ಪಾಕಿಸ್ತಾನದ ಸಿಂಧ್‌ನಲ್ಲಿ ಮತಾಂಧರಿಂದ ಹಿಂದೂ ಮನೆಗಳಿಗೆ ಬೆಂಕಿ ಹಚ್ಚಿ ಹಿಂದೂಗಳಿಗೆ ಥಳಿತ

ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಮತಾಂಧರು ಹಿಂದೂಗಳ ಮನೆಗಳಿಗೆ ಬೆಂಕಿ ಹಚ್ಚಿದ ಮತ್ತು ಪಂಜಾಬ್ ಪ್ರಾಂತ್ಯದಲ್ಲಿ ಹಿಂದೂ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆಯನ್ನು ಮಾನವ ಹಕ್ಕುಗಳ ಕಾರ್ಯಕರ್ತ ನ್ಯಾಯವಾದಿ ರಹತ್ ಆಸ್ಟಿನ್ ಬಹಿರಂಗ ಪಡಿಸಿದ್ದಾರೆ.

ಅಮೇರಿಕಾದಿಂದ ಭಯೋತ್ಪಾದಕ ಇಬ್ರಾಹಿಮ್ ಜುಬೇರ್ ಭಾರತದ ವಶಕ್ಕೆ !

ಜುಬೇರ್‌ನನ್ನು ಭಯೋತ್ಪಾದಕನಲ್ಲ ಇಂಜಿನಿಯರ್ ಆಗಿದ್ದಾನೆ ಎಂದಿತ್ತು ಭಾರತದ ಕಮ್ಯುನಿಸ್ಟ್ ವಿಚಾರದ ಮಾಧ್ಯಮಗಳು ಇದುವೇ ಕಮ್ಯುನಿಸ್ಟ್ ಮಾಧ್ಯಮದ ನಿಜವಾದ ರೂಪ ! ಇವೇ ಮಾಧ್ಯಮಗಳು ಹಿಂದೂಗಳನ್ನು ’ಕೇಸರಿ ಭಯೋತ್ಪಾದಕರು’ ಎಂದು ಕರೆಯಲು ಮಂಚೂಣಿಯಲ್ಲಿರುತ್ತವೆ !

ಪಾಕ್‌ನಲ್ಲಿ ಸಣ್ಣ ಮಕ್ಕಳ ಗಣಿತ ಪುಸ್ತಕದಲ್ಲಿ ಹಂದಿಯ ಚಿತ್ರವನ್ನು ಪ್ರಕಾಶಿದ್ದರಿಂದ ಪುಸ್ತಕದ ಮೇಲೆ ನಿಷೇಧ

ಪಾಕ್‌ನ ಪಂಜಾಬ ಪ್ರಾಂತದಲ್ಲಿಯ ಮಕ್ಕಳ ಗಣಿತ ಪುಸ್ತಕದಲ್ಲಿ ಹಂದಿಯ ಚಿತ್ರ ಪ್ರಕಾಸಿದ್ದರಿಂದ ಸರಕಾರವು ಈ ಪುಸ್ತಕವನ್ನು ನಿಷೇಧಿಸಿದೆ. ಇಸ್ಲಾಮ್ ಮತ್ತು ಪಾಕಿಸ್ತಾನದ ಸುರಕ್ಷೆಗಾಗಿ ಈ ನಿಷೇಧ ಹೇರಿದೆ, ಎಂದು ಸರಕಾರವು ಹೇಳಿದೆ. ಸರಕಾರಿ ಪುಸ್ತಕ ಮಂಡಳಿಯು, ಈ ಪುಸ್ತಕವನ್ನು ಅನುಮತಿ ಇಲ್ಲದೇ ಮಾರಾಟ ಮಾಡಲಾಗುತ್ತಿತ್ತು, ಎಂದು ಹೇಳಿದೆ.

ನೇಪಾಳದ ಹೊಸ ನಕಾಶೆಗೆ ಭಾರತದ ಆಕ್ಷೇಪ

ಲಿಪುಲೆಖ್, ಲಿಂಪಿಯಾಧುರಾ ಮತ್ತು ಕಾಲಾಪಾನಿ ಇವೆಲ್ಲವೂ ತಮ್ಮದೆಂದು ಹೇಳಿಕೊಳ್ಳುತ್ತ ಈ ಮೂರೂ ಪ್ರದೇಶಗಳನ್ನು ನೇಪಾಳವು ಪ್ರಕಟಿಸಿದ ನಕಾಶೆಯಲ್ಲಿ ನೇಪಾಳದಲ್ಲಿರುವಂತೆ ತೋರಿಸಿದೆ. ಇದನ್ನು ಭಾರತವು ಆಕ್ಷೇಪಿಸಿದೆ. ಈ ಹೊಸ ನಕಾಶೆಯಲ್ಲಿ, ನೇಪಾಳವು ಭಾರತದ ಒಟ್ಟು ೩೯೫ ಚದರ ಕಿ.ಮೀ.ದಷ್ಟು ಭೂಮಿಯನ್ನು ತನ್ನ ಗಡಿಯಲ್ಲಿ ತೋರಿಸಿದೆ.

ಚೀನಾದ ಕಂಪನಿಯು ಪಾಕಿಸ್ತಾನದಲ್ಲಿ ೬,೨೦೦ ಕೋಟಿ ರೂ. ಹೂಡಿಕೆ ಮಾಡಿ ೪ ಲಕ್ಷ ಕೋಟಿ ರೂಪಾಯಿಯ ಲಾಭಗಳಿಸಿತು !

ಚೀನಾದ ಕಂಪನಿಗಳು ಪಾಕಿಸ್ತಾನದಲ್ಲಿ ೬ ಸಾವಿರದ ೨೦೦ ಕೋಟಿ ರೂ. ಹೂಡಿಕೆ ಮಾಡಿ ೪ ಲಕ್ಷ ಕೋಟಿ ರೂಪಾಯಿಯ ಲಾಭವನ್ನು ಗಳಿಸಿರುವ ಅಂಶವು ಬೆಳಕಿಗೆ ಬಂದಿದೆ. ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್ ಖಾನ್ ಅವರು ದೇಶದಲ್ಲಿ ಹೆಚ್ಚುತ್ತಿರುವ ವಿದ್ಯುತ್ ದರಗಳ ಬಗ್ಗೆ ಪರಿಶೀಲನೆ ನಡೆಸಲು ಒಂದು ಸಮಿತಿಯನ್ನು ನೇಮಿಸಿದ್ದರು.

ಕರೋನಾದಿಂದ ಅಮೇರಿಕಾದಲ್ಲಿ ಸೈಕಲ್ ಖರೀದಿಯಲ್ಲಿ ಭಾರಿ ಹೆಚ್ಚಳ

ಕರೋನಾ ಹರಡುವುದನ್ನು ತಡೆಯಲು ಸಂಚಾರ ನಿಷೇಧ ಹೇರಿರುವುದರಿಂದ ಅಮೇರಿಕಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೈಕಲ್ ಖರೀದಿಸುತ್ತಿದ್ದಾರೆ. ತನ್ನನ್ನು ಆರೋಗ್ಯವಾಗಿರಿಸಿಕೊಳ್ಳುವುದರ ಜೊತೆಗೆ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದು ಇದರ ಹಿಂದಿನ ಉದ್ದೇಶ ಎಂದು ಹೇಳಲಾಗುತ್ತದೆ.

ನೇಪಾಳ ಮತ್ತು ಭಾರತದ ನಡುವಿನ ಗಡಿವಿವಾದ ಅವರ ಆಂತರಿಕ ಪ್ರಶ್ನೆ! – ಚೀನಾ

ಕಲಾಪಾನಿ ವಿಷಯವು ಭಾರತ ಮತ್ತು ನೇಪಾಳ ನಡುವಿನ ಆಂತರಿಕ ವಿವಾದವಾಗಿದೆ. ಸ್ನೇಹಪರ ಮಾತುಕತೆಯ ಮೂಲಕ ಉಭಯ ದೇಶಗಳು ತಮ್ಮ ಭಿನ್ನಾಭಿಪ್ರಾಯಗಳನ್ನು ಬಗೆಹರಿಸುತ್ತವೆ ಎಂದು ನಾವು ಭಾವಿಸುತ್ತೇವೆ. ಪರಿಸ್ಥಿತಿ ಹದಗೆಡದಂತೆ ಅವರು ಯಾವುದೇ ರೀತಿಯ ಏಕಪಕ್ಷೀಯ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೋ ಲಿಜಿಯಾನ್ ಹೇಳಿದ್ದಾರೆ.

ವಿಶ್ವ ಆರೋಗ್ಯ ಸಂಘಟನೆಯ ಕಾರ್ಯನಿರ್ವಾಹಕ ಮಂಡಳಿಯ ಅಧ್ಯಕ್ಷರಾಗಿ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ ಇವರ ನೇಮಕ

ಕೇಂದ್ರೀಯ ಆರೋಗ್ಯಮಂತ್ರಿ ಡಾ. ಹರ್ಷವರ್ಧನ ಇವರನ್ನು ವಿಶ್ವ ಆರೋಗ್ಯ ಸಂಘಟನೆಯ ೩೪ ಸದಸ್ಯರ ಕಾರ್ಯನಿರ್ವಾಹಕ ಮಂಡಳಿಯ ಅಧ್ಯಕ್ಷ ಪದವಿಗೆ ಆಯ್ಕೆ ಮಾಡಲಾಗಿದೆ. ಅವರು ಮೇ ೨೨ ರಂದು ಉಸ್ತುವಾರಿಯನ್ನು ವಹಿಸಲಿದ್ದಾರೆ. ಪ್ರಾದೇಶಿಕ ಸಮೂಹದ ಕಾರ್ಯಕಾರಿ ಮಂಡಳಿಯ ಅಧಿಕಾರವನ್ನು ಒಂದು ವರ್ಷಕ್ಕಾಗಿ ‘ರೊಟೇಶನ್’ (ಸರದಿ) ಪದ್ದತಿಯಲ್ಲಿ ನೀಡುತ್ತಾರೆ. ಭಾರತಕ್ಕೆ ನೀಡುವ ನಿರ್ಧಾರವನ್ನು ಕೈಗೊಂಡಿದ್ದಾರೆ.

ಅಮೇರಿಕಾದಲ್ಲಿ ಪ್ರಾರ್ಥನೆಯ ಮೂಲಕ ಕೊರೋನಾ ಪೀಡಿತರ ಮೇಲೆ ಚಿಕಿತ್ಸೆ ನೀಡಲು ಯತ್ನ

ಅಮೇರಿಕಾದಲ್ಲಿನ ಭಾರತೀಯ ವಂಶದ ಡಾಕ್ಟರ್‌ಗಳಿಂದ ‘ಪ್ರಾರ್ಥನೆ ಮಾಡುವುದರಿಂದ ಕೊರೋನಾ ಪೀಡಿತರ ಆರೋಗ್ಯದಲ್ಲಿ ಸುಧಾರಣೆ ಆಗಬಹುದೇ ?, ಎಂಬ ವಿಷಯದ ಮೇಲೆ ಸಂಶೋಧನೆ ನಡೆಯುತ್ತಿದೆ. ಅದರ ಒಂದು ಭಾಗವೆಂದು ಭಾರತೀಯ ಮೂಲದ ಡಾ. ಧನಂಜಯ ಲಾಕಿರೆಡ್ಡಿಯವರು ಮೇ ೧ ರಿಂದ ‘ಪ್ರೇಯರ್ ಥೆರಪಿ ಪ್ರಾರಂಭಿಸಿದ್ದಾರೆ ಎಂದು ಹೇಳಿದ್ದಾರೆ.

ಭಾರತದ ಲಿಪುಲೆಖ, ಲಿಪಿಯಾಧುರಾ ಹಾಗೂ ಕಾಲಾಪಾನಿ ಈ ಪ್ರದೇಶಗಳು ತನ್ನದೆಂದ ನೇಪಾಳ

ಭಾರತದ ಲಿಪುಲೆಖ, ಲಿಪಿಯಾಧುರಾ ಹಾಗೂ ಕಾಲಾಪಾನಿ ಈ ಪ್ರದೇಶಗಳ ಮೇಲೆ ನೇಪಾಳ ತನ್ನದೆಂದು ಹೇಳಿಗೆ. ಭಾರತದ ಈ ಮೂರು ಪ್ರದೇಶಗಳು ನೇಪಾಳದ್ದಾಗಿದೆ ಎಂಬ ನಕಾಶೆಯನ್ನು ನೇಪಾಳವು ಪ್ರಕಾಶಿಸಲಿದೆ. ನೇಪಾಳದ ಮಂತ್ರಿಮಂಡಳಿಯ ಸಭೆಯಲ್ಲಿ ಈ ನಿರ್ಣಯವನ್ನು ತೆಗೆಕೊಳ್ಳಲಾಯಿತು.