪಂಚ ದಿಗಂಬರ ಅನಿ ಅಖಾಡದಲ್ಲಿ ಧ್ವಜಾರೋಹಣವಾಯಿತು. ಆ ಸಮಯದಲ್ಲಿ ವೇದಮಂತ್ರೋಚ್ಚಾರದೊಂದಿಗೆ ಶ್ರೀ ಹನುಮಂತನ ಸ್ಥಾಪನೆ ಮಾಡಿ ಪೂಜೆ ಮಾಡಿ, ಆವಾಹನೆ ಮಾಡಲಾಯಿತು. ಅದರ ನಂತರ, ಶ್ರೀ ಪಂಚ ನಿರ್ವಾಣಿ ಮತ್ತು ನಂತರ ಶ್ರೀ ಪಂಚ ನಿರ್ಮೋಹಿ ಅಖಾಡದಲ್ಲಿ ಧ್ವಜಾರೋಹಣವನ್ನು ವಿಧಿವತ್ತಾಗಿ ನಡೆಸಲಾಯಿತು. ಈ ಮೂರು ಆಖಾಡಾಗಳ ಆವರಣದಲ್ಲಿ ಭವ್ಯವಾದ ಧ್ವಜಸ್ತಂಭವನ್ನು ನಿರ್ಮಿಸಿ ಅದರ ಮೇಲೆ ತಮ್ಮ ತಮ್ಮ ಆಖಾಡಾಗಳ ಧ್ವಜಾರೋಹಣ ಮಾಡಲಾಯಿತು. ಈ ಸಂದರ್ಭದಲ್ಲಿ ದಿಗಂಬರ ಅಖಾಡದ ಶ್ರೀ ಮಹಂತ ರಾಮಕೃಷ್ಣ ಶಾಸ್ತ್ರಿ ಮಹಾರಾಜ, ಮಹಾಮಂತ್ರಿ ಶ್ರೀ ವೈಷ್ಣವದಾಸಜಿ ಮಹಾರಾಜ, ನಿರ್ಮೋಹಿ ಅಖಾಡದ ಶ್ರೀ ಮಹಂತ ರಾಜೇಂದ್ರದಾಸಜಿ ಮಹಾರಾಜ, ನಿರ್ವಾಣಿ ಅಖಾಡದ ಶ್ರೀ ಮಹಂತ್ ಸಹಿತ ಮೇಳಾ ಅಧಿಕಾರಿಗಳು, ಪೊಲೀಸ್ ಆಯುಕ್ತರು ಮೊದಲಾದವರು ಉಪಸ್ಥಿತರಿದ್ದರು. ಆಖಾಡಗಳ ದೃಷ್ಟಿಯಿಂದ ಧ್ವಜಾರೋಹಣದ ನಂತರ ಮಹಾಕುಂಭ ಪರ್ವಗಳು ನಿಜವಾದ ಅರ್ಥದಿಂದ ಪ್ರಾರಂಭವಾಗುತ್ತದೆ.